ನಟಿ ಕೀರ್ತಿ ಸುರೇಶ್ ಅವರು ಇತ್ತೀಚೆಗೆ ಮದುವೆ ಆಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಸಾಮಾನ್ಯವಾಗಿ ಚಿತ್ರರಂಗದವರು ಚಿತ್ರರಂಗದವರನ್ನೇ ಮದುವೆ ಆಗುತ್ತಾರೆ. ಆದರೆ, ಕೀರ್ತಿ ಸುರೇಶ್ ಅವರು ತಮ್ಮ ಬಾಲ್ಯದ ಗೆಳೆಯನ ಜೊತೆ ಸಪ್ತಪದಿ ತುಳಿದಿದ್ದಾರೆ. ಆ್ಯಂಟೋನಿ ಅವರು ಕ್ರೈಸ್ತ ಧರ್ಮಕ್ಕೆ ಸೇರಿದವರದ್ದಾರಿಂದ ಅವರ ಸಂಪ್ರದಾಯದ ಪ್ರಕಾರವೂ ವಿವಾಹ ನಡೆದಿದೆ. ವಿಶೇಷ ಎಂದರೆ, ಕೀರ್ತಿ ಅವರು ಸಿಕ್ರೆಟ್ ರಿಲೇಶನ್ಶಿಪ್ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಈ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿತ್ತು. ಅದರಲ್ಲೂ ಇಂಡಸ್ಟ್ರಿಯ ಕೆಲವೇ ಕೆಲವು ಮಂದಿಗೆ ಈ ಬಗ್ಗೆ ಗೊತ್ತಿತ್ತು.
‘ಆಪ್ತ ಗೆಳೆಯರಿಗೆ ಮಾತ್ರ ನನ್ನ ಹಾಗೂ ಆ್ಯಂಟೋನಿ ಸಂಬಂಧದ ಬಗ್ಗೆ ಗೊತ್ತಿತ್ತು. ಸಮಂತಾ ಅವರಿಗೆ ಈ ವಿಚಾರ ಗೊತ್ತಿತ್ತು. ಅವರು ನನ್ನ ಪ್ರಯಾಣದ ಮೊದಲಿನಿಂದಲೂ ಇದ್ದಾರೆ. ಅಟ್ಲಿ, ದಳಪತಿ ವಿಜಯ್, ಕಲ್ಯಾಣಿ ಪ್ರಿಯದರ್ಶಿನಿ ಸೇರಿದಂತೆ ಕೆಲವೇ ಕೆಲವು ಮಂದಿಗೆ ಈ ಬಗ್ಗೆ ಗೊತ್ತಿತ್ತು’ ಎಂದು ಅವರು ಹೇಳಿದ್ದಾರೆ.
‘ಈ ವಿಚಾರ ಮೊದಲೇ ರಿವೀಲ್ ಆಗುತ್ತದೆ ಎಂದುಕೊಂಡಿದ್ದೆ. ಆದರೆ, ಹೇಗೋ ಮ್ಯಾನೆಜ್ ಮಾಡಿದೆವು. ನಾವಿಬ್ಬರೂ ನಮ್ಮ ವೈಯಕ್ತಿಕ ವಿಚಾರಗಳನ್ನು ಖಾಸಗಿ ಆಗಿ ಇಡಲು ಬಯಸುತ್ತೇವೆ. ಕೈ ಕೈ ಹಿಡಿದು ನಾವು ಓಡಾಡಿಲ್ಲ. ನಮ್ಮ ಮೊದಲ ವಿದೇಶ ಪ್ರಯಾಣ 2017ರಲ್ಲಿ ನಡೆಯಿತು. ನಾವು ಬ್ಯಾಂಕಾಕ್ಗೆ ಹೋಗಿದ್ದೆವು. ಆಗ ಗೆಳೆಯರೂ ಇದ್ದರೂ. ನಾವಿಬ್ಬರೇ ಟ್ರಿಪ್ ತೆರಳಿದ್ದು ಕೇವಲ ಎರಡು ವರ್ಷಗಳ ಹಿಂದೆ’ ಎಂದಿದ್ದಾರೆ ಕೀರ್ತಿ ಸುರೇಶ್.
ಇದನ್ನೂ ಓದಿ:ಕೀರ್ತಿ ಸುರೇಶ್ನ ದೋಸೆ ಎಂದು ಹೀಯಾಳಿಸಿದ ಬಾಲಿವುಡ್ ಮಂದಿ; ನಟಿಯ ಉತ್ತರ ಏನು?
ಕೀರ್ತಿ ಹಾಗೂ ಆ್ಯಂಟೋನಿ ಅವರದ್ದು 15 ವರ್ಷಗಳ ಪ್ರೀತಿ. ಬಾಲ್ಯದಿಂದ ಗೆಳೆಯರಾಗಿದ್ದ ಇವರು ನಂತರ ಪ್ರೀತಿಯಲ್ಲಿ ಬಿದ್ದು, ಮದುವೆಯ ಬಂಧಕ್ಕೆ ಒಳಗಾದರು. ಆ್ಯಂಟೋನಿ ದುಬೈನಲ್ಲಿ ಕೆಲಸ ಹೊಂದಿದ್ದು, ಕೊಚ್ಚಿಯಿಂದಲೇ ಕೆಲಸ ಮಾಡುತ್ತಾರೆ. ಅವರು ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ.
ಕೀರ್ತಿ ಸುರೇಶ್ ಪ್ರೀತಿ ಆರಂಭ ಆಗಿದ್ದು 2008-09ರ ಸಮಯದಲ್ಲಿ. ಆಗಿನ್ನೂ ಅವರು ಶಿಕ್ಷಣ ಪಡೆಯುತ್ತಿದ್ದರು. ಆ್ಯಂಟೋನಿ ಕಾಲೇಜ್ಗೆ ತೆರಳುತ್ತಿದ್ದರು. ಕೀರ್ತಿಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಖ್ಯಾತಿ ಸಿಕ್ಕಿದೆ. ಆದಾಗ್ಯೂ ಅವರ ಬದಲಾಗಿಲ್ಲ ಎಂಬುದು ವಿಶೇಷ. ಕೀರ್ತಿ ಸುರೇಶ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮಹಾನಟಿ’ ಬಳಿಕ ಅಷ್ಟು ದೊಡ್ಡ ಖ್ಯಾತಿಯನ್ನು ಮತ್ಯಾವ ಸಿನಿಮಾಗಳಿಂದಲೂ ಅವರು ಪಡೆದಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ