ಉತ್ತರ ಪ್ರದೇಶ ಚುನಾವಣೆಯಲ್ಲಿ (Uttar Pradesh Election 2022) ಹಲವು ಅಭ್ಯರ್ಥಿಗಳು ಚುನಾವಣೆಯ ಸಮಯದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಅವರಲ್ಲಿ ನಟಿ ಅರ್ಚನಾ ಗೌತಮ್ (Archana Gautam) ಕೂಡ ಒಬ್ಬರು. ಬಿಕಿನಿ ಮಾಡೆಲ್ ಸೇರಿದಂತೆ ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದು ಸುದ್ದಿಯಾಗಿದ್ದ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿ ಗಮನ ಸೆಳೆದಿದ್ದರು. ಕೆಲವು ಚಿತ್ರಗಳಲ್ಲೂ ಗುರುತಿಸಿಕೊಂಡಿರುವ ನಟಿಗೆ ಹಸ್ತಿನಾಪುರದಿಂದ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಈ ಮೂಲಕ ಹೊಸ ಮ್ಯಾಜಿಕ್ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವಿತ್ತು. ಅರ್ಚನಾ ಪರ ಕಾಂಗ್ರೆಸ್ ನೇತಾರೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರು ಪ್ರಚಾರ ನಡೆಸಿ, ಮತದಾರರಲ್ಲಿ ವೋಟ್ಗೆ ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್ನ ಈ ನಿರ್ಧಾರ ಫಲ ನೀಡಿಲ್ಲ. ಅರ್ಚನಾ ಅವರು ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ 2022ರ ಚುನಾವಣೆಯಲ್ಲಿ ಹಸ್ತಿನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರ್ಚನಾ ಗೌತಮ್ ಕೇವಲ 1,519 ಮತ ಪಡೆದಿದ್ದಾರೆ. ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಅರ್ಚನಾಗೆ ಸಿಕ್ಕಿರುವ ಮತದ ಪ್ರಮಾಣ 0.66 ಪ್ರತಿಶತ ಮಾತ್ರ. ತಮ್ಮ ಸೋಲಿನ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ನಟಿ, ಬೆಂಬಲ ನೀಡಿರುವ ಜನರಿಗೆ ಧನ್ಯವಾದ ಹೇಳಿದ್ದಾರೆ. ಜತೆಗೆ ಜನರ ಪ್ರೀತಿಯನ್ನು ವಿಶ್ವಾಸವಾಗಿ ಪರಿವರ್ತಿಸುವತ್ತ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಅರ್ಚನಾ ಗೌತಮ್ 2014ರಲ್ಲಿ ಉತ್ತರ ಪ್ರದೇಶ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದರು. 2018ರಲ್ಲಿ ಭಾರತ ಮಟ್ಟದ ಬಿಕಿನಿ ಸ್ಪರ್ಧೆಯಲ್ಲಿ ನಟಿ ಜಯಗಳಿಸಿದ್ದರು. ಮಿಸ್ ಕಾಸ್ಮೋಸ್ ವರ್ಲ್ಡ್ ಸ್ಪರ್ಧೆಯಲ್ಲಿ ಅರ್ಚನಾ ಭಾರತವನ್ನು ಪ್ರತಿನಿಧಿಸಿದ್ದರು. ಅದರಲ್ಲಿ ‘ಮೋಸ್ಟ್ ಟ್ಯಾಲೆಂಟ್ 2018’ ಪ್ರಶಸ್ತಿಯನ್ನು ಅವರು ಪಡೆದಿದ್ದರು.
2015ರಲ್ಲಿ ಬಾಲಿವುಡ್ ಪ್ರವೇಶಿಸಿದ್ದ ಅರ್ಚನಾ ಗೌತಮ್, ‘ಗ್ರೇಟ್ ಗ್ರಾಂಡ್ ಮಸ್ತಿ’ಯಲ್ಲಿ ಕಾಣಿಸಿಕೊಂಡಿದ್ದರು. ‘ಭಾರತ್ ಕಂಪನಿ’, ‘ಜಂಕ್ಷನ್ ವಾರಣಾಸಿ’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಚುನಾವಣೆಗೂ ಮುನ್ನ ನಟಿಯ ಬಿಕಿನಿ ಚಿತ್ರಗಳು ವೈರಲ್ ಆಗಿದ್ದವು. ಅವರ ವಿರುದ್ಧ ಪ್ರತಿಭಟನೆಗಳೂ ನಡೆದಿತ್ತು. ಆದರೆ ನಟಿ ವೃತ್ತಿ ಜೀವನ ಹಾಗೂ ರಾಜಕೀಯ ಜೀವನವನ್ನು ಬೆರೆಸಬೇಡಿ ಎಂದು ಕೋರಿಕೊಂಡಿದ್ದರು.
ಸೋಲಿನ ನಂತರ ಅರ್ಚನಾ ಗೌತಮ್ ಹಂಚಿಕೊಂಡ ಟ್ವೀಟ್:
Mujhe Hastinapur Ki janta ka Bhut pyaar mila, buss unka Es beti per Viswas nahi mila, koi baat NAHI jo bhi pyaar MERI janta ne mujhe diya uske liye dil se Thks, bhut jald yeh beti aap sab logo ka wiswas bhi jeet legi. Or haan jab Bacha girta hai, tabhi toh wo chalna sikhta hai. pic.twitter.com/MT7T8uZeuL
— Archana Gautam (@archanagautamm) March 10, 2022
ಹಸ್ತಿನಾಪುರದಲ್ಲಿ ಬಿಜೆಪಿ ಪಕ್ಷದ ದಿನೇಶ್ ಜಯಗಳಿಸಿದ್ದಾರೆ. ಸಮಾಜವಾದಿ ಪಕ್ಷ ನಂತರದ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಒಟ್ಟು 273 ಸೀಟ್ ಗೆದ್ದು ಮುಂಚೂಣಿಯಲ್ಲಿದೆ.
ಇದನ್ನೂ ಓದಿ:
ಚಿಕ್ಕ ವಯಸ್ಸಿನಲ್ಲೇ ಕಂಗನಾಗೆ ಗೊತ್ತಾಗಿತ್ತು ಮುಂದಿನ ಭವಿಷ್ಯ; ಅಚ್ಚರಿ ವಿಚಾರ ಬಿಚ್ಚಿಟ್ಟ ಪ್ರಭಾಸ್