‘ಪ್ರೀತಿನೇ ಎಲ್ಲಾ ಅಲ್ಲ, ಆದರೆ, ಪ್ರೀತಿ ಇಲ್ದೆ ಏನೂ ಇಲ್ಲ’; ತ್ರಿಷಾ ಮಾರ್ಮಿಕ ಪೋಸ್ಟ್

ನಟಿ ತ್ರಿಷಾ ಕೃಷ್ಣನ್ ವಿಜಯ್ ಜೊತೆಗಿನ ಅಕ್ರಮ ಸಂಬಂಧದ ಆರೋಪದಿಂದ ಸುದ್ದಿಯಲ್ಲಿದ್ದಾರೆ. ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ನಟಿಯೊಂದಿಗೆ ಪತಿಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ತ್ರಿಷಾ ಪ್ರೀತಿ ಕುರಿತು ಹಂಚಿಕೊಂಡ ಇನ್‌ಸ್ಟಾಗ್ರಾಮ್ ಪೋಸ್ಟ್ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ವಿಜಯ್ ಹಾಗೂ ತ್ರಿಷಾ ದಶಕಗಳಿಂದಲೂ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.

‘ಪ್ರೀತಿನೇ ಎಲ್ಲಾ ಅಲ್ಲ, ಆದರೆ, ಪ್ರೀತಿ ಇಲ್ದೆ ಏನೂ ಇಲ್ಲ’; ತ್ರಿಷಾ ಮಾರ್ಮಿಕ ಪೋಸ್ಟ್
ಅನುಷ್ಕಾ-ವಿಜಯ್

Updated on: Apr 07, 2026 | 7:39 AM

ನಟಿ ತ್ರಿಷಾ ಕೃಷ್ಣನ್ (Trisha) ಅವರು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆಗಿದ್ದು ವಿಜಯ್ ಜೊತೆಗಿನ ಗೆಳೆತನ. ವಿಜಯ್ ಹಾಗೂ ತ್ರಿಷಾ ಮಧ್ಯೆ ಅಫೇರ್ ಇದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಇದನ್ನು ಯಾರೂ ಒಪ್ಪಿಕೊಂಡಿಲ್ಲ. ಹೀಗಿರುವಾಗಲೇ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಪತಿಗೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ ತ್ರಿಷಾ ಹಂಚಿಕೊಂಡ ಸಾಲುಗಳು ಗಮನ ಸೆಳೆದಿವೆ.

ತ್ರಿಷಾ ಅವರು ತಮಿಳಿನ ಖ್ಯಾತ ನಟಿ. ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಇದೆ. ಅವರು ಕನ್ನಡದಲ್ಲಿ ಪುನೀತ್ ರಾಜ್​​ಕುಮಾರ್ ಜೊತೆ ‘ಪವರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ, ಕನ್ನಡದವರಿಗೂ ಅವರ ಪರಿಚಯ ಇದೆ. ತ್ರಿಷಾ ವಿಜಯ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರ ಬಾಂಧವ್ಯ ಚೆನ್ನಾಗಿಯೇ ಇದೆ. ಇದನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರು ಪ್ರೀತಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಪ್ರೀತಿಯೇ ಎಲ್ಲವೂ ಅಲ್ಲ, ಆದರೂ ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ’ ಎಂಬ ಸಾಲುಗಳನ್ನು ತ್ರಿಷಾ ಹಂಚಿಕೊಂಡಿದ್ದಾರೆ. ಅವರ ಇನ್​ಸ್ಟಾ ಸ್ಟೋರಿ ಗಮನ ಸೆಳೆದಿದೆ. ತ್ರಿಷಾ ಹೆಸರು ವಿಜಯ್ ಜೊತೆ ಚರ್ಚೆ ಆಗುವಾಗಲೇ ಈ ರೀತಿಯಲ್ಲಿ ಅವರು ಪೋಸ್ಟ್ ಹಾಕಿದ್ದು ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ‘ನನಗೆ ವಿಚ್ಛೆದನ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ’; ತ್ರಿಷಾ

ಸಂಗೀತಾ ಹಾಗೂ ವಿಜಯ್ ವಿವಾಹ ಆಗಿ 26 ವರ್ಷಗಳು ಕಳೆದಿವೆ. ಈಗ ಇಬ್ಬರೂ ಬೇರೆ ಆಗುತ್ತಿರುವುದು ಬೇಸರದ ಸಂಗತಿ. ಇನ್ನು ತ್ರಿಷಾ ಹಾಗೂ ವಿಜಯ್ ಸಿನಿಮಾ ವಿಷಯ ನೋಡೋದಾದರೆ ಇಬ್ಬರ ಮಧ್ಯೆ ಎರಡು ದಶಕಗಳ ಬಂಧ ಇದೆ. ‘ಗಿಲ್ಲಿ’ (2004), ‘ತಿರುಪಾಚಿ’ (2005), ‘ಆತಿ’ (2006), ‘ಕುರುವಿ’ (2008), ‘ಲಿಯೋ’ (2023) ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us