GOAT Trailer: ‘ಎಷ್ಟೇ ವಯಸ್ಸಾದರೂ ಸಿಂಹ ಎಂದಿಗೂ ಸಿಂಹ’: ಅಬ್ಬರಿಸಲು ಸಜ್ಜಾದ ದಳಪತಿ ವಿಜಯ್

‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾದಲ್ಲಿ ಸೈನ್ಸ್​ ಫಿಕ್ಷನ್​ ಇರಲಿದೆ. ಈ ಚಿತ್ರದಲ್ಲಿ ದಳಪತಿ ವಿಜಯ್​ ಅವರು ತಂದೆ-ಮಗನಾಗಿ ಡಬಲ್​ ರೋಲ್​ ಮಾಡಿದ್ದಾರೆ. ಈ ಎರಡೂ ಲುಕ್​ಗಳು ಟ್ರೇಲರ್​ನಲ್ಲಿ ಗಮನ ಸೆಳೆಯುತ್ತಿವೆ. ಇಂದು (ಆಗಸ್ಟ್​ 17) ಬಿಡುಗಡೆ ಆಗಿರುವ ಟ್ರೇಲರ್​ಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಮೂರು ಭಾಷೆಯಲ್ಲಿ ಟ್ರೇಲರ್​ ಬಂದಿದೆ.

GOAT Trailer: ‘ಎಷ್ಟೇ ವಯಸ್ಸಾದರೂ ಸಿಂಹ ಎಂದಿಗೂ ಸಿಂಹ’: ಅಬ್ಬರಿಸಲು ಸಜ್ಜಾದ ದಳಪತಿ ವಿಜಯ್
ದಳಪತಿ ವಿಜಯ್​
Follow us
ಮದನ್​ ಕುಮಾರ್​
|

Updated on: Aug 17, 2024 | 9:28 PM

ಕಾಲಿವುಡ್​ ಸ್ಟಾರ್​ ನಟ ದಳಪತಿ ವಿಜಯ್​ ಅವರು ಅಭಿನಯಿಸಿರುವ ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಡಬಲ್​ ಮಾಡಲು ಈಗ ಟ್ರೇಲರ್​ ಬಿಡುಗಡೆ ಆಗಿದೆ. ಈ ಟ್ರೇಲರ್​ನಲ್ಲಿ ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡಲಾಗಿದೆ. ಅಲ್ಲದೇ ದಳಪತಿ ವಿಜಯ್​ ಅವರ ಪಾತ್ರದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾದಲ್ಲಿ ದಳಪತಿ ವಿಜಯ್​ ಅವರಿಗೆ ದ್ವಿಪಾತ್ರವಿದೆ. ಟ್ರೇಲರ್​ನಲ್ಲಿ ಅವರ ಎರಡು ಪಾತ್ರಗಳ ಝಲಕ್​ ನೋಡಿದ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾದಲ್ಲಿ ಸಖತ್​ ಆ್ಯಕ್ಷನ್​ ಇರಲಿದೆ. ದಳಪತಿ ವಿಜಯ್ ಅವರು ಯುವಕನಾಗಿ ಮತ್ತು ವಯಸ್ಸಾದ ವ್ಯಕ್ತಿಯಾಗಿ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ. ಟ್ರೇಲರ್​ನಲ್ಲಿ ಒಂದು ಡೈಲಾಗ್​ ಗಮನ ಸೆಳೆದಿದೆ. ‘ಎಷ್ಟೇ ವಯಸ್ಸಾದರೂ ಸಿಂಹ ಎಂದಿಗೂ ಸಿಂಹ’ ಎಂದು ದಳಪತಿ ವಿಜಯ್​ ಅವರನ್ನು ಹೊಗಳಲಾಗಿದೆ. ಟ್ರೇಲರ್​ನಿಂದಾಗಿ ಸಿನಿಮಾ ಮೇಲಿನ ಹೈಪ್​ ಜಾಸ್ತಿ ಆಗಿದೆ.

ವೆಂಕಟ್​ ಪ್ರಭು ಅವರು ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಭುದೇವ, ಪ್ರಶಾಂತ್​, ಅಜ್ಮಲ್​ ಅಮೀರ್​, ಜಯರಾಂ, ಸ್ನೇಹಾ, ಮೀನಾಕ್ಷಿ ಚೌದರಿ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ಡ ಪರದೆ ಮೇಲೆ ದಳಪತಿ ವಿಜಯ್​ ಅವರ ಯಂಗ್​ ಲುಕ್​ ನೋಡಲು ಫ್ಯಾನ್ಸ್​ ಕಾತರರಾಗಿದೆ. ಆಧುನಿಕ ತಂತ್ರಜ್ಞಾನ ಸಹಾಯದಿಂದ ಈ ಲುಕ್​ ಪ್ರಯತ್ನಿಸಲಾಗಿದೆ. ಟ್ರೇಲರ್​ ನೋಡಿದ ಅನೇಕರು ಈ ಲುಕ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚಿಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ಡ್ಯಾನ್ಸ್ ವಿಚಾರದಲ್ಲಿ ಟ್ರೋಲ್​ ಆದ ದಳಪತಿ ವಿಜಯ್; ಇದಕ್ಕೆಲ್ಲ ಕಾರಣ ಕೀರ್ತಿ ಸುರೇಶ್​

ಸೆಪ್ಟೆಂಬರ್​ 5ರಂದು ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಚಿತ್ರ ಬಿಡುಗಡೆ ಆಗಲಿದೆ. ತಮಿಳಿನ ಈ ಸಿನಿಮಾ ತೆಲುಗು ಮತ್ತು ಹಿಂದಿಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಮೂರು ಭಾಷೆಯಲ್ಲಿ ಟ್ರೇಲರ್​ ಅನಾವರಣ ಮಾಡಲಾಗಿದೆ. ಹಿಂದಿ ಸಿನಿಮಾ ಪ್ರೇಕ್ಷಕರು ಕೂಡ ಈ ಟ್ರೇಲರ್​ ನೋಡಿ ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಸಿನಿಮಾದ ಟ್ರೇಲರ್​ ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರದ ಮೇಕಿಂಗ್​ ಕ್ವಾಲಿಟಿ ಹೇಗಿದೆ ಎಂಬುದರ ಝಲಕ್​ ಈ ಟ್ರೇಲರ್​ನಲ್ಲಿ ಕಾಣಿಸಿದೆ. 24 ಗಂಟೆಯೊಳಗೆ ಮೂರು ಭಾಷೆಯಲ್ಲಿ ಎಷ್ಟು ವೀಕ್ಷಣೆ ಆಗಲಿದೆ ಎಂದು ತಿಳಿಯಲು ಸಿನಿಪ್ರಿಯರು ಯೂಟ್ಯೂಬ್ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ