‘ವಿಚ್ಛೇದನದ ಬಳಿಕ ನನ್ನನ್ನು ಸೆಕೆಂಡ್ ಹ್ಯಾಂಡ್ ಎಂದು ಕರೆದರು’; ಸಮಂತಾ ದುಃಖದ ಮಾತು

ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ ಅವರಿಂದ ವಿಚ್ಛೇದನದ ನಂತರ ಎದುರಿಸಿದ ನೋವು ಮತ್ತು ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಅವರನ್ನು ‘ಸೆಕೆಂಡ್ ಹ್ಯಾಂಡ್’ ಎಂದು ಕರೆಯುವಂತಹ ಅವಮಾನಗಳನ್ನು ಅವರು ಎದುರಿಸಿದರು.

‘ವಿಚ್ಛೇದನದ ಬಳಿಕ ನನ್ನನ್ನು ಸೆಕೆಂಡ್ ಹ್ಯಾಂಡ್ ಎಂದು ಕರೆದರು’; ಸಮಂತಾ ದುಃಖದ ಮಾತು
ಸಮಂತಾ
Follow us
ರಾಜೇಶ್ ದುಗ್ಗುಮನೆ
|

Updated on: Nov 26, 2024 | 2:15 PM

ಸಮಂತಾ ರುತ್ ಪ್ರಭು ಅವರು ವಿಚ್ಛೇದನದ ಬಳಿಕ ಸಾಕಷ್ಟು ನೋವು ಅನುಭವಿಸಿದರು. ಅವರು ನಾಲ್ಕು ವರ್ಷಗಳ ಕಾಲ ನಾಗ ಚೈತನ್ಯ ಜೊತೆ ಸಂಸಾರ ನಡೆಸಿದ್ದರು. ಈ ಸಂಸಾರ ಈಗ ಕೊನೆ ಆಗಿ ಕೆಲವು ವರ್ಷಗಳೇ ಕಳೆದು ಹೋಗಿವೆ. ನಾಗ ಚೈತನ್ಯ ಮತ್ತೊಂದು ಮದುವೆ ಆಗುತ್ತಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಸಾಕಷ್ಟು ನೋವು ಅನುಭವಿಸಿದರು. ಅವರು ಎದುರಿಸಿದ ತೊಂದರೆಗಳ ಬಗ್ಗೆ, ಕೇಳಿದ ಪದಗಳ ಬಗ್ಗೆ ಸಮಂತಾ ಮಾತನಾಡಿದ್ದಾರೆ.

‘ಮಹಿಳೆಯರು ವಿಚ್ಛೇದನ ಪಡೆದರೆ ಅವರು ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ನಾನು ವಿಚ್ಛೇದನ ಪಡೆದಾಗ ಜನರು ಸೆಕೆಂಡ್ ಹ್ಯಾಂಡ್, ಬಳಕೆ ಆದವಳು ಎಂದು ಕರೆಯುತ್ತಿದ್ದರು. ಈ ರೀತಿಯ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದವು. ವಿಚ್ಛೇದನ ಪಡೆದ ಬಳಿಕ ಮಹಿಳೆಯರು ಹಾಗೂ ಕುಟುಂಬದವರು ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದಿದ್ದಾರೆ ಸಮಂತಾ.

‘ಆರಂಭದಲ್ಲಿ ಇದು ಸಾಕಷ್ಟು ನೋವನ್ನು ಉಂಟು ಮಾಡಿತು. ನಾನು ವಿಚ್ಛೇದನ ಪಡೆದಿದ್ದೇನೆ ಎಂಬುದನ್ನು ಒಪ್ಪಿಕೊಂಡೆ. ಇದು ಕಾಲ್ಪನಿಕ ಕಥೆ ಆಗಿರಲಿಲ್ಲ. ಹಾಗಂದ ಮಾತ್ರಕ್ಕೆ ನಾನು ಮೂಲೆಯಲ್ಲಿ ಕುಳಿತು ಅಳುತ್ತಾ ಇರುತ್ತೇನೆ ಎಂದರ್ಥವಲ್ಲ. ವಿಚ್ಛೇದನ ಆಗಿದೆ. ನಾನು ಅದನ್ನು ಮರೆ ಮಾಚುವ ಅಗತ್ಯ ಇಲ್ಲ. ನನ್ನ ಜೀವನ ಇಲ್ಲಿಗೆ ಕೊನೆ ಆಯಿತು ಎಂದರ್ಥವಲ್ಲ. ಎಲ್ಲಿ ಕೊನೆ ಇದೆಯೋ ಅಲ್ಲಿಂದಲೇ ಆರಂಭ ಆಗುತ್ತದೆ’ ಎಂದಿದ್ದಾರೆ ಸಮಂತಾ. ಈ ಮೂಲಕ ನಡೆದ ಘಟನೆಯನ್ನು ಒಪ್ಪಿ ಮುಂದೆ ಸಾಗಿದ್ದಾಗಿ ಅವರು ಹೇಳಿದ್ದಾರೆ.

‘ನಾನು ಈಗ ಖುಷಿಯಾಗಿದ್ದೇನೆ. ನಾನು ಸಾಕಷ್ಟು ಬೆಳೆದಿದ್ದೇನೆ. ನಾನು ಸಾಕಷ್ಟು ಕೆಲಸ ಮಾಡುತ್ತಿದ್ದೇನೆ’ ಎಂದು ಸಮಂತಾ ಹೇಳಿಕೊಂಡಿದ್ದಾರೆ. ಸಿನಿಮಾ ವಿಚಾರದಲ್ಲಿ ಅವರು ಗುಡ್​ನ್ಯೂಸ್ ನೀಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇದನ್ನೂ ಓದಿ: ‘ನನಗೆ ಮಗು ಹೊಂದಬೇಕು’: ಹೀಗೆ ಹೇಳಿ ಖುಷಿಪಟ್ಟಿದ್ದ ಸಮಂತಾ

ಸಮಂತಾ ಅವರು 2017ರಲ್ಲಿ ನಾಗ ಚೈತನ್ಯ ಅವರನ್ನು ವಿವಾಹ ಆದರು. ಗೋವಾದಲ್ಲಿ ಇವರ ಮದುವೆ ಅದ್ದೂರಿಯಾಗಿ ನೆರವೇರಿತು. 2021ರಲ್ಲಿ ಇವರು ಬೇರೆ ಆದರು. ಈಗ ನಾಗ ಚೈತನ್ಯ ಅವರು ಶೋಭಿತಾ ದುಲಿಪಾಲ್​ನ ವಿವಾಹ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..