ವಿವಾಹಕ್ಕೂ ಮೊದಲು ನಯನತಾರಾ-ವಿಘ್ನೇಶ್ ಮಧ್ಯೆ ಆಗಿತ್ತು ಒಪ್ಪಂದ; ಇನ್ನೂ ಇದೆ ಆ ಡೀಲ್

ವಿಘ್ನೇಶ್ ಶಿವನ್ ಮತ್ತು ನಯನತಾರಾ ದಂಪತಿ ತಮ್ಮ ದಾಂಪತ್ಯದ ಯಶಸ್ಸಿಗೆ ಅಚ್ಚರಿಯ ಸೂತ್ರ ಬಹಿರಂಗಪಡಿಸಿದ್ದಾರೆ. ‘ಸಿಂಹ ಬೇಟೆ’ ನೀತಿ ಅನುಸರಿಸುವ ಇವರು, ವರ್ಷದಲ್ಲಿ 265 ದಿನ ಕೆಲಸಕ್ಕೆ ಮೀಸಲಿಟ್ಟು, ಉಳಿದ 100 ದಿನಗಳನ್ನು ಸಂಪೂರ್ಣವಾಗಿ ಕುಟುಂಬಕ್ಕಾಗಿ ಮೀಸಲಿಡುತ್ತಾರೆ. ಇದರಿಂದ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಿ, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿದೆ.

ವಿವಾಹಕ್ಕೂ ಮೊದಲು ನಯನತಾರಾ-ವಿಘ್ನೇಶ್ ಮಧ್ಯೆ ಆಗಿತ್ತು ಒಪ್ಪಂದ; ಇನ್ನೂ ಇದೆ ಆ ಡೀಲ್
ವಿಗ್ನೇಶ್-ನಯನತಾರಾ

Updated on: Apr 18, 2026 | 12:22 PM

ವಿಘ್ನೇಶ್ ಶಿವನ್ ಹಾಗೂ ನಯನತಾರಾ ಅವರು (Nayanthara) ವಿವಾಹ ಆಗಿ ನಾಲ್ಕು ವರ್ಷ ಕಳೆಯುತ್ತಾ ಬಂದಿದೆ. 2022ರಲ್ಲಿ ಇವರು ಮದುವೆ ಆದರು. ಈಗ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ನಯನತಾರಾ ಅವರು ವಿವಿಧ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ವಿಘ್ನೇಶ್ ಅವರು ಅಲ್ಲೊಂದು, ಇಲ್ಲೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಘ್ನೇಶ್ ಅವರು ದಾಂಪತ್ಯದ ಬಗ್ಗೆ ಒಂದು ಅಚ್ಚರಿಯ ವಿಷಯ ಬಿಟ್ಟುಕೊಟ್ಟಿದ್ದಾರೆ.

ವಿಘ್ನೇಶ್ ನಿರ್ದೇಶನದ ‘ಲವ್ ಇನ್ಶೂರೆನ್ಸ್ ಕಂಪನಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾಗೆ ಪ್ರದೀಪ್ ರಂಗನಾಥನ್ ನಾಯಕ. ಈ ಚಿತ್ರದ ಪ್ರಚಾರದ ವೇಳೆ ವಿಘ್ನೇಶ್ ಅವರು ಪತ್ನಿ ಜೊತೆ ಹೇಗೆ ಬಾಳುತ್ತಿದ್ದೇನೆ ಎಂಬುದನ್ನು ಹೇಳಿದ್ದಾರೆ. ವಿವಾಹಕ್ಕೂ ಮೊದಲೇ ಆದ ಒಂದು ಒಪ್ಪಂದದ ವಿಷಯ ರಿವೀಲ್ ಮಾಡಿದ್ದಾರೆ.

ಸಿಂಹ ದಿನವೂ ಬೇಟೆ ಆಡುವುದಿಲ್ಲ. ಒಮ್ಮೆ ಬೇಟೆ ಆಡಿ ಆಹಾರ ತಿಂದ ಬಳಿಕ ಅದರ ಎದುರು ಯಾವುದೇ ಪ್ರಾಣಿ ಹೋದರೂ ತಿನ್ನೋದಿಲ್ಲ ಎಂಬುದು ವಿಘ್ನೇಶ್ ಮಾತು. ಇದೇ ಪಾಲಿಸಿ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ. ವರ್ಷದಲ್ಲಿ 265 ದಿನ ಮಾತ್ರ ಕೆಲಸ ಮಾಡುವ ಅವರು ಉಳಿದ 100 ದಿನವನ್ನು ತಮಗಾಗಿ ಮೀಸಲಿಡುತ್ತಾರೆ. ಈ ಸಂದರ್ಭದಲ್ಲಿ ಏನೇ ಆದರೂ ಅವರು ಸಿನಿಮಾ ಬಗ್ಗೆ ಆಗಲೀ ಅಥವಾ ಇನ್ನಾವುದೇ ವಿಷಯದ ಬಗ್ಗೆ ಚಿಂತಿಸೋದಿಲ್ಲ. ಆ ಸಮಯವನ್ನು ಅವರು ಸಂಪೂರ್ಣವಾಗಿ ಕುಟುಂಬಕ್ಕೆ ಮೀಸಲಿಡುತ್ತಾರೆ.

‘ನಾವು ಸಿಂಹ ಬೇಟೆ ಆಡಿದಂತೆ ಬದುಕಬೇಕು ಎಂದು ಪ್ರೀತಿಸುತ್ತಿದ್ದ ಕಾಲದಲ್ಲೇ ಒಪ್ಪಂದ ಮಾಡಿಕೊಂಡಿದ್ದೆವು. ಬೇಟೆ ಬಳಿಕ ವಿಶ್ರಾಂತಿ. ಹಾಗೆಯೇ ನಾವು ವರ್ಷದಲ್ಲಿ 265 ದಿನ ಕೆಲಸ ಮಾಡುತ್ತೇವೆ ಮತ್ತು ಉಳಿದ 100 ದಿನ ವಿಶ್ರಾಂತಿ ಪಡೆಯುತ್ತೇವೆ’ ಎಂದು ವಿಘ್ನೇಶ್ ಹೇಳಿದ್ದಾರೆ.

ಇದನ್ನೂ ಓದಿ: ವಿಘ್ನೇಶ್ ಶಿವನ್​ನಿಂದ ವಿಚ್ಛೇದನ ಪಡೆಯೋ ವಿಚಾರ: ನಯನತಾರಾ ಕಡೆಯಿಂದಲೇ ಸಿಕ್ತು ಸ್ಪಷ್ಟನೆ

ಅನೇಕ ಸೆಲೆಬ್ರಿಟಿಗಳು ಈ ನಿಯಮ ಪಾಲನೆ ಮಾಡುತ್ತಾರೆ. ಇದರಿಂದ ಅವರಿಗೆ ಕೆಲಸದ ಜೊತೆಗೆ ವೈಯಕ್ತಿಕ ಜೀವನಕ್ಕೂ ಸಮಯ ಕೊಟ್ಟಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us