ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಉರ್ಫಿ ಜಾವೇದ್? ಲೀಕ್ ಆಯ್ತು ಫೋಟೋ
ಸೋಶಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಅವರ ನಿಶ್ಚಿತಾರ್ಥದ ಸುದ್ದಿ ವೈರಲ್ ಆಗಿದೆ. ಒಂದು ಫೋಟೋದಲ್ಲಿ ಯುವಕನೊಬ್ಬ ಅವರಿಗೆ ಉಂಗುರ ಹಾಕುತ್ತಿರುವುದು ಕಂಡುಬಂದಿದೆ. ಇದು ನಿಜವಾದ ನಿಶ್ಚಿತಾರ್ಥವೋ ಅಥವಾ ಸೋಶಿಯಲ್ ಮೀಡಿಯಾ ಸ್ಟಂಟ್ ಇರಬಹುದೋ ಎಂಬುದು ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಹೊಸ ರಿಯಾಲಿಟಿ ಶೋ ಪ್ರಚಾರ ಎಂದು ಅನುಮಾನಿಸುತ್ತಿದ್ದಾರೆ.

ಉರ್ಫಿ ಜಾವೇದ್ ಅವರು ಸೋಶಿಯಲ್ ಮೀಡಿಯಾ ಸೆನ್ಸೇಷನ್. ಅವರು ಏನೇ ಮಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿ ಆಗುತ್ತದೆ. ಈಗ ಅವರು ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಹಾಗಂತ ಅವರು ಯಾವುದೋ ಹೊಸ ಬಟ್ಟೆ ಧರಿಸಿ ಬಂದರು ಅಂತಲ್ಲ. ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.
ಉರ್ಫಿ ಜಾವೇದ್ ಅವರಿಗೆ ಮಂಡಿ ಊರಿ ಹುಡುಗ ರಿಂಗ್ ಹಾಕುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ಕೆಲವರು ಸೋಶಿಯಲ್ ಮೀಡಿಯಾ ಸ್ಟಂಟ್ ಎಂದಿದ್ದಾರೆ. ‘ಉರ್ಫಿಗೆ ಸದಾ ಸುದ್ದಿಯಲ್ಲಿರುವ ಬಯಕೆ. ಹೀಗಾಗಿ ಅವರು ಈ ರೀತಿ ಮಾಡಿದ್ದಾರೆ’ ಎಂದೆಲ್ಲ ಹೇಳಲಾಗಿದೆ.
View this post on Instagram
View this post on Instagram
ಉರ್ಫಿ ಜಾವೇದ್ ಅವರು ಹೊಸ ಹೊಸ ರಿಯಾಲಿಟಿ ಶೋಗಳಲ್ಲಿ ಭಾಗಿ ಆಗುತ್ತಾ ಇರುತ್ತಾರೆ. ಅದೇ ರೀತಿ ಇದು ಕೂಡ ಹೊಸ ಶೋ ಇರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಾನಾ ಚರ್ಚೆಗಳು ಹುಟ್ಟಿಕೊಂಡಿವೆ. ಶೀಘ್ರವೇ ‘ಎಂಗೇಜ್ಡ್: ರೋಕಾ ಯಾ ದೋಖಾ’ ಹೆಸರಿನ ಶೋ ಡಿಸ್ನಿಪ್ಲಸ್ ಹಾಟ್ಸ್ಟಾರ್ನಲ್ಲಿ ಪ್ರಸಾರ ಕಾಣಲಿದೆ. ಅದರ ಪ್ರೋಮೋ ಶೂಟ್ ಇದು ಎನ್ನಲಾಗಿದೆ.
ಇದನ್ನೂ ಓದಿ: ಪ್ರಚಾರಕ್ಕಾಗಿ ಮೈತುಂಬ ಲೈಟ್ ಹಾಕಿಕೊಂಡು ಬಂದ ಉರ್ಫಿ ಜಾವೇದ್
ಉರ್ಫಿ ಜಾವೇದ್ ಅವರು ‘ಬಿಗ್ ಬಾಸ್ ಹಿಂದಿ ಒಟಿಟಿ’ ಮೂಲಕ ಹೆಚ್ಚು ಬೆಳಕಿಗೆ ಬಂದರು. ಅಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಂದ ಬಟ್ಟೆಗಳನ್ನು ಮಾಡಿಕೊಂಡು ಗಮನ ಸೆಳೆದರು. ಈ ಮೂಲಕ ಅವರು ಹೆಚ್ಚು ಜನಪ್ರಿಯರಾದರು. ಆ ಬಳಿಕ ಅವರು ಅದೇ ಕಾಯಕ ಮುಂದುವರಿಸಿದರು. ಉರ್ಫಿ ಅವರಿಗೆ ಇನ್ನೂ ಸಣ್ಣ ವಯಸ್ಸು. ಅವರಿಗೆ 28 ವರ್ಷ ತುಂಬಿದೆ. ಹೀಗಾಗಿ ಅವರು ಇಷ್ಟು ಬೇಗ ವಿವಾಹ ಆಗುವುದು ಅನುಮಾನವೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:55 am, Fri, 14 February 25




