‘ಬಿಗ್ ಬಾಸ್​ಗೆ ಒಳ್ಳೆಯ ಟಿಆರ್​ಪಿ ಬರೋಕೆ ನೀವಲ್ಲ, ನಾನು ಕಾರಣ’; ಓಪನ್ ಆಗಿ ಹೇಳಿದ ಸುದೀಪ್

|

Updated on: Dec 09, 2024 | 8:16 AM

‘ಕಳೆದ ವರ್ಷ ಫಿನಾಲೆಯಲ್ಲಿ 12 ಟಿವಿಆರ್ ಸಿಕ್ಕಿತ್ತು. ಅದು ಅತಿ ಹೆಚ್ಚು ಎಂದು ಅನಿಸಿಕೊಂಡಿತ್ತು. 7 ಸರಾಸರಿ ಟಿವಿಆರ್ ಸಿಕ್ಕರೆ ಅದು ಒಳ್ಳೆಯ ಟಿಆರ್​ಪಿ ಎಂದರ್ಥ. ಸಿಸನ್ ಮಧ್ಯದಲ್ಲೇ ನಮಗೆ 12 ಟಿವಿಆರ್ ಸಿಕ್ಕಿದೆ’ ಎಂದು ಸುದೀಪ್ ಮೆಚ್ಚುಗೆ ಹೊರಹಾಕಿದರು.

‘ಬಿಗ್ ಬಾಸ್​ಗೆ ಒಳ್ಳೆಯ ಟಿಆರ್​ಪಿ ಬರೋಕೆ ನೀವಲ್ಲ, ನಾನು ಕಾರಣ’; ಓಪನ್ ಆಗಿ ಹೇಳಿದ ಸುದೀಪ್
ಸುದೀಪ್
Follow us on

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ ಎಂಬ ಕಾರಣಕ್ಕೆ ವೀಕೆಂಡ್​ನಲ್ಲಿ ಭರ್ಜರಿ ಟಿಆರ್​ಪಿ ಬರುತ್ತಿದೆ. ವಾರದ ದಿನಗಳಿಗೆ ಹೋಲಿಕೆ ಮಾಡಿದರೆ ವೀಕೆಂಡ್​ನಲ್ಲಿ ಟಿಆರ್​ಪಿ ಹೆಚ್ಚಿರುತ್ತದೆ. ಇದನ್ನು ಅನೇಕರು ಒಪ್ಪಿದ್ದಾರೆ. ಒಂದು ವಾರ ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಏರಿರಲಿಲ್ಲ. ಆ ವಾರ ಟಿಆರ್​ಪಿ ಕುಸಿದಿತ್ತು. ಈಗ ಬಿಗ್ ಬಾಸ್ ಪೂರ್ಣಗೊಳ್ಳುತ್ತಿರುವಾಗ ಇದರ ಟಿಆರ್​ಪಿಯಲ್ಲಿ ಭರ್ಜರಿ ಏರಿಕೆ ಕಂಡಿದೆ. ಸುದೀಪ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

‘ಕಳೆದ ವರ್ಷ ಫಿನಾಲೆಯಲ್ಲಿ 12 ಟಿವಿಆರ್ ಸಿಕ್ಕಿತ್ತು. ಅದು ಅತಿ ಹೆಚ್ಚು ಎಂದು ಅನಿಸಿಕೊಂಡಿತ್ತು. 7 ಸರಾಸರಿ ಟಿವಿಆರ್ ಸಿಕ್ಕರೆ ಅದು ಒಳ್ಳೆಯ ಟಿಆರ್​ಪಿ ಎಂದರ್ಥ. ಸಿಸನ್ ಮಧ್ಯದಲ್ಲೇ ನಮಗೆ 12 ಟಿವಿಆರ್ ಸಿಕ್ಕಿದೆ’ ಎಂದು ಸುದೀಪ್ ಮೆಚ್ಚುಗೆ ಹೊರಹಾಕಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಟಿಆರ್​ಪಿ ಹೆಚ್ಚಬಹುದು ಎಂಬ ಸೂಚನೆಯನ್ನು ಅವರು ನೀಡಿದರು.

ಆ ಬಳಿಕ ಯಾವ ಸ್ಪರ್ಧಿಗಳಿಗೆ ಎಷ್ಟು ಟಿಆರ್​ಪಿ ನೀಡುತ್ತೀರಿ ಎಂಬ ಟಾಸ್ಕ್ ನೀಡಲಾಯಿತು. ಪ್ರತಿ ಸ್ಪರ್ಧಿ ಬಂದು 1ರಿಂದ 12ವರೆಗೆ ನೀಡಿದ ಸ್ಥಾನಗಳಲ್ಲಿ ಎದುರಾಳಿಗಳನ್ನು ಕೂರಿಸಬೇಕು. ಈ ವೇಳೆ ಸ್ಪರ್ಧಿಗಳು ಕಿತ್ತಾಡಿಕೊಂಡರು. ಆಗ ಸುದೀಪ್ ಅವರು ನೇರ ಮಾತುಗಳಲ್ಲಿ ಒಂದಷ್ಟು ವಿಚಾರಗಳನ್ನು ಹೇಳಿದರು. ‘ಒಬ್ಬರೂ ನಾನು ಮನೆಯಲ್ಲಿ ಏನೂ ಮಾಡುತ್ತಿಲ್ಲ, ಹೀಗಾಗಿ ನನ್ನನ್ನು ನಾನು ಕೆಳಕ್ಕೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿಲ್ಲ. 12 ಟಿವಿಆರ್​ ಬರೋಕೆ ನೀವಲ್ಲ, ನಾನು ಕಾರಣ’ ಎಂದು ಸುದೀಪ್ ನೇರ ಮಾತಲ್ಲಿ ಹೇಳಿದರು.

ಇದನ್ನೂ ಓದಿ: ‘ನಾವು ಸೋತಿಲ್ಲ, ಅವ್ರನ್ನ ಗೆಲ್ಲಿಸಿದ್ರು’: ಬಿಗ್​ಬಾಸ್​ ಮೇಲೆ ತ್ರಿವಿಕ್ರಮ್ ಆರೋಪ, ಕೆಂಡವಾದ ಸುದೀಪ್

ಈ ವೇಳೆ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಇದು ಹೌದು ಎನಿಸಿದೆ. ಹೀಗಾಗಿ, ಅವರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ‘ಹೊರಗೆ ಏನು ನಡೆಯುತ್ತಿದೆ ಎಂಬುದು ನಿಮಗೆ ಗೊತ್ತಿರಲ್ಲ. ಹೊರಗೆ ಬೇರೆಯದೇ ಇರುತ್ತದೆ’ ಎಂದರು. ಈ ಮೂಲಕ ದೊಡ್ಮನೆ ಒಳಗೆ ಅಂದುಕೊಂಡಿರುವುದು ಒಂದಾದರೆ, ಹೊರಗೆ ಬೇರೆ ರೀತಿಯಲ್ಲಿ ಇರುತ್ತದೆ ಎಂದು ಪರೋಕ್ಷವಾಗಿ ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Mon, 9 December 24