Archana Gautam: ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಬಿಕಿನಿ ಫೋಟೋ ವೈರಲ್; 2 ವೃತ್ತಿಗಳನ್ನು ಬೆರೆಸಬೇಡಿ ಎಂದು ನಟಿ ಮನವಿ
Uttar Pradesh Assembly Election 2022: ಮಿಸ್ ಬಿಕಿನಿ ಇಂಡಿಯಾ ವಿಜೇತೆಯಾಗಿದ್ದ ಅರ್ಚನಾ ಗೌತಮ್ ಅವರ ಬಿಕಿನಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನನ್ನ ಎರಡು ಪ್ರೊಫೆಷನಲ್ ಅನ್ನು ಪರಸ್ಪರ ಬೆರೆಸಬೇಡಿ ಎಂದು ಅರ್ಚನಾ ಗೌತಮ್ ಮನವಿ ಮಾಡಿದ್ದಾರೆ.
ನವದೆಹಲಿ: ನಟಿ ಮತ್ತು ವಿವಿಧ ಸೌಂದರ್ಯ ಸ್ಪರ್ಧೆಗಳ ವಿಜೇತೆಯಾಗಿರುವ ಅರ್ಚನಾ ಗೌತಮ್ (Archana Gautam) ಅವರು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Elections 2022) ಮೀರತ್‌ನ ಹಸ್ತಿನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕಾರಣ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗಿದ್ದಾರೆ. ಅರ್ಚನಾ 2021ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಮಿಸ್ ಬಿಕಿನಿ ಇಂಡಿಯಾ ವಿಜೇತೆಯಾಗಿದ್ದ ಅರ್ಚನಾ ಗೌತಮ್ ಅವರ ಬಿಕಿನಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನನ್ನ ಎರಡು ಪ್ರೊಫೆಷನಲ್ ಅನ್ನು ಪರಸ್ಪರ ಬೆರೆಸಬೇಡಿ ಎಂದು ಅರ್ಚನಾ ಗೌತಮ್ ಮನವಿ ಮಾಡಿದ್ದಾರೆ.
2018ರಲ್ಲಿ ಮಿಸ್ ಉತ್ತರ ಪ್ರದೇಶ ಪ್ರಶಸ್ತಿ ವಿಜೇತೆಯಾಗಿರುವ ಅರ್ಚನಾ 2015ರಲ್ಲಿ ‘ಗ್ರೇಟ್ ಗ್ರ್ಯಾಂಡ್ ಮಸ್ತಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಅರ್ಚನಾ ಗೌತಮ್ ಮಿಸ್ ಬಿಕಿನಿ ಇಂಡಿಯಾ 2018 ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಮಿಸ್ ಕಾಸ್ಮೋಸ್ ವರ್ಲ್ಡ್ 2018 ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮೋಸ್ಟ್ ಟ್ಯಾಲೆಂಟ್ 2018 ಪ್ರಶಸ್ತಿಯನ್ನು ಗೆದ್ದಿದ್ದರು.
ಉತ್ತರ ಪ್ರದೇಶ ಚುನಾವಣೆಯ 125 ಅಭ್ಯರ್ಥಿಗಳಲ್ಲಿ ಅರ್ಚನಾ ಅವರ ಹೆಸರನ್ನು ಘೋಷಿಸಿದ ಕೂಡಲೇ, ಬಿಕಿನಿ ಧರಿಸಿರುವ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದವು. ಈ ಹಿನ್ನೆಲೆಯಲ್ಲಿ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅರ್ಚನಾ, ಜನರು ನನ್ನ ರಾಜಕೀಯ ವೃತ್ತಿಜೀವನದೊಂದಿಗೆ ಮಾಡೆಲಿಂಗ್ ವೃತ್ತಿಯನ್ನು ಬೆರೆಸಬಾರದು ಎಂದು ಹೇಳಿದ್ದಾರೆ.
ನಾನು ಮಿಸ್ ಬಿಕಿನಿ ಸ್ಪರ್ಧೆಯಲ್ಲಿ 2018ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ನಾನು 2014ರಲ್ಲಿ ಮಿಸ್ ಉತ್ತರ ಪ್ರದೇಶ ಮತ್ತು 2018ರಲ್ಲಿ ಮಿಸ್ ಕಾಸ್ಮೊ ವರ್ಲ್ಡ್ ಆಗಿದ್ದೆ. ನನ್ನ ರಾಜಕೀಯ ವೃತ್ತಿಜೀವನದೊಂದಿಗೆ ನನ್ನ ವೃತ್ತಿಯನ್ನು ವಿಲೀನಗೊಳಿಸದಂತೆ ನಾನು ಜನರನ್ನು ವಿನಂತಿಸುತ್ತೇನೆ ಎಂದು ಅರ್ಚನಾ ಗೌತಮ್ ಹೇಳಿದ್ದಾರೆ.
I represented India in Miss Bikini 2018. I was Miss Uttar Pradesh 2014 & Miss Cosmo World 2018. I request people to not merge my profession in the media industry with my political career: Congress candidate from Hastinapur actress Archana Gautam on her viral Bikini pics (14.01) https://t.co/RS20ZmMv0h pic.twitter.com/O2dAezdziI
— ANI UP/Uttarakhand (@ANINewsUP) January 14, 2022
ಅರ್ಚನಾ ಅವರು ‘ಹಸೀನಾ ಪಾರ್ಕರ್’ ಮತ್ತು ‘ಬಾರಾತ್ ಕಂಪನಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದೆರಡು ಸಂಗೀತ ವೀಡಿಯೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅವರು ಒಂದೆರಡು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
View this post on Instagram
ಫೆಬ್ರವರಿ 10ರಿಂದ ಉತ್ತರಪ್ರದೇಶದಲ್ಲಿ ಏಳು ಹಂತಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಗುರುವಾರ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ 50 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಅರ್ಚನಾ ಗೌತಮ್ ಹಸ್ತಿನಾಪುರ ಕ್ಷೇತ್ರದಲ್ಲಿ ಗೆದ್ದರೆ, ಅಭಿವೃದ್ಧಿ ಕಾರ್ಯಗಳು ಮತ್ತು ಪ್ರವಾಸೋದ್ಯಮದ ಪ್ರಚಾರದ ಮೇಲೆ ಮುಖ್ಯ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.
ಹಸ್ತಿನಾಪುರ ಪ್ರವಾಸಿ ಸ್ಥಳವಾಗಿದ್ದು, ಸಾಕಷ್ಟು ಪುರಾತನ ದೇವಾಲಯಗಳಿವೆ. ಆದರೆ ಸರಿಯಾದ ಸಾರಿಗೆ ಸಂಪರ್ಕವಿಲ್ಲದ ಕಾರಣ, ಜನರು ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ನಾನು ಶಾಸಕಿಯಾಗಿ ಆಯ್ಕೆಯಾದರೆ ಮೊದಲು ಸಾರಿಗೆ ಸಂಪರ್ಕಕ್ಕಾಗಿ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನು ನಿರ್ಮಿಸುತ್ತೇನೆ. ಏಕೆಂದರೆ ಯಾವಾಗ ಇಲ್ಲಿ ಪ್ರವಾಸೋದ್ಯಮ ಹೆಚ್ಚುತ್ತದೆಯೋ, ಆಗ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: BSP Candidate List UP: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; ಬಿಎಸ್ಪಿಯಿಂದ 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
Published On - 2:39 pm, Sat, 15 January 22