ತೆಲುಗು ಚಿತ್ರರಂಗಕ್ಕೆ ಕಹಿ ಸುದ್ದಿ ಕೇಳಿಬಂದಿದೆ. ಟಾಲಿವುಡ್ (Tollywood) ನಿರ್ದೇಶಕ ಕೆ.ಎಸ್. ನಾಗೇಶ್ವರ ರಾವ್ ಅವರು ವಿಧಿವಶರಾಗಿದ್ದಾರೆ. ಶನಿವಾರ (ನ.27) ತಮ್ಮ ಊರಿನಿಂದ ಹೈದರಾಬಾದ್ಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಆಯಿತು. ಮೂರ್ಛೆ ತಪ್ಪಿದ ಕೆಲವೇ ನಿಮಿಷಗಳಲ್ಲಿ ಅವರು ನಿಧನರಾದರು ಎಂದು ವರದಿ ಆಗಿದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಸುದ್ದಿ ಕೇಳಿ ಇಡೀ ಟಾಲಿವುಡ್ ಕಂಬನಿ ಮಿಡಿದಿದೆ. ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಾಗೇಶ್ವರ ರಾವ್ (KS Nageswara Rao) ಅವರು ನಿಧನರಾಗಿರುವುದು ಎಲ್ಲರಿಗೂ ಆಘಾತ ಮೂಡಿಸಿದೆ. ಸ್ನೇಹಿತರು, ಸೆಲೆಬ್ರಿಟಿಗಳು, ಆಪ್ತರು ಮತ್ತು ಅಭಿಮಾನಿಗಳು ನಾಗೇಶ್ವರ ರಾವ್ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನಾಗೇಶ್ವರ ರಾವ್ ಅಗಲಿದ್ದಾರೆ. 1986ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ನಾಗೇಶ್ವರ ರಾವ್ ವೃತ್ತಿಜೀವನ ಆರಂಭಿಸಿದ್ದರು. ಅವರು ನಿರ್ದೇಶಿಸಿದ್ದ ಮೊದಲ ಸಿನಿಮಾ ‘ರಿಕ್ಷಾ ರುದ್ರಯ್ಯ’. ಅನೇಕ ಕಲಾವಿದರು ಮತ್ತು ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಕೀರ್ತಿ ನಾಗೇಶ್ವರ ರಾವ್ ಅವರಿಗೆ ಸಲ್ಲುತ್ತದೆ.
ಇದನ್ನೂ ಓದಿ:
‘ಅಪ್ಪು ನಿಧನದ ಸುದ್ದಿ ಕೇಳಿದಾಗ ರಾಡ್ನಿಂದ ತಲೆಗೆ ಹೊಡೆದಂತೆ ಆಯ್ತು’; ಕರಾಳ ಕ್ಷಣದ ಬಗ್ಗೆ ಶಿವಣ್ಣನ ಮಾತು
ಪುನೀತ್ ಹೊಸ ಚಿತ್ರ ‘ಲಕ್ಕಿ ಮ್ಯಾನ್’ ಶೀಘ್ರವೇ ರಿಲೀಸ್; ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್