AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ಗೆ ಮಧ್ಯಂತರ ಜಾಮೀನು ರದ್ದಾಗುವ ಭಯ; ಇಂದು ನಿರ್ಧಾರವಾಗಲಿದೆ ಭವಿಷ್ಯ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಹೈಕೋರ್ಟ್ ತಾತ್ಕಾಲಿಕ ಜಾಮೀನು ನೀಡಿದೆ. ಆರೋಗ್ಯ ಸಮಸ್ಯೆಯಿಂದಾಗಿ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಪೊಲೀಸರು ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ದರ್ಶನ್ ಅವರೊಂದಿಗೆ ಆರೋಪಿಗಳ ಫೋಟೋ ಸಾಕ್ಷ್ಯವಾಗಿದೆ.

ದರ್ಶನ್​ಗೆ ಮಧ್ಯಂತರ ಜಾಮೀನು ರದ್ದಾಗುವ ಭಯ; ಇಂದು ನಿರ್ಧಾರವಾಗಲಿದೆ ಭವಿಷ್ಯ
ದರ್ಶನ್
Ramesha M
| Edited By: |

Updated on: Nov 26, 2024 | 10:49 AM

Share

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ನಟ ದರ್ಶನ್ ಅವರು ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದು ಹೊರಕ್ಕೆ ಬಂದಿದ್ದಾರೆ. ಅವರು ಆಸ್ಪತ್ರೆಯಲ್ಲೇ ಇದ್ದು, ಚಿಕಿತ್ಸೆ ಮುಂದುವರಿದಿದೆ. ಅವರು ಈವರೆಗೆ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇಂದು (ನವೆಂಬರ್ 26) ಹೈಕೋರ್ಟ್​ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಅಲ್ಲಿ ಈ ಎಲ್ಲಾ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬರೋ ಸಾಧ್ಯತೆ ಇದೆ.

ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಹೈಕೋರ್ಟ್ ಪೀಠದಲ್ಲಿ ದರ್ಶನ್, ಪವಿತ್ರಾಗೌಡ, ನಾಗರಾಜು ಆರ್., ಅನುಕುಮಾರ್, ಲಕ್ಷ್ಮಣ್ ಎಂ. ಹಾಗೂ ಜಗದೀಶ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಯಾವ ರೀತಿಯ ವಾದ ವಿವಾದಗಳು ನಡೆಯುತ್ತವೆ ಎನ್ನುವ ಕುತೂಹಲ ಮೂಡಿದೆ.

ಅನಾರೋಗ್ಯ ಕಾರಣಕ್ಕೆ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದರೆ ಈವರೆಗೂ ಸರ್ಜರಿ ಮಾಡಿಸದೇ ಇರುವ ಬಗ್ಗೆ ಉತ್ತರಿಸಬೇಕಾದ ಅನಿವಾರ್ಯತೆ ಇದೆ. ಸೂಕ್ತ ವಿವರಣೆ ನೀಡದಿದ್ದರೆ ಮಧ್ಯಂತರ ಜಾಮೀನು ಹಿಂಪಡೆಯಲು ಕೋರ್ಟ್​ಗೆ ಅವಕಾಶವಿದೆ.

ಆರೋಪಿಗಳೊಂದಿಗೆ ದರ್ಶನ್ ತೆಗೆಸಿಕೊಂಡಿದ್ದ ಫೋಟೋ ಪೊಲೀಸರಿಗೆ ಈಗ ಸಿಕ್ಕಿದೆ. ಇದು ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಎನಿಸಿಕೊಂಡಿದೆ. ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಈ ಫೋಟೋಗಳು ಸಾಕ್ಷಿ ನೀಡುವ ರೀತಿಯಲ್ಲಿ ಇದೆ. ಈ ವಿಚಾರವಾಗಿ ಪೊಲೀಸರು ಹೆಚ್ಚುವರಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದೆಲ್ಲವನ್ನೂ ಆಧರಿಸಿ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಬಂತು ದರ್ಶನ್ ಹಾಡು; ಕುಣಿದಾಡಿದ ರಜತ್

ನಡೆದಿತ್ತು ವಾದ-ಪ್ರತಿವಾದ

ದರ್ಶನ್ ಈವರೆಗೂ ಸರ್ಜರಿ ಮಾಡಿಸದ ಬಗ್ಗೆ ಪ್ರಸನ್ನಕುಮಾರ್ ವಾದ ಮಂಡಿಸಿದ್ದರು. ಆ ಬಳಿಕ ದರ್ಶನ್ ಪರ ವಕೀಲ ಸಿ‌.ವಿ.ನಾಗೇಶ್ ಕೋರ್ಟ್​ಗೆ ವೈದ್ಯಕೀಯ ವರದಿ ನೀಡಿದ್ದರು. ದರ್ಶನ್ ಅವರಿಗೆ ರಕ್ತದ ಒತ್ತಡ ಇರುವ ಕಾರಣದಿಂದ ಸರ್ಜರಿ ತಡವಾಗಿದೆ ಎಂದಿದ್ದರು. ಅವರನ್ನು ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಪ್ರಾಸಿಕ್ಯೂಷನ್ ಪರ ವಕೀಲರಿಗೆ ರಿಪೋರ್ಟ್ ಪಡೆದು ಪ್ರತಿಕ್ರಿಯಿಸುವಂತೆ ವಿಚಾರಣೆ ಮುಂದಕ್ಕೆ ಹಾಕಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.