ಮತ್ತೆ ಒಂದಾಗುತ್ತಿದೆ ಸ್ಟಾರ್ ಹೀರೋ-ಡೈರೆಕ್ಟರ್ ಜೋಡಿ, 1000 ಕೋಟಿ ಸಿನಿಮಾ

Trivikram Srinivas movies: ಸೂಪರ್ ಹಿಟ್ ಆಕ್ಟರ್-ಡೈರೆಕ್ಟರ್ ಜೋಡಿಗಳಲ್ಲಿ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ ಅವರದ್ದು ಸಹ ಒಂದು. ‘ಜುಲೈ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲಾ ವೈಕುಂಟಪುರಂಲೊ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಇದೀಗ ಮತ್ತೆ ಒಂದಾಗುತ್ತಿದೆ. ಅದೂ 1000 ಕೋಟಿ ಬಜೆಟ್ ಸಿನಿಮಾ ಮೂಲಕ.

ಮತ್ತೆ ಒಂದಾಗುತ್ತಿದೆ ಸ್ಟಾರ್ ಹೀರೋ-ಡೈರೆಕ್ಟರ್ ಜೋಡಿ, 1000 ಕೋಟಿ ಸಿನಿಮಾ
Trivikram Srinivas

Updated on: Dec 24, 2025 | 1:18 PM

ನಾಯಕ-ನಾಯಕಿ ಜೋಡಿಯಂತೆ ಸ್ಟಾರ್ ಹೀರೋ-ಡೈರೆಕ್ಟರ್ ಜೋಡಿಗಳು ಸಹ ಎಲ್ಲ ಚಿತ್ರರಂಗದಲ್ಲಿಯೂ ಇವೆ. ಈ ಜೋಡಿ ಒಟ್ಟಿಗೆ ಕೆಲಸ ಆರಂಭಿಸಿದರೆಂದರೆ ಸಾಕು ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ, ನಿರೀಕ್ಷೆ ಗರಿಗೆದರುತ್ತದೆ. ಇಂಥಹಾ ಸೂಪರ್ ಹಿಟ್ ಆಕ್ಟರ್-ಡೈರೆಕ್ಟರ್ ಜೋಡಿಗಳಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ತ್ರಿವಿಕ್ರಮ್ ಅವರದ್ದು ಸಹ ಒಂದು. ‘ಜುಲೈ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲಾ ವೈಕುಂಟಪುರಂಲೊ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಇದೀಗ ಮತ್ತೆ ಒಂದಾಗುತ್ತಿದೆ. ಅದೂ 1000 ಕೋಟಿ ಬಜೆಟ್ ಸಿನಿಮಾ ಮೂಲಕ.

ಅಸಲಿಗೆ ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಅವರು ತ್ರಿವಿಕ್ರಮ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಲ್ಲು ಅರ್ಜುನ್ ತಮಿಳಿನ ನಿರ್ದೇಶಕ ಅಟ್ಲಿಗೆ ಓಕೆ ಹೇಳಿದರು. ಇತ್ತ ತ್ರಿವಿಕ್ರಮ್ ಅವರು ನಟ ವೆಂಕಟೇಶ್ ಜೊತೆಗೆ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡರು. ಅದರ ಜೊತೆಗೆ ಜೂ ಎನ್​​ಟಿಆರ್ ಜೊತೆಗೆ ‘ಮುರುಗನ್’ ಸಿನಿಮಾ ಮಾಡಲಿದ್ದಾರೆ ಎಂದು ಸಹ ಸುದ್ದಿ ಆಯ್ತು. ಆದರೆ ಇದೀಗ ತ್ರಿವಿಕ್ರಮ್ ಮತ್ತೆ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ:ಜಾಹೀರಾತು ಚಿತ್ರೀಕರಣಕ್ಕೆ ಬಂದ ಅಲ್ಲು ಅರ್ಜುನ್; ಎಂಟ್ರಿ ಹೇಗಿತ್ತು ನೋಡಿ..

ಅಲ್ಲು ಅರ್ಜುನ್ ಜೊತೆಗೆ ಪೌರಾಣಿಕ ಕತೆಯೊಂದನ್ನು ಸಿನಿಮಾ ಮಾಡಲಿದ್ದಾರಂತೆ ತ್ರಿವಿಕ್ರಮ್. ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ತ್ರಿವಿಕ್ರಮ್ ಅವರು ಜೂ ಎನ್​​ಟಿಆರ್ ಜೊತೆ ಮಾಡಲಿದ್ದ ಸಿನಿಮಾವನ್ನೇ ಈಗ ಅಲ್ಲು ಅರ್ಜುನ್ ಅವರಿಗಾಗಿ ಮಾಡುತ್ತಿದ್ದಾರಂತೆ. ಅಸಲಿಗೆ ಆ ಕತೆಯನ್ನು ಅಲ್ಲು ಅರ್ಜುನ್ ಅವರಿಗಾಗಿಯೇ ತ್ರಿವಿಕ್ರಮ್ ಬರೆದಿದ್ದರು, ಆದರೆ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ನಡುವೆ ಅಭಿಪ್ರಾಯ ಭೇದಗಳು ಉಂಟಾಗಿ, ಸಿನಿಮಾವನ್ನು ಜೂ ಎನ್​​ಟಿಆರ್ ಜೊತೆ ಮಾಡುವುದಕ್ಕೆ ತ್ರಿವಿಕ್ರಮ್ ಮುಂದಾಗಿದ್ದರು. ಆದರೆ ಈಗ ಮತ್ತೆ ಮನಸ್ಸು ಬದಲಿಸಿ ಅಲ್ಲು ಅರ್ಜುನ್ ಜೊತೆಗೇ ಸಿನಿಮಾ ಮಾಡಲು ತ್ರಿವಿಕ್ರಮ್ ಮುಂದಾಗಿದ್ದಾರೆ.

ಈ ಪೌರಾಣಿಕ ಸಿನಿಮಾ ದೇವರು ಮುರುಗನ್ ಅಥವಾ ಕಾರ್ತಿಕೇಯ ಕುರಿತಾಗಿದ್ದಾಗಿದೆ. ಮುರುಗನ್ ಅನ್ನು ‘ಯುದ್ಧಗಳ ದೇವರು’ (ಲಾರ್ಡ್ ಆಫ್ ವಾರ್) ಎಂದೂ ಸಹ ಕರೆಯಲಾಗುತ್ತದೆ. ಮುರುಗನ್ ಅವರ ಈ ಆಯಾಮವನ್ನು ಸಿನಿಮಾನಲ್ಲಿ ಬಲು ಅದ್ಧೂರಿಯಾಗಿ ತೋರಿಸುವ ಯೋಜನೆ ತ್ರಿವಿಕ್ರಮ್ ಅವರದ್ದು. ರಾಜಮೌಳಿ, ಸುಕುಮಾರ್ ಅವರ ಸಾಲಿಗೆ ಸೇರಬಹುದಾದ ಪ್ರತಿಭೆಯುಳ್ಳ ನಿರ್ದೇಶಕ ತ್ರಿವಿಕ್ರಮ್. ಕಮರ್ಶಿಯಲ್ ಸಿನಿಮಾಗಳಲ್ಲಿ ಫಿಲಾಸಫಿ ಸೇರಿಸುವುದು ಅವರ ಶೈಲಿ. ಈ ಸಿನಿಮಾ ಮೂಲಕ ತ್ರಿವಿಕ್ರಮ್​​ಗೆ ಸಹ ಪ್ಯಾನ್ ಇಂಡಿಯಾ ಪ್ರೀತಿ, ಗೌರವ ಸಿಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ