ವಕೀಲ್​ ಸಾಬ್​ ಸೋತ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ಪವನ್ ಕಲ್ಯಾಣ್​

ಹಿಂದಿಯ ಪಿಂಕ್​ ಚಿತ್ರದ ತೆಲುಗು ರಿಮೇಕ್​ ಆಗಿ ವಕೀಲ್​ ಸಾಬ್​ ಮೂಡಿ ಬಂದಿದೆ. ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಮಾಡಿದ್ದ ಪಾತ್ರವನ್ನು ಟಾಲಿವುಡ್​ನಲ್ಲಿ ಪವನ್​ ಕಲ್ಯಾಣ್​ ಮಾಡಿದ್ದಾರೆ.  

ವಕೀಲ್​ ಸಾಬ್​ ಸೋತ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ಪವನ್ ಕಲ್ಯಾಣ್​
ಪವನ್​ ಕಲ್ಯಾಣ್​
Follow us
ರಾಜೇಶ್ ದುಗ್ಗುಮನೆ
|

Updated on:Apr 23, 2021 | 7:20 PM

ಪವನ್​ ಕಲ್ಯಾಣ್​ ಕಂಬ್ಯಾಕ್​ ಮಾಡಿದ್ದ ವಕೀಲ್​ ಸಾಬ್​ ಸಿನಿಮಾ ಫ್ಯಾನ್ಸ್ ಬಲದಿಂದ ಮೊದಲ ದಿನ ಅದ್ಭುತ ಕಲೆಕ್ಷನ್​ ಮಾಡಿತ್ತು. ಆದರೆ, ದಿನ ಕಳೆದಂತೆ ಸಿನಿಮಾ ನಾನಾ ಸಂಕಷ್ಟಗಳನ್ನು ಎದುರಿಸಿತ್ತು. ಕೊರೊನಾ ಎರಡನೇ ಅಲೆ ಚಿತ್ರಕ್ಕೆ ದೊಡ್ಡ ಹೊಡೆತ ನೀಡಿತ್ತು. ಹೀಗಾಗಿ, ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಕೂಡ ತಗ್ಗಿತ್ತು. ಹೀಗಿರುವಾಗಲೇ ಚಿತ್ರತಂಡ ಮಹತ್ವದ ಘೋಷಣೆ ಒಂದನ್ನು ಮಾಡೋಕೆ ಹೊರಟಿದೆ.

ಮೊದಲ ದಿನ ಎಲ್ಲೆಡೆ ವಕೀಲ್​ ಸಾಬ್​ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದು ಇದಕ್ಕೆ ಕಾರಣ. ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನೊಂದು ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ತೆಗಳಿದರು. ಸಿನಿಮಾ ಡಿಸ್ಯಾಸ್ಟರ್​ ಎನ್ನುವ ಹಣೆಪಟ್ಟಿ ಕಟ್ಟಿದರು. ಒಂದು ವಾರ ಕಳೆಯುವುದರೊಳಗೆ ವಕೀಲ್​ ಸಾಬ್​ಗೆ ಹೀನಾಯ ಪರಿಸ್ಥಿತಿ ಬಂದೊದಗಿತ್ತು. ಹಾಕಿದ ಬಂಡವಾಳವೇ ತಿರುಗಿ ಬಂದಿಲ್ಲ ಎಂಬುದು ಬಾಕ್ಸ್​ ಆಫೀಸ್​ ಮೂಲಗಳ ಮಾಹಿತಿ. ಹೀಗಾಗಿ ಈ ಚಿತ್ರ ಬಹುತೇಕ ಸೋಲಿನ ಹಾದಿ ಹಿಡಿದಂತಾಗಿದೆ.

ಹೀಗಾಗಿ, ವಕೀಲ್​ ಸಾಬ್​ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್​ ಮಾಡುವ ಆಲೋಚನೆ ಚಿತ್ರತಂಡದ್ದು. ​ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕನ್ನು ಅಮೇಜಾನ್​ ಪ್ರೈಮ್ ಪಡೆದುಕೊಂಡಿದೆ. ಇದೇ ಮೇ 7ರಂದು ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ವರ್ಕ್​ ಫ್ರಮ್​ ಹೋಂ ಆಯ್ಕೆ ನೀಡಲಾಗಿದೆ. ಹೀಗಾಗಿ, ಎಲ್ಲರೂ ಮನೆಯಲ್ಲಿ ಕೂತಿರುವುದರಿಂದ ಸಿನಿಮಾಗೆ ಹೆಚ್ಚು ವೀಕ್ಷಣೆ ಸಿಗಬಹುದು ಎಂಬುದು ಚಿತ್ರತಂಡದ ಆಲೋಚನೆ.

ಹಿಂದಿಯ ಪಿಂಕ್​ ಚಿತ್ರದ ತೆಲುಗು ರಿಮೇಕ್​ ಆಗಿ ವಕೀಲ್​ ಸಾಬ್​ ಮೂಡಿ ಬಂದಿದೆ. ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಮಾಡಿದ್ದ ಪಾತ್ರವನ್ನು ಟಾಲಿವುಡ್​ನಲ್ಲಿ ಪವನ್​ ಕಲ್ಯಾಣ್​ ಮಾಡಿದ್ದಾರೆ.  ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Vakeel saab Box Office Collection : ವಕೀಲ್​ ಸಾಬ್​ ಹಿಟ್​ ಅಥವಾ ಫ್ಲಾಪ್​? ಕಳಚಿತು ಪವನ್​ ಕಲ್ಯಾಣ್​ ಅಭಿಮಾನಿಗಳ ಭ್ರಮೆ

ವಕೀಲ್​ ಸಾಬ್​ ಹಿಟ್​ ಏನೋ ಆಯ್ತು, ಆದರೂ ಅಭಿಮಾನಿಗಳಿಗೆ ಕಹಿ ಸುದ್ದಿ!

Published On - 7:19 pm, Fri, 23 April 21