
ತಮಿಳುನಾಡಿನ ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ (Vijay) ರಾಜಕೀಯದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಅವರು ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಚುನಾವಣೆಗೆ ಮುನ್ನವೇ ಅವರ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದು ವಿಜಯ್ ಅವರಿಗೆ ವೈಯಕ್ತಿಕವಾಗಿ ದೊಡ್ಡ ಮುಜುಗರ ತಂದಿತ್ತು. ತ್ರಿಷಾ ಜೊತೆಗಿನ ಸಂಬಂಧದ ಕಾರಣಕ್ಕೆ ಸಂಗೀತಾ ಈ ರೀತಿ ಮಾಡಿದ್ದರು ಎಂದು ಹೇಳಲಾಗುತ್ತಾ ಇದೆ. ಈಗ ಒಂದು ಮುಖ್ಯ ಬೆಳವಣಿಗೆ ನಡೆದಿದೆ.
ವಿಜಯ್ ಹಾಗೂ ಸಂಗೀತಾ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಕಾರಣದಿಂದ ವಿಜಯ್ ಮತ್ತು ಅವರ ಮಗ ಜೇಸನ್ ಸಂಜಯ್ ಸಂಬಂಧ ಹಾಳಾಗಿದೆ ಎನ್ನಲಾಗಿತ್ತು. ಹೆತ್ತವರ ವಿಚ್ಛೇದನದ ವಿಷಯದಲ್ಲಿ ಸಂಜಯ್ ತಂದೆಯ ಮೇಲೆ ತೀವ್ರ ಕೋಪಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಷ್ಟೇ ಅಲ್ಲದೆ ಸಂಜಯ್ ತಮ್ಮ ತಂದೆಯ ಮನೆಯಲ್ಲಿ ಇರದೆ ಬೇರೆ ಕಡೆ ವಾಸಿಸುತ್ತಿದ್ದಾರೆ ಎನ್ನಲಾಗಿತ್ತು.
ಆದರೆ ಈ ಎಲ್ಲ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಜೇಸನ್ ಸಂಜಯ್ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ನಟ ಜೆಮಿನಿ ಮಣಿ ಅವರ ಮಗನ ಜೊತೆ ಸಂಜಯ್ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ತಂದೆಯ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಿದ್ದಾರೆ. ತಂದೆ ವಿಜಯ್ ತಮ್ಮನ್ನು ಶಾಲೆಗೆ ಪಿಕ್ ಮಾಡಲು ಬರುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾವು ಜೊತೆಯಾಗಿ ಕಳೆದ ಒಳ್ಳೆಯ ಸಮಯವನ್ನು ಸಂಜಯ್ ಹಂಚಿಕೊಂಡಿದ್ದಾರೆ.
Enamo jason vaaya thorandha thalapathy gaali nu sonanga…
Inga thangam jason vijay anna mela evlo paasam vachirukanu teriyudhu ❤️ pic.twitter.com/oTOLgLJ08K
— 𝓓𝓸𝓵𝓵𝔂 🤍 (@dollybiblio) June 30, 2026
ತಂದೆಯ ಬಗ್ಗೆ ಮಾತನಾಡುವಾಗ ಸಂಜಯ್ ಮುಖದಲ್ಲಿ ಸಕಾರಾತ್ಮಕ ಭಾವನೆ ಇತ್ತು. ಇದು ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ತಂದೆ-ಮಗನ ಮಧ್ಯೆ ಭಿನ್ನಾಭಿಪ್ರಾಯ ಇದ್ದಿದ್ದರೆ ಅದು ಸಂಜಯ್ ಮುಖದಲ್ಲಿ ತಿಳಿಯುತ್ತಿತ್ತು ಅಥವಾ ಸಂಜಯ್ ತಂದೆಯ ಬಗ್ಗೆ ಹೇಳುತ್ತಲೇ ಇರಲಿಲ್ಲ. ಆದರೆ ಸಂಜಯ್ ತಮ್ಮ ತಂದೆಯ ಬಗ್ಗೆ ತುಂಬಾ ಪ್ರೀತಿ ಮತ್ತು ಗೌರವದಿಂದ ಮಾತನಾಡಿದ್ದಾರೆ.
ಇದನ್ನೂ ಓದಿ: ವಿಜಯ್ ಹೆಸರು ಕೈ ಬಿಡಲು ಮುಂದಾದ ಮಗ ಜೇಸನ್; ದೊಡ್ಡ ನಿರ್ಧಾರ
ವಿಜಯ್ ಅವರು ಸಾರ್ವಜನಿಕವಾಗಿ ದೊಡ್ಡ ಸೂಪರ್ ಸ್ಟಾರ್ ಆಗಿರಬಹುದು. ಆದರೆ ಅವರು ಯಾವಾಗಲೂ ತಮ್ಮ ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಮಗ ಸಂಜಯ್ ಆಡಿರುವ ಮಾತುಗಳೇ ಇದಕ್ಕೆ ಸಾಕ್ಷಿ. ಈ ಮೂಲಕ ಇಬ್ಬರ ನಡುವಿನ ಸಂಬಂಧದ ಬಗ್ಗೆ ಬರುತ್ತಿದ್ದ ಗಾಳಿಸುದ್ದಿಗಳಿಗೆ ಪೂರ್ಣವಿರಾಮ ಬಿದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.