
ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿರುವ ‘ದಿ ಫ್ಯಾಮಿಲಿ ಮ್ಯಾನ್ 3’ (Family Man 3) ಸರಣಿ ನವೆಂಬರ್ 21ರಿಂದ ಪ್ರಸಾರ ಆರಂಭಿಸಲಿದೆ. ಈ ಸರಣಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಸರಣಿಯು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಾಣಲಿದೆ. ಹೀಗಿರುವಾಗಲೇ ಕಥಾ ನಾಯಕ ಶ್ರೀಕಾಂತ್ ತಿವಾರಿ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಮೊದಲ ಎರಡು ಸರಣಿಯಲ್ಲಿ ಭಿನ್ನ ಪಾತ್ರಗಳನ್ನು ಮಾಡಿದ್ದ ಅವರು, ಇಲ್ಲಿಯೂ ಬೇರೆಯದೇ ರೀತಿಯ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಶ್ರೀಕಾಂತ್ ತಿವಾರಿ (ಮನೋಜ್ ಬಾಜ್ಪಾಯಿ) ಪಕ್ಕಾ ಮಧ್ಯಮ ವರ್ಗದ ವ್ಯಕ್ತಿ. ಆತನಿಗೆ ಕುಟುಂಬವೇ ಎಲ್ಲ. ಈತ ಕೆಲಸ ಮಾಡೋದು ಟಾಸ್ಕ್ನಲ್ಲಿ. ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ರೀತಿಯೇ ‘ಟಾಸ್ಕ್’ ಎಂಬ ಸಂಸ್ಥೆಯನ್ನು ಇಲ್ಲಿ ಸೃಷ್ಟಿಸಲಾಗಿದೆ. ಇದು ಕಾಲ್ಪನಿಕ ಭಯೋತ್ಪಾದನಾ ನಿಗ್ರಹ ಘಟಕ ಆಗಿದೆ. ಮೊದಲ ಹಾಗೂ ಎರಡನೇ ಸರಣಿಯಲ್ಲಿ ಈ ವಿಚಾರವನ್ನು ಶ್ರೀಕಾಂತ್ ಗುಟ್ಟಾಗಿಯೇ ಇಟ್ಟಿರುತ್ತಾನೆ.
ಶ್ರೀಕಾಂತ್ ತಿವಾರಿಗೆ ಪತ್ನಿ ಸುಚಿ ಹಾಗೂ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ. ಇದರ ಜೊತೆಗೆ ದೇಶ ಸೇವೆಯನ್ನೂ ಮಾಡಬೇಕು. ಎಲ್ಲವೂ ಸೈಲೆಂಟ್ ಆಗಿ ನಡೆಯಬೇಕು. ಏನು ಮಾಡುತ್ತಿದ್ದೇನೆ ಎಂಬ ವಿಚಾರ ಕುಟುಂಬಕ್ಕೂ ಗೊತ್ತಾಗಬಾರದು.
ಮೊದಲ ಎರಡು ಸರಣಿಯಲ್ಲಿ ಹೀಗೆ ಸಾಗಿತ್ತು. ಆದರೆ, ಎರಡನೇ ಸರಣಿಯ ಕೊನೆಯಲ್ಲಿ ಈ ವಿಚಾರ ಕುಟುಂಬದವರಿಗೆ ಗೊತ್ತಾಗುವ ಪರಿಸ್ಥಿತಿ ಬಂದಿರುತ್ತದೆ. ಈಗ ಮೂರನೇ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ತನ್ನ ಕುಟುಂಬದವರಿಗೆ ತನ್ನ ಕೆಲಸ ಏನು ಎಂಬುದನ್ನು ಹೇಳುತ್ತಾನೆ. ಹೀಗಾಗಿ, ಅಸಲಿ ಆಟ ಈಗ ಶುರುವಾಗಲಿದೆ.
ಇದನ್ನೂ ಓದಿ: ಮತ್ತೆ ಬರ್ತಿದ್ದಾನೆ ಶ್ರೀಕಾಂತ್ ತಿವಾರಿ; ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಡೇಟ್ ರಿವೀಲ್
‘ನಾನೊಬ್ಬ ಏಜೆಂಟ್’ ಎಂದರೆ ಇದಕ್ಕೆ ಉತ್ತರಿಸೋ ಶ್ರೀಕಾಂತ್ ಮಗ, ‘ಟ್ರಾವೆಲ್ ಏಜೆಂಟ್ ಅಲ್ವ’ ಎಂದು ಕೇಳುತ್ತಾನೆ. ಈ ಮೂಲಕ ಈ ಸರಣಿಯಲ್ಲೂ ಫನ್ ನಡೆಯಲಿದೆ. ಇನ್ನು ಈ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಓರ್ವ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಕೂಡ ಆಗುತ್ತಾನೆ. ಈ ವಿಚಾರದಲ್ಲೂ ಸಾಕಷ್ಟು ಟ್ವಿಸ್ಟ್ಗಳನ್ನು ನಿರೀಕ್ಷಿಸಬಹುದಾಗಿದೆ. ನವೆಂಬರ್ 21ರಂದು ಸರಣಿ ಬಿಡುಗಡೆ ಕಾಣಲಿದೆ. ಮೊದಲ ಎರಡು ಸರಣಿಯಲ್ಲಿ ಫನ್ ಡೈಲಾಗ್ಗಳು ಗಮನ ಸೆಳೆದಿದ್ದವು. ಅದು ಈಗಲೂ ಮುಂದುವರಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.