ರಶ್ಮಿಕಾ ಜೊತೆಗಿನ ನಿಶ್ಚಿತಾರ್ಥ ವದಂತಿ; ಸ್ಪಷ್ಟನೆ ನೀಡಿದ ವಿಜಯ್ ದೇವರಕೊಂಡ ಟೀಂ

|

Updated on: Jan 09, 2024 | 2:34 PM

ಆಗಾಗ ಈ ಜೋಡಿ ಪಾರ್ಟಿ, ಡಿನ್ನರ್ ಹಾಗೂ ವೆಕೇಶನ್​ಗೆ ಒಟ್ಟಿಗೆ ತೆರಳಿ ಸುದ್ದಿ ಆಗುತ್ತದೆ. ಈಗ ಇವರು ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ವಿಜಯ್ ದೇವರಕೊಂಡ ಟೀಂ ಅಲ್ಲಗಳೆದಿದೆ.  

ರಶ್ಮಿಕಾ ಜೊತೆಗಿನ ನಿಶ್ಚಿತಾರ್ಥ ವದಂತಿ; ಸ್ಪಷ್ಟನೆ ನೀಡಿದ ವಿಜಯ್ ದೇವರಕೊಂಡ ಟೀಂ
ವಿಜಯ್-ರಶ್ಮಿಕಾ
Follow us on

ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿದೆ. ಇವರಿಬ್ಬರ ಪ್ರೀತಿಗೆ ಹಿರಿಯರ ಆಶೀರ್ವಾದ ಸಿಕ್ಕಿದ್ದು, ಶೀಘ್ರವೇ ಹೊಸ ಸುದ್ದಿ ಸಿಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವದಂತಿಗಳಿಗೆ ವಿಜಯ್ ದೇವರಕೊಂಡ ತಂಡ ಪ್ರತಿಕ್ರಿಯಿಸಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದೆ.

‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಎರಡೂ ಸಿನಿಮಾಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಹಲವು ಸಮಯದಿಂದ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆಗಾಗ ಈ ಜೋಡಿ ಪಾರ್ಟಿ, ಡಿನ್ನರ್ ಹಾಗೂ ವೆಕೇಶನ್​ಗೆ ಒಟ್ಟಿಗೆ ತೆರಳಿ ಸುದ್ದಿ ಆಗುತ್ತದೆ. ಈಗ ಇವರು ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ವಿಜಯ್ ದೇವರಕೊಂಡ ಟೀಂ ಅಲ್ಲಗಳೆದಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮೊದಲಿನಿಂದಲೂ ತಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಕಳೆದ ವರ್ಷ ಇಬ್ಬರಿಗೂ ಚಿತ್ರರಂಗದಲ್ಲಿ ಗೆಲುವು ಸಿಕ್ಕಿದೆ. ‘ಖುಷಿ’ ಚಿತ್ರದ ಮೂಲಕ ವಿಜಯ್ ದೇವರಕೊಂಡ ದೊಡ್ಡ ಗೆಲುವು ಕಂಡಿದ್ದಾರೆ. ಕಳೆದ ವರ್ಷ ತೆರೆಕಂಡ ಈ ಸಿನಿಮಾ ಹಿಟ್ ಆಯಿತು. ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಮೃಣಾಲ್ ಠಾಕೂರ್ ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಗೀತ ಗೋವಿಂದಂ’ ಖ್ಯಾತಿಯ ಪರಶುರಾಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ: ಫೆಬ್ರವರಿ 2ನೇ ವಾರದಲ್ಲಿ ರಶ್ಮಿಕಾ-ವಿಜಯ್​ ದೇವರಕೊಂಡ ನಿಶ್ಚಿತಾರ್ಥ? ಕೇಳಿಬರ್ತಿದೆ ಗುಸುಗುಸು

ರಶ್ಮಿಕಾ ಅವರು ‘ಅನಿಮಲ್’ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಡೆದುಕೊಂಡಿದ್ದಾರೆ. ರಣಬೀರ್ ಕಪೂರ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 900+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟಿಸುತ್ತಿರುವ ‘ಪುಷ್ಪ 2’ ಚಿತ್ರದ ಮೇಲೆ ಎಲ್ಲರ ದೃಷ್ಟಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ