ಬುರ್ಖಾ ಧರಿಸಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟಿ ಸ್ವಾತಿ; ಇದು ಸಿನಿಮಾ ಗಿಮಿಕ್ ಅಲ್ಲ

ಸ್ವತಃ ಸ್ವಾತಿ ಅವರೇ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಬುರ್ಖಾ ಧರಿಸಿ ರೈಲ್ವೆ ನಿಲ್ದಾಣದಲ್ಲಿ ಓಡಾಡಿದ್ದಾರೆ.

ಬುರ್ಖಾ ಧರಿಸಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟಿ ಸ್ವಾತಿ; ಇದು ಸಿನಿಮಾ ಗಿಮಿಕ್ ಅಲ್ಲ
ಸ್ವಾತಿ
Follow us
ರಾಜೇಶ್ ದುಗ್ಗುಮನೆ
|

Updated on: Jul 26, 2023 | 6:30 AM

ತೆಲುಗು, ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಫೇಮಸ್ ಆಗಿರುವ ನಟಿ ಸ್ವಾತಿ (Actress Swathi) ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. 2014ರಲ್ಲಿ ರಿಲೀಸ್ ಆಗಿ ಹಿಟ್ ಆದ ‘ಕಾರ್ತಿಕೇಯ’ (Kartikeya) ಚಿತ್ರದಲ್ಲಿ ಅವರು ನಟಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿ ಫೇಮಸ್ ಆಗಿದ್ದಾರೆ. ಈಗ ಅವರು ಬುರ್ಖಾ ಧರಿಸಿ ಬಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಇದರ ಹಿಂದಿರುವ ಕಾರಣ ಏನು ಎಂಬುದನ್ನು ಅಭಿಮಾನಿಗಳೇ ಊಹಿಸಿದ್ದಾರೆ.

ಸ್ವತಃ ಸ್ವಾತಿ ಅವರೇ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಬುರ್ಖಾ ಧರಿಸಿ ರೈಲ್ವೆ ನಿಲ್ದಾಣದಲ್ಲಿ ಓಡಾಡಿದ್ದಾರೆ. ರೈಲು ಏರಿದ ಬಳಿಕ ಅವರು ಬುರ್ಖಾ ತೆಗೆದಿದ್ದಾರೆ. ಈ ಪೋಸ್ಟ್ ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ವಿಡಿಯೋನ ಅವರು ಹಂಚಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.

2018ರಲ್ಲಿ ವಿಕಾಸ್ ವಾಸು ಹೆಸರಿನ ವ್ಯಕ್ತಿಯನ್ನು ಸ್ವಾತಿ ಮದುವೆ ಆದರು. ಮದುವೆ ಬಳಿಕ ಸ್ವಾತಿ ಸಿನಿಮಾ ರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. ಅವರ ವಿವಾಹ ನಡೆದು ಐದು ವರ್ಷ ಕಳೆದಿದೆ. ಹೀಗಿರುವಾಗಲೇ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆ ಇರುವ ಫೋಟೋಗಳನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದರಿಂದ ವಿಚ್ಛೇದನದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಈ ರೀತಿಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಅವರು ಈ ರೀತಿ ಬುರ್ಖಾ ಧರಿಸಿದ್ದಾರೆ ಎನ್ನಲಾಗುತ್ತಿದೆ.

View this post on Instagram

A post shared by Swathi (@swati194)

ಇದನ್ನೂ ಓದಿ: ಸಮಂತಾ, ನಿಹಾರಿಕಾ ಬಳಿಕ ಮತ್ತೊಂದು ನಟಿಯ ವಿಚ್ಛೇದನ? ಮತ್ತದೇ ಪ್ಯಾಟರ್ನ್​

ಸ್ವಾತಿ ಅವರು ಈ ರೀತಿಯ ಸುದ್ದಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ವಿಚ್ಛೇದನದ ಬಗ್ಗೆ ಸುದ್ದಿ ಕೇಳಿ ಬಂದಿದ್ದು ಇದೇ ಮೊದಲೇನು ಅಲ್ಲ. ಎರಡು ವರ್ಷಗಳ ಹಿಂದೆ ಸ್ವಾತಿ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದರು. ಈಗ ಮತ್ತದೇ ವಿಚಾರಕ್ಕೆ ಅವರು ಸುದ್ದಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ