ರಕುಲ್ ಪ್ರೀತ್ ಮಾವನಿಂದ ಐಷಾರಾಮಿ ಪ್ರಾಪರ್ಟಿ ಖರೀದಿಸಿದ ಖ್ಯಾತ ಕ್ರಿಕೆಟರ್

Vashu Bhagnani: ಬಾಲಿವುಡ್ ನಿರ್ಮಾಪಕ ವಶು ಭಗ್ನಾನಿ ಇತ್ತೀಚೆಗೆ ಸಿನಿಮಾಗಳಲ್ಲಿ ಸತತ ನಷ್ಟ ಅನುಭವಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ರಿಯಲ್ ಎಸ್ಟೇಟ್ ಕ್ಷೇತ್ರದತ್ತ ಗಮನ ಹರಿಸಿದ್ದಾರೆ. ಇತ್ತೀಚೆಗೆ ಕ್ರಿಕೆಟಿಗ ಶುಭ್ಮನ್ ಗಿಲ್‌ಗೆ ಜುಹುದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್ ಅನ್ನು 20.7 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.  

ರಕುಲ್ ಪ್ರೀತ್ ಮಾವನಿಂದ ಐಷಾರಾಮಿ ಪ್ರಾಪರ್ಟಿ ಖರೀದಿಸಿದ ಖ್ಯಾತ ಕ್ರಿಕೆಟರ್
ರಕುಲ್-ಶುಭಮನ್

Updated on: Mar 28, 2026 | 1:15 PM

ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮಾವ ಹಾಗೂ ನಿರ್ಮಾಪಕ ವಶು ಭಗ್ನಾನಿ ಇತ್ತೀಚೆಗೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಸಿನಿಮಾ ನಿರ್ಮಾಣ ಮಾಡಿ ಅವರು ಸಾಕಷ್ಟು ಕೈ ಸುಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿವೆ. ಈ ಕಾರಣಕ್ಕೆ ಹಣ ಸಂಪಾದನೆಗೆ ವಶು ಅವರು ರಿಯಲ್ ಎಸ್ಟೇಟ್​​ ಮೇಲೆ ಗಮನ ಹರಿಸಿದ್ದಾರೆ. ಅವರು ಈಗ ಖ್ಯಾತ ಕ್ರಿಕೆಟರ್​​ಗೆ ಅಪಾರ್ಟ್​​ಮೆಂಟ್ ಮಾರಾಟ ಮಾಡಿದ್ದಾರೆ.

ವಶು ಅವರದ್ದು ಬಾಲಿವುಡ್​​​ನಲ್ಲಿ ದೊಡ್ಡ ಹೆಸರು. ಅವರ ನಿರ್ಮಾಣ ಸಂಸ್ಥೆಯಿಂದ ‘ಕೂಲಿ ನಂಬರ್ 1’, ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’, ‘ಬಿವಿ ನಂಬರ್ 1’, ‘ಮಿಷನ್ ರಾಣಿಗಂಜ್’ ಮೊದಲಾದ ಚಿತ್ರಗಳನ್ನು ಪ್ರೊಡ್ಯೂಸ್ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಅವರು ನಿರ್ಮಾಣ ಮಾಡಿದ ಸಿನಿಮಾಗಳು ನೆಲಕಚ್ಚಿವೆ. ಹೀಗಾಗಿ, ಪ್ರಾಪರ್ಟಿ ಸಿದ್ಧಪಡಿಸಿ ಅದನ್ನು ಮಾರುವ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ

ಜಾಕಿ ಭಗ್ನಾನಿ, ವಶು ಭಗ್ನಾನಿ ಹಾಗೂ ಪೂಜಾ ಭಗ್ನಾನಿ ಅವರಿಂದ ಖ್ಯಾತ ಕ್ರಿಕೆಟರ್ ಶುಭ್​​ಮನ್ ಗಿಲ್ ಅವರು 20.7 ಕೋಟಿ ರೂಪಾಯಿ ಕೊಟ್ಟು ಈ ಅಪಾರ್ಟ್​​​ಮೆಂಟ್ ಖರೀದಿ ಮಾಡಿದ್ದಾರೆ. ಜುಹು ಭಾಗದಲ್ಲಿರೋ ಅಪಾರ್ಟ್​​​ಮೆಟ್​​​ನ 12ನೇ ಅಂತಸ್ತಿನಲ್ಲಿ ಇವರು ಮನೆ ಖರೀದಿ ಮಾಡಿದ್ದಾರೆ. ಇದು 3,369 ಅಡಿ ಇದೆ.

ವಶು ಅವರು ಸಿನಿಮಾ ರಂಗ ತೊರೆಯುತ್ತಾರಾ? ಖಂಡಿತವಾಗಿಯೂ ಇಲ್ಲ. ವಶು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸ ಮುಂದುವರಿಸುತ್ತಿದ್ದಾರೆ. ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.

ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ಹೆಸರಿನಲ್ಲಿ ವಾಟ್ಸಪ್ ಮೂಲಕ ದೋಖಾ: ಎಚ್ಚರಿಕೆ ನೀಡಿದ ನಟಿ

ವಶು ಭಗ್ನಾನಿ ನಿರ್ಮಾಣದ ‘ಮಿಷನ್ ರಾಣಿಗಂಜ್’ ಸಿನಿಮಾ ಹೀನಾಯವಾಗಿ ಸೋತಿತ್ತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ಈ ಚಿತ್ರದಲ್ಲಿ ನಟಿಸಿದ್ದಕ್ಕೆ ಅಕ್ಷಯ್​​ಗೆ ಸಂಭಾವನೆ ನೀಡಿರಲಿಲ್ಲ ವಶು. ಈ ಬಗ್ಗೆ ಅಕ್ಷಯ್ ಕುಮಾರ್ ಅವರು ಮಾತನಾಡಿದ್ದರು. ಆದಾಗ ಸಂಭಾವನೆ ಕೊಡಿ ಎಂದಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us