ಕೀರ್ತಿ ಸುರೇಶ್ನ ದೋಸೆ ಎಂದು ಹೀಯಾಳಿಸಿದ ಬಾಲಿವುಡ್ ಮಂದಿ; ನಟಿಯ ಉತ್ತರ ಏನು?
Keerthy Suresh: ಬಾಲಿವುಡ್ನಲ್ಲಿ ಪಾಪರಾಜಿಗಳು ಕೀರ್ತಿ ಸುರೇಶ್ ಅವರನ್ನು ಅವಮಾನಿಸಿದ ಆರೋಪ ಕೇಳಿಬಂದಿದೆ. ಅವರನ್ನು ‘ಕೃತಿ’ ಮತ್ತು ‘ದೋಸೆ’ ಎಂದು ಕರೆದ ಘಟನೆ ವಿವಾದಕ್ಕೆ ಕಾರಣವಾಗಿದೆ. ಕೀರ್ತಿ ಅವರು ಈ ಅವಮಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಕ್ಷಿಣ ಭಾರತದ ಸಿನಿಮಾ ಹಾಗೂ ಬಾಲಿವುಡ್ ಎಂಬ ಬಗ್ಗೆ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇವುಗಳ ಮಧ್ಯೆಯೂ ದಕ್ಷಿಣದ ಹೀರೋ ಹಾಗೂ ಹೀರೋಯಿನ್ಗಳು ಬಾಲಿವುಡ್ಗೆ ಹೋಗಿ ಮಿಂಚಿದರೆ, ಅಲ್ಲಿನ ಕಲಾವಿದರು ದಕ್ಷಿಣಕ್ಕೆ ಬಂದ ಉದಾಹರಣೆ ಸಾಕಷ್ಟಿದೆ. ಈಗ ನಟಿ ಕೀರ್ತಿ ಸುರೇಶ್ ಅವರು ಬಾಲಿವುಡ್ಗೆ ಹಾರಿದ್ದಾರೆ. ‘ಬೇಬಿ ಜಾನ್’ ಸಿನಿಮಾದಲ್ಲಿ ನಟಿಸಿ ಬಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಹೀಗಿರುವಾಗಲೇ ಅವರಿಗೆ ಬಾಲಿವುಡ್ನಲ್ಲಿ ಅವಮಾನ ಆಗಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಬಾಲಿವುಡ್ನಲ್ಲಿ ಪಾಪರಾಜಿ ಸಂಸ್ಕೃತಿ ವಿಶಾಲವಾಗಿದೆ. ದಕ್ಷಿಣದ ಸ್ಟಾರ್ಗಳು ಅಲ್ಲಿಗೆ ತೆರಳಿದರೂ ಸಾಕಷ್ಟು ಮಂದಿ ಅವರನ್ನು ಮುತ್ತಿಕೊಂಡು ವಿಡಿಯೋ ಹಾಗೂ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಇತ್ತೀಚೆಗೆ ಪಾಪರಾಜಿಗಳು ಕೀರ್ತಿ ಸುರೇಶ್ ಅವರ ವಿಡಿಯೋ ಸೆರೆ ಹಿಡಿದ್ದಾರೆ. ಈ ವೇಳೆ ಪಾಪರಾಜಿಗಳು ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದು ಏಂಬುದನ್ನು ನೋಡೋಣ.
ಇತ್ತೀಚೆಗೆ ಕೀರ್ತಿ ಸುರೇಶ್ ಅವರು ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡರು. ಆಗ ಪಾಪರಾಜಿಗಳು ಕೀರ್ತಿ ಸುರೇಶ್ ಅವರ ಫೋಟೋಗಳನ್ನು ಸೆರೆಹಿಡಿದರು. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಸುರೇಶ್ ಹೆಸರನ್ನು ಕೃತಿ..ಕೃತಿ ಎಂದು ಕರೆದಿದ್ದಾನೆ. ಕೃತಿ ಸನೋನ್ ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಕಾರಣಕ್ಕೆ ಹೆಸರನ್ನು ಗೊಂದಲ ಮಾಡಿಕೊಂಡ ಆ ವ್ಯಕ್ತಿ ಹೀಗೆ ಕರೆದಿರಬಹುದು ಎಂದಿಟ್ಟುಕೊಳ್ಳೋಣ.
View this post on Instagram
ಆದರೆ, ಮತ್ತೋರ್ವ ಪಾಪರಾಜಿ ಕೀರ್ತಿ ಅವರನ್ನು ‘ದೋಸೆ’ ಎಂದು ಕರೆದಿದ್ದಾನೆ. ದೋಸೆ ದಕ್ಷಿಣ ಭಾರತದ ತಿಂಡಿ. ಅಲ್ಲದೆ, ಈ ಮೊದಲು ಕೀರ್ತಿ ಅವರು ದೋಸೆ ಎಂದರೆ ನಮಗೆ ಸಖತ್ ಇಷ್ಟ ಎಂದು ಹೇಳಿದ್ದರು. ಈ ಕಾರಣಕ್ಕೋ ಏನೋ ಕೀರ್ತಿ ಅವರನ್ನು ದೋಸೆ ಎಂದು ಕರೆದು ಹೀಯಾಳಿಸಿದ್ದಾನೆ. ಆದರೆ, ಕೀರ್ತಿ ಅವರು ಇದಕ್ಕೆ ಬೇಸರ ಮಾಡಿಕೊಂಡಿಲ್ಲ. ಬದಲಿಗೆ ಸರಿಯಾದ ಉತ್ತ ನೀಡಿದ್ದಾರೆ.
ಇದನ್ನೂ ಓದಿ: ಸಮಂತಾ ಜೊತೆ ಹೋಲಿಕೆಗೊಳಗಾಗಿ ಟ್ರೋಲ್ ಆದ ಕೀರ್ತಿ ಸುರೇಶ್
‘ಕೀರ್ತಿ ದೋಸೆ ಅಲ್ಲ, ಕೀರ್ತಿ ಸುರೇಶ್. ಆದರೆ, ದೋಸೆ ಎಂದರೆ ನಂಗೆ ಇಷ್ಟ’ ಎಂದು ಕೀರ್ತಿ ಸುರೇಶ್ ಅವರು ಹೇಳಿದ್ದಾರೆ. ಸದ್ಯ ‘ಬೇಬಿ ಜಾನ್’ ಸಿನಿಮಾ ಜನರನ್ನು ಇಂಪ್ರೆಸ್ ಮಾಡಲು ವಿಫಲವಾಗಿದೆ. ಈ ಚಿತ್ರ ಐದು ದಿನಕ್ಕೆ ಕೇವಲ 28 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Mon, 30 December 24