ಆ ಎರಡು ರಾಜಕೀಯ ಪಕ್ಷಗಳಿಂದ ‘ಕಂಗುವ’ ಸಿನಿಮಾಕ್ಕೆ ಸೋಲು: ನಿರ್ಮಾಪಕ

Kanguva: ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಫ್ಲಾಪ್ ಆಗಿದೆ. ಸಿನಿಮಾದ ಸೋಲಿಗೆ ಇಬ್ಬರು ನಟರ ಅಭಿಮಾನಿಗಳು ಹಾಗೂ ಎರಡು ರಾಜಕೀಯ ಪಕ್ಷ ಕಾರಣ ಎಂದು ‘ಕಂಗುವ’ ಸಿನಿಮಾದ ಸಹ ನಿರ್ಮಾಪಕ ಹೇಳಿದ್ದಾರೆ.

ಆ ಎರಡು ರಾಜಕೀಯ ಪಕ್ಷಗಳಿಂದ ‘ಕಂಗುವ’ ಸಿನಿಮಾಕ್ಕೆ ಸೋಲು: ನಿರ್ಮಾಪಕ
Follow us
ಮಂಜುನಾಥ ಸಿ.
|

Updated on: Nov 26, 2024 | 4:16 PM

ಒಬ್ಬ ನಟನ ಸಿನಿಮಾ ಬಂದಾಗ ಮತ್ತೊಬ್ಬ ನಟನ ಅಭಿಮಾನಿಗಳು ಸಿನಿಮಾ ವಿರುದ್ಧ ಋಣಾತ್ಮಕ ವಿಚಾರಗಳನ್ನು ಹಬ್ಬಿಸುವುದು, ನೆಗೆಟಿವ್ ಪೋಸ್ಟ್​ಗಳನ್ನು ಹಾಕುವುದು ಇನ್ನಿತರೆ ಮಾಡುವುದು ಇತ್ತೀಚೆಗೆ ತುಸು ಹೆಚ್ಚಾಗಿ ನಡೆಯುತ್ತಿದೆ. ಬಹುತೇಕ ಎಲ್ಲ ಚಿತ್ರರಂಗದಲ್ಲಿಯೂ ಈ ಕೆಟ್ಟ ಪ್ರವೃತ್ತಿ ನಡೆದುಕೊಂಡು ಬಂದಿದೆ. ಆದರೆ ತಮಿಳುನಾಡಿನಲ್ಲಿ ಇದು ತುಸು ಹೆಚ್ಚಾಗಿಯೇ ಇದೆ. ಕೆಲವು ಸ್ಟಾರ್ ನಟರ ಅಭಿಮಾನಿಗಳು ಇತರೆ ಎಲ್ಲ ನಟರ ವಿರುದ್ಧವೂ ಇಲ್ಲ-ಸಲ್ಲದ ಟ್ರೋಲ್, ನೆಗೆಟಿವ್ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಕಂಗುವ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ವಿಫಲಗೊಂಡಿದ್ದು, ಸಿನಿಮಾದ ಸಹ ನಿರ್ಮಾಪಕರೊಬ್ಬರು, ‘ಕಂಗುವ’ ಸಿನಿಮಾ ಸೋಲಲು ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಮತ್ತು ಎರಡು ರಾಜಕೀಯ ಪಕ್ಷವೇ ಕಾರಣ ಎಂದು ಆರೋಪ ಮಾಡಿದ್ದಾರೆ.

‘ಕಂಗುವ’ ಸಿನಿಮಾದ ಸಹ ನಿರ್ಮಾಪಕ ಆಗಿರುವ ಹಾಗೂ ಸೂರ್ಯ ಅವರ ಆಪ್ತರೂ ಆಗಿರುವ ಧನಂಜಯನ್ ಮಾತನಾಡಿ, ‘2014ರಲ್ಲೇ ನಾನು ಈ ಬಗ್ಗೆ ಮಾತನಾಡಿದ್ದೆ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳನ್ನು ಸೂರ್ಯ ಅವರನ್ನು ಗುರಿ ಮಾಡಿಕೊಂಡೇ ಬರುತ್ತಿದ್ದಾರೆ. ಸೂರ್ಯ ಅವರ ಎಲ್ಲ ಸಿನಿಮಾಗಳಿಗೂ ಅಡ್ಡಗಾಲು ಹಾಕುವ ಪ್ರಯತ್ನ ವರ್ಷಗಳಿಂದಲೂ ನಡೆದುಕೊಂಡೇ ಬರುತ್ತಿದೆ. ಈಗ ಎರಡು ರಾಜಕೀಯ ಪಕ್ಷಗಳು ಸಹ ಅವರ ಜೊತೆ ಸೇರಿಕೊಂಡಿದ್ದು, ಸೂರ್ಯ ವಿರುದ್ಧ ಕೆಲಸ ಮಾಡುತ್ತಿವೆ’ ಎಂದಿದ್ದಾರೆ.

‘ಒಬ್ಬ ಸ್ಟಾರ್ ನಟನ ಅಭಿಮಾನಿಗಳು ಸೂರ್ಯ ಅನ್ನು ವಿಪರೀತ ದ್ವೇಷ ಮಾಡುತ್ತಾರೆ. ಇದನ್ನು ನಾನು ವರ್ಷಗಳಿಂದಲೂ ಗಮನಿಸುತ್ತಾ ಬಂದಿದ್ದೀನಿ. ನಾನು ಸೂರ್ಯ ಬಗ್ಗೆ ಏನೇ ಪೋಸ್ಟ್ ಹಾಕಿದ್ದರೂ ಸಹ ಒಬ್ಬ ನಟನ ಅಭಿಮಾನಿಗಳು ಬಂದು ಕೆಟ್ಟದಾಗಿ ಕಮೆಂಟ್​ಗಳನ್ನು ಮಾಡುತ್ತಾರೆ. ಕೆಟ್ಟ ಕಮೆಂಟ್ ಮಾಡುವ ಎಲ್ಲ ಖಾತೆಗಳಿಗೂ ಆ ಒಬ್ಬ ನಟನ ಚಿತ್ರವೇ ಇರುತ್ತದೆ. ಆ ನಟನ ಹಾಗೂ ಸೂರ್ಯ ಅವರಿಗೆ ತಮಿಳು ಚಿತ್ರರಂಗದಲ್ಲಿ ಇರುವ ಸ್ಥಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗುವುದಿಲ್ಲ’ ಎಂದಿದ್ದಾರೆ ಧನಂಜಯನ್.

ಇದನ್ನೂ ಓದಿ:ಕೊಲ್ಲೂರು ಚಂಡಿಕಾಯಾಗದಲ್ಲಿ ಕಾಲಿವುಡ್ ದಂಪತಿ; ದರ್ಶನ ಪಡೆದ ಸೂರ್ಯ-ಜ್ಯೋತಿಕಾ

‘ಈ ಹಿಂದೆ ನಟ ಸೂರ್ಯ ನೀಟ್​ ಬಗ್ಗೆ ಕೆಲ ಕಮೆಂಟ್ ಮಾಡಿದ್ದರು. ಸೂರ್ಯ ಆಗ ಮಾಡಿದ್ದ ಕಮೆಂಟ್ ತಮಿಳುನಾಡಿನಲ್ಲಿ ಸಕ್ರಮವಾಗಿರುವ ಎರಡು ರಾಜಕೀಯ ಪಕ್ಷಗಳಿಗೆ ಮುಜುಗರ, ಅಸಹನೆ ಉಂಟು ಮಾಡಿದ್ದವು. ಹಾಗಾಗಿ ಆ ಎರಡು ರಾಜಕೀಯ ಪಕ್ಷದ ಸದಸ್ಯರು ಸಹ ಸೂರ್ಯ ಸಿನಿಮಾಗಳನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಧನಂಜಯನ್ ಹೇಳಿದ್ದಾರೆ.

ಧನಂಜಯ್ ಯಾರ ಹೆಸರನ್ನೂ ನೇರವಾಗಿ ಹೇಳಿಲ್ಲವಾದರೂ, ಸೂರ್ಯ ಮತ್ತು ವಿಜಯ್ ನಡುವೆ ದಶಕಗಳಿಂದಲೂ ಸ್ಪರ್ಧೆ ಇರುವುದು ಗೊತ್ತೇ ಇದೆ. ವಿಜಯ್ ಅಭಿಮಾನಿಗಳು ಸೂರ್ಯ ಅನ್ನು ಟ್ರೋಲ್ ಮಾಡುತ್ತಲೇ ಬರುತ್ತಿದ್ದಾರೆ. ಸೂರ್ಯ ಮಾತ್ರವೇ ಅಲ್ಲದೆ ಅಜಿತ್, ರಜನೀಕಾಂತ್ ಸಿನಿಮಾಗಳ ಬಗ್ಗೆಯೂ ಅವರು ಟ್ರೋಲ್ ಮಾಡುತ್ತಾರೆ. ಇನ್ನು ಸೂರ್ಯ, ನೀಟ್ ಬಗ್ಗೆ ಹೇಳಿಕೆ ನೀಡಿದ್ದಾಗ ಅದನ್ನು ಬಿಜೆಪಿ ಮತ್ತು ಎಐಡಿಎಂಕೆ ಪಕ್ಷಗಳು ಟೀಕಿಸಿದ್ದವು. ನೀಟ್ ನಿಂದಾಗಿ ತಮಿಳುನಾಡಿನ ಮೂವರ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಮಾತನಾಡಿದ್ದ ಸೂರ್ಯ, ನೀಟ್ ಅನ್ನು ‘ಮನುನೀತಿ’ ಎಂದು ಕರೆದಿದ್ದರು. ಇದು ಬಿಜೆಪಿ ಬೆಂಬಲಿಗರ ವಿರೋಧಕ್ಕೆ ಕಾರಣವಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?