Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಕೇರಳ ಸ್ಟೋರಿ’ ಜೆಎನ್​ಯುನಲ್ಲಿ ವಿಶೇಷ ಪ್ರದರ್ಶನ, ವಿದ್ಯಾರ್ಥಿಗಳಿಂದ ಪ್ರತಿಭಟನೆ

The Kerala Story: ಜೆಎನ್​ಯುನಲ್ಲಿ ದಿ ಕೇರಳ ಸ್ಟೋರಿ ವಿಶೇಷ ಪ್ರದರ್ಶನವನ್ನು ಮಂಗಳವಾರ ಆಯೋಜಿಸಲಾಗಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳು ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

'ದಿ ಕೇರಳ ಸ್ಟೋರಿ' ಜೆಎನ್​ಯುನಲ್ಲಿ ವಿಶೇಷ ಪ್ರದರ್ಶನ, ವಿದ್ಯಾರ್ಥಿಗಳಿಂದ ಪ್ರತಿಭಟನೆ
ದಿ ಕೇರಳ ಸ್ಟೋರಿ
Follow us
ಮಂಜುನಾಥ ಸಿ.
|

Updated on: May 03, 2023 | 7:39 PM

ದಿ ಕೇರಳ ಸ್ಟೋರಿ‘ (The Kerala Story) ಸಿನಿಮಾ ಬಿಡುಗಡೆಗೆ ಮುನ್ನವೇ ವಿವಾದ ಎಬ್ಬಿಸಿದೆ. ಸಿನಿಮಾವನ್ನು ಕೇರಳ ಸರ್ಕಾರ (Kerala Governement) ಹಾಗೂ ವಿಪಕ್ಷಗಳು ಒಗ್ಗಟ್ಟಿನಿಂದ ವಿರೋಧಿಸುತ್ತಿವೆ. ಇದರ ಜೊತೆಗೆ ಹಲವು ಮುಸ್ಲಿಂ ಸಂಘಟನೆಗಳು ಸಹ ಸಿನಿಮಾದ ನಿಷೇಧಕ್ಕೆ ಒತ್ತಾಯಿಸಿವೆ. ಇತ್ತೀಚೆಗಷ್ಟೆ ಸಿನಿಮಾಕ್ಕೆ ಸಿಬಿಎಫ್​ಸಿಯು (CBFC) 10 ದೃಶ್ಯಗಳ ಕಟ್ ಸೂಚಿಸಿ ಎ ಪ್ರಮಾಣ ಪತ್ರ ನೀಡಿದೆ. ಪ್ರಮಾಣ ಪತ್ರ ನೀಡಿದ ಬೆನ್ನಲ್ಲೆ ಸಿನಿಮಾವನ್ನು ದೆಹಲಿಯ ಜವಾಹಾರ್​ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್​ಯು) (JNU) ಪ್ರದರ್ಶನ ಮಾಡಲಾಗಿದ್ದು, ಸಿನಿಮಾ ಪ್ರದರ್ಶನ ವೇಳೆ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಮಂಗಳವಾರ ಸಂಜೆ 4 ಗಂಟೆಗೆ ಜೆಎನ್​ಯುನ ಎಬಿವಿಪಿಯು ವಿಶೇಷ ಪ್ರದರ್ಶನ ಆಯೋಜಿಸಿತ್ತು. ಈ ವೇಳೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯವರು ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾನಿಲಯದ ಕನ್​ವೆಷ್ನನ್ ಸೆಂಟರ್​ನಲ್ಲಿ ವಿಶೇಷ ಶೋ ಅನ್ನು ಆಯೋಜಿಸಲಾಗಿತ್ತು. ಹಲವು ವಿದ್ಯಾರ್ಥಿಗಳು ಸಿನಿಮಾ ವೀಕ್ಷಣೆಗೆ ಬಂದಿದ್ದರು. ಆದರೆ ಈ ಸಂದರ್ಭದಲ್ಲಿ ಕನ್ವೆಶ್ವನ್ ಸೆಂಟರ್ ಹೊರಗೆ ಎಸ್​ಎಫ್​ಐ ಹಾಗೂ ಇನ್ನಿತರೆ ಕೆಲವು ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಸಿನಿಮಾವು ಆರ್​ಎಸ್​ಎಸ್ ಪ್ರೊಪಗಾಂಡಾ ಒಳಗೊಂಡಿದ್ದು ಸಿನಿಮಾವನ್ನು ಜೆಎನ್​ಯು ಕ್ಯಾಂಪಸ್​ನಲ್ಲಿ ಪ್ರದರ್ಶಿಸಬಾರದು ಎಂದು ಆಗ್ರಹಿಸಿದರು.

2014 ರಿಂದೀಚಎಗೆ ಜೆಎನ್​ಯು ಹಲವು ಕಾರಣಗಳಿಗೆ ರಾಷ್ಟ್ರಮಟ್ಟದ ಸುದ್ದಿಕೇಂದ್ರವಾಗುತ್ತಲೇ ಬಂದಿದೆ. ಅಫ್ಜಲ್ ಗುರು ಪರವಾಗಿ ಘೋಷಣೆಗಳು, ಆ ನಂತರ ಮೋದಿ ವಿರೋಧಿ ಪ್ರತಿಭಟನೆ, ಸ್ಮೃತಿ ಇರಾನಿ ವಿರುದ್ಧ ಪ್ರತಿಭಟನೆ, ಜೆಎನ್​ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಬಂಧನ ಹಾಗೂ ಬಿಡುಗಡೆ, ವಿದ್ಯಾರ್ಥಿ ಚುನಾವಣೆಗಳು, ವಿದ್ಯಾರ್ಥಿಗಳ ಮೇಲೆ ಹಲ್ಲೆ, ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ದೀಪಿಕಾ ಪಡುಕೋಣೆ ಬೆಂಬಲ ಇತ್ಯಾದಿ ವಿಷಯಗಳಿಂದಾಗಿ ಜೆಎನ್​ಯು ಆಗಾಗ್ಗೆ ಸುದ್ದಿಗೆ ಬರುತ್ತಲೇ ಇದೆ.

ಇನ್ನು ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ಕೇರಳದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೇರಳದಲ್ಲಿ ನಡೆದಿದೆ ಎನ್ನಲಾಗಿರುವ ಮತಾಂತರ ಹಾಗೂ ಯುವತಿಯರನ್ನು ತಾಲಿಬಾನಿಗಳಾಗಿ ಬದಲಾಯಿಸಿರುವ ಘಟನೆಗಳ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್​ನಲ್ಲಿ ಕೇರಳದಲ್ಲಿ 32,000 ಯುವತಿಯರನ್ನು ಬಲವಂತದ ಮತಾಂತರ ಮಾಡಲಾಗಿದೆ ಎನ್ನಲಾಗಿದೆ. ಆದರೆ ಇದನ್ನು ಕೇರಳ ಸರ್ಕಾರ, ಕೇರಳ ಕಾಂಗ್ರೆಸ್ ಹಾಗೂ ಇನ್ನಿತರೆ ಪಕ್ಷಗಳು ವಿರೋಧಿಸಿದ್ದು, ಈ ಸಿನಿಮಾವು ಕೇರಳದಲ್ಲಿ ಬಿಡುಗಡೆ ಆಗದಂತೆ ತಡೆಯಲು ಯತ್ನಿಸುತ್ತಿವೆ. ಆದರೆ ಸಿನಿಮಾದ ಬಿಡುಗಡೆಗೆ ತಡೆ ನೀಡುವಂತೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಸುದಿಪ್ತೊ ಸೇನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿನಾಯಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಇನ್ನಿತರರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮೈಸೂರಿನ ನಟರೊಬ್ಬರು ಸಹ ನಟಿಸಿದ್ದಾರೆ. ಸಿನಿಮಾಕ್ಕೆ ವಿಫುಲ್ ಅಮೃತ್ತಲ್ ಶಾ ಬಂಡವಾಳ ಹೂಡಿದ್ದಾರೆ. ಸಿನಿಮಾವು ಮೇ 5 ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ