AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​ಟಿಆರ್ ಮನವಿಗೆ ಸ್ಪಂದಿಸಿದ ನಿರ್ದೇಶಕ ವೆಟ್ರಿಮಾರನ್

ಜೂ ಎನ್​ಟಿಆರ್, ತಮಗೆ ತಮಿಳು ನಿರ್ದೇಶಕ ವೆಟ್ರಿಮಾರನ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಜೂ ಎನ್​ಟಿಆರ್ ಮನವಿಗೆ ನಿರ್ದೇಶಕ ವೆಟ್ರಿಮಾರನ್ ಸ್ಪಂದಿಸಿದ್ದಾರೆ.

ಜೂ ಎನ್​ಟಿಆರ್ ಮನವಿಗೆ ಸ್ಪಂದಿಸಿದ ನಿರ್ದೇಶಕ ವೆಟ್ರಿಮಾರನ್
ಮಂಜುನಾಥ ಸಿ.
|

Updated on: Sep 21, 2024 | 6:31 PM

Share

ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಸಹ ಮಾಡದಿದ್ದ ಜೂ ಎನ್​ಟಿಆರ್ ‘ಆರ್​ಆರ್​ಆರ್’ ಸಿನಿಮಾ ಮೂಲಕ ಒಂದೇ ಬಾರಿಗೆ ಪ್ಯಾನ್ ವರ್ಲ್ಡ್ ನಟರಾಗಿದ್ದಾರೆ. ಜೂ ಎನ್​ಟಿಆರ್ ವರ್ಸಟೈಲ್ ಸ್ಟಾರ್ ನಟ. ನಟನೆಯಲ್ಲಿ ಭಿನ್ನತೆ ಇರುವ ಸ್ಟಾರ್ ನಟ ಇನ್ನೊಬ್ಬರಿಲ್ಲವೇನೋ. ನಟನೆ, ಫೈಟ್, ಡ್ಯಾನ್ಸ್, ಡೈಲಾಗ್ ಡೆಲಿವರಿ ಎಲ್ಲದರಲ್ಲೂ ಎಲ್ಲ ಸನ್ನಿವೇಶಗಳಿಗೂ ಒಗ್ಗಿಸಿಕೊಳ್ಳಬಲ್ಲ ನಟ ಜೂ ಎನ್​ಟಿಆರ್. ಎಂಥಹಾ ಕತೆಗಳಿಗೂ ಸಹ ಅವರು ಸೂಟ್ ಆಗಬಲ್ಲರು. ಇಂಥಹಾ ಒಬ್ಬ ಬಹುಮುಖ ಪ್ರತಿಭೆಯುಳ್ಳ ನಟರಿಗೆ ಸಿನಿಮಾ ನಿರ್ದೇಶನ ಮಾಡುವುದು ಹಲವು ನಿರ್ದೇಶಕರ ಕನಸು. ಹಲವು ನಿರ್ದೇಶಕರು, ಜೂ ಎನ್​ಟಿಆರ್ ಜೊತೆ ಕೆಲಸ ಮಾಡಲು ಸಾಲುಗಟ್ಟಿ ನಿಂತಿದ್ದಾರೆ. ಆದರೆ ಜೂ ಎನ್​ಟಿಆರ್ ಮಾತ್ರ, ತಮಿಳಿನ ನಿರ್ದೇಶಕರೊಬ್ಬರ ಬಳಿ ಮನವಿ ಮಾಡಿದ್ದು, ದಯವಿಟ್ಟು ನನ್ನೊಂದಿಗೆ ಸಿನಿಮಾ ಮಾಡಿ ಎಂದು ಮನವಿ ಮಾಡಿದ್ದಾರೆ.

ತಮಿಳಿನ ಮಾತ್ರವಲ್ಲ ಭಾರತದ ಭಿನ್ನ ದನಿಯ, ಅಪ್ರತಿಮ ಪ್ರತಿಭಾವಂತ ನಿರ್ದೇಶಕ ವೆಟ್ರಿಮಾರನ್. ಆಸ್ಕರ್​ಗೆ ಕಳಿಸಲ್ಪಟ್ಟಿದ್ದ ‘ವಿಸಾರನೈ’, ರಾಷ್ಟ್ರಪ್ರಶಸ್ತಿ ವಿಜೇತ ‘ಆಡುಕುಳಂ’, ‘ಅಸುರನ್’, ‘ವಡಾ ಚೆನ್ನೈ’, ‘ವಿಡುದಲೈ’ ಸಿನಿಮಾಗಳನ್ನು ನಿರ್ದೇಶಿಸಿರುವ ವೆಟ್ರಿಮಾರನ್​ಗೆ ತಮ್ಮದೇ ಆದ ಬಹು ದೊಡ್ಡ ಅಭಿಮಾನಿ ಬಳಗವೇ ಇದೆ. ಜೂ ಎನ್​ಟಿಆರ್​ಗೆ ವೆಟ್ರಿಮಾರನ್ ಜೊತೆಗೆ ಸಿನಿಮಾ ಮಾಡಬೇಕೆಂಬ ದೊಡ್ಡ ಆಸೆಯಿದೆಯಂತೆ. ಇತ್ತೀಚೆಗೆ ತಮ್ಮ ‘ದೇವರ’ ಸಿನಿಮಾದ ಪ್ರಚಾರಕ್ಕೆ ಚೆನ್ನೈಗೆ ಹೋಗಿದ್ದಾಗ ಈ ವಿಷಯವನ್ನು ಅವರೇ ಹೇಳಿಕೊಂಡಿದ್ದರು. ಇದೀಗ ಜೂ ಎನ್​ಟಿಆರ್ ಮನವಿಗೆ ವೆಟ್ರಿಮಾರನ್ ಸ್ಪಂದಿಸಿದ್ದಾರೆ.

ಇದನ್ನೂ ಓದಿ:ಮೆದುಳು ಶಸ್ತ್ರಚಿಕಿತ್ಸೆ ಸಮಯದಲ್ಲಿ ಜೂ ಎನ್​ಟಿಆರ್ ಸಿನಿಮಾ ನೋಡಿದ ಅಭಿಮಾನಿ

ಜೂ ಎನ್​ಟಿಆರ್, ಮಾಡಿರುವ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೆಟ್ರಿಮಾರನ್, ‘ನಾವು ಈ ಹಿಂದೆ ಸಹ ಅವರನ್ನು ಭೇಟಿ ಆಗಿದ್ದೆ. ನಾನು ಒಂದು ಸಿನಿಮಾ ಕತೆಯ ಐಡಿಯಾವನ್ನು ಅವರಿಗೆ ಹೇಳಿದ್ದೆ. ನಮ್ಮಿಬ್ಬರಿಗೂ ಈಗಿರುವ ಕೆಲಸ ಮುಗಿದ ಮೇಲೆ ಖಂಡಿತ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದಿದ್ದಾರೆ ವೆಟ್ರಿಮಾರನ್. ಆ ಮೂಲಕ ತಮಗೂ ಸಹ ಜೂ ಎನ್​ಟಿಆರ್ ಜೊತೆ ಕೆಲಸ ಮಾಡುವ ಆಸೆಯಿದೆಯೆಂದು ಹೇಳಿಕೊಂಡಿದ್ದಾರೆ.

ವೆಟ್ರಿಮಾರನ್ ಮತ್ತು ಜೂ ಎನ್​ಟಿಆರ್ ಇಬ್ಬರೂ ಸಹ ತಮ್ಮ-ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂ ಎನ್​ಟಿಆರ್ ಪ್ರಸ್ತುತ ‘ದೇವರ’ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅದಾದ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ವೆಟ್ರಿಮಾರನ್ ‘ವಿಡಯದಲೈ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ಸೂರ್ಯ ನಟಿಸಲಿರುವ ‘ವಡಿವಾಸಲ್’ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ. ‘ವಡಾ ಚೆನ್ನೈ’ ಸಿನಿಮಾದ ಸೀಕ್ವೆಲ್ ಮಾಡುವ ಆಲೋಚನೆಯೂ ವೆಟ್ರಗೆ ಇದೆಯಂತೆ. ಇದೆಲ್ಲ ಮುಗಿದ ಮೇಲಷ್ಟೆ ವೆಟ್ರಿ ಹಾಗೂ ಜೂ ಎನ್​ಟಿಆರ್ ಒಟ್ಟಿಗೆ ಕೆಲಸ ಮಾಡಲು ಸಾಧ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!