ಹೋಟೆಲ್ ಹೊರಗೆ ವಿಜಯ್ ಹೆಸರು ಕೂಗಿದ ಫ್ಯಾನ್ಸ್; ‘ದಳಪತಿ’ ಮಾಡಿದ್ದೇನು ನೋಡಿ

|

Updated on: Mar 21, 2024 | 7:30 AM

ಹೋಟೆಲ್ ಹೊರ ಭಾಗದಲ್ಲಿ ಫ್ಯಾನ್ಸ್ ವಿಜಯ್ ಅವರ ಹೆಸರನ್ನು ಕೂಗುತ್ತಿದ್ದರು. ಈ ವೇಳೆ ಕೈ ಬೀಸಿ ನಿಮ್ಮತ್ತ ಬರುತ್ತಿದ್ದೇನೆ ಎನ್ನುವ ಸೂಚನೆಯನ್ನು ಅವರು ನೀಡಿದರು. ನಂತರ ಹೋಗಿ ಫ್ಯಾನ್ಸ್​ನ ಅವರು ಭೇಟಿ ಮಾಡಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಹೋಟೆಲ್ ಹೊರಗೆ ವಿಜಯ್ ಹೆಸರು ಕೂಗಿದ ಫ್ಯಾನ್ಸ್; ‘ದಳಪತಿ’ ಮಾಡಿದ್ದೇನು ನೋಡಿ
ವಿಜಯ್
Follow us on

ದಳಪತಿ ವಿಜಯ್ (Thalapathy Vijay) ಅವರು 14 ವರ್ಷಗಳ ಬಳಿಕ ಸಿನಿಮಾ ಶೂಟಿಂಗ್​ಗಾಗಿ ಕೇರಳಕ್ಕೆ ತೆರಳಿದ್ದಾರೆ. ಅಲ್ಲಿ ಅವರನ್ನು ಆರಾಧಿಸುವ ಅನೇಕರು ಇದ್ದಾರೆ. ವಿಜಯ್ ಉಳಿದುಕೊಂಡ ಹೋಟೆಲ್ ಹೊರ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಈ ವೇಳೆ ಅವರು ಅವರು ಹೊರ ಬಂದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರದ ಶೂಟ್​ನಲ್ಲಿ ಅವರು ಬ್ಯುಸಿ ಇದ್ದಾರೆ.

ಹೋಟೆಲ್ ಹೊರ ಭಾಗದಲ್ಲಿ ಫ್ಯಾನ್ಸ್ ವಿಜಯ್ ಅವರ ಹೆಸರನ್ನು ಕೂಗುತ್ತಿದ್ದರು. ಈ ವೇಳೆ ಕೈ ಬೀಸಿ ನಿಮ್ಮತ್ತ ಬರುತ್ತಿದ್ದೇನೆ ಎನ್ನುವ ಸೂಚನೆಯನ್ನು ಅವರು ನೀಡಿದರು. ನಂತರ ಹೋಗಿ ಫ್ಯಾನ್ಸ್​ನ ಅವರು ಭೇಟಿ ಮಾಡಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ವಿಜಯ್ ಅವರನ್ನು ಕಣ್ತುಂಬಿಕೊಂಡ ಕೇರಳದ ಮಂದಿ ಭರ್ಜರಿ ಸಂತೋಷಗೊಂಡರು.

ಮತ್ತೊಂದು ವಿಡಿಯೋದಲ್ಲಿ ಶೂಟಿಂಗ್ ಸೆಟ್​​ನ ಹೊರಗೆ ವಿಜಯ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅಲ್ಲೇ ಇದ್ದ ವಾಹನ ಏರಿ ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಅಭಿಮಾನಿಗಳ ಜೊತೆ ಅವರು ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ಈ ವಿಡಿಯೋಗೆ ಸಾವಿರಾರು ಫ್ಯಾನ್ಸ್ ಹಾರ್ಟ್​ ಎಮೋಜಿ ಹಾಕಿದ್ದಾರೆ.

ದಳಪತಿ ವಿಜಯ್ ವಿಡಿಯೋ..

2010ರ ಸಂದರ್ಭದಲ್ಲಿ ಶೂಟಿಂಗ್​ಗಾಗಿ ವಿಜಯ್ ಕೇರಳಕ್ಕೆ ಬಂದಿದ್ದರು. ‘ಕಾವಲನ್’ ಸಿನಿಮಾದ ಶೂಟಿಂಗ್ ಕೇರಳದಲ್ಲಿ ನಡೆದಿತ್ತು. ಈ ವೇಳೆ ಅವರು ಕೇರಳದಲ್ಲಿ ಇದ್ದರು. ಆ ಬಳಿಕ ಅವರ ಯಾವ ಸಿನಿಮಾದ ಶೂಟಿಂಗ್ ಕೂಡ ಕೇರಳದಲ್ಲಿ ನಡೆದಿರಲಿಲ್ಲ. ಈಗ ಅವರನ್ನು ನೋಡಿ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡಗೆ ಕಿಸ್ ಮಾಡಿ ಥ್ಯಾಂಕ್ಸ್ ಹೇಳಿದ ಶಾಹಿದ್ ಕಪೂರ್

ವಿಜಯ್ ಅವರ ನಟನೆಯ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗಿದೆ. ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭುದೇವ, ಮೀನಾಕ್ಷಿ ಚೌಧರಿ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ