ಫೆಬ್ರವರಿ 2ನೇ ವಾರದಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ನಿಶ್ಚಿತಾರ್ಥ? ಕೇಳಿಬರ್ತಿದೆ ಗುಸುಗುಸು
ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಆತ್ಮೀಯತೆ ಹೆಚ್ಚುತ್ತಲೇ ಇದೆ. ಹಾಗಾಗಿ ಅವರು ತಮ್ಮ ರಿಲೇಷನ್ಶಿಪ್ ಅನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಿಶ್ಚಿತಾರ್ಥದ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಅವರಿಬ್ಬರು ಮದುವೆ ಆಗಬೇಕು ಎಂಬುದು ಅಭಿಮಾನಿಗಳ ಆಸೆ ಕೂಡ ಹೌದು.
ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಲವು ವರ್ಷಗಳಿಂದ ಆಪ್ತವಾಗಿದ್ದಾರೆ. ‘ಗೀತ ಗೋವಿಂದಂ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಬಳಿಕ ಅವರ ನಡುವೆ ಆಪ್ತತೆ ಬೆಳೆಯಿತು. ತಮ್ಮಿಬ್ಬರ ರಿಲೇಷನ್ಶಿಪ್ ಬಗ್ಗೆ ಅವರು ಈವರೆಗೂ ಮೌನ ಮುರಿದಿಲ್ಲ. ಈಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Devarakonda) ಅವರು ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಫೆಬ್ರವರಿ ಎರಡನೇ ವಾರದಲ್ಲಿ ಅವರ ಎಂಗೇಜ್ಮೆಂಟ್ (Rashmika Mandanna Engagement) ನಡೆಯಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಪರಸ್ಪರ ಬೆಂಬಲವಾಗಿ ನಿಂತಿದ್ದಾರೆ. ಅವರಿಬ್ಬರ ಆನ್ಸ್ಕ್ರೀನ್ ಕೆಮಿಸ್ಟ್ರಿ ಎಂದರೆ ಅಭಿಮಾನಿಗಳಿಗೆ ಇಷ್ಟ. ರಿಯಲ್ ಲೈಫ್ನಲ್ಲೂ ಅವರ ನಡುವೆ ಉತ್ತಮವಾದ ಬಾಂಧವ್ಯ ಇದೆ. ಒಟ್ಟಿಗೆ ಅವರು ವಿದೇಶ ಪ್ರವಾಸ ಮಾಡಿದ್ದಾರೆ. ಅನೇಕ ಹಬ್ಬಗಳನ್ನು ವಿಜಯ್ ದೇವರಕೊಂಡ ಅವರ ಮನೆಯಲ್ಲಿ ರಶ್ಮಿಕಾ ಆಚರಿಸಿದ್ದಾರೆ.
ಇದನ್ನೂ ಓದಿ: ತಮ್ಮದೇ ಎಂದು ಭಾವಿಸಿ ಬೇರೆಯವರ ಕಾರು ಏರ ಹೊರಟ ರಶ್ಮಿಕಾ ಮಂದಣ್ಣ; ಮುಂದೇನಾಯ್ತು?
ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಆತ್ಮೀಯತೆ ಹೆಚ್ಚುತ್ತಲೇ ಇದೆ. ಹಾಗಾಗಿ ಅವರು ತಮ್ಮ ರಿಲೇಷನ್ಶಿಪ್ ಅನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರಿಬ್ಬರು ಮದುವೆ ಆಗಬೇಕು ಎಂಬುದು ಅಭಿಮಾನಿಗಳ ಆಸೆ ಕೂಡ ಹೌದು. ಸದ್ಯಕ್ಕಂತೂ ರಶ್ಮಿಕಾ ಅವರಾಗಲಿ, ವಿಜಯ್ ದೇವರಕೊಂಡ ಅವರಾಗಲಿ ನಿಶ್ಚಿತಾರ್ಥದ ಸುದ್ದಿ ಬಗ್ಗೆ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ‘ಅನಿಮಲ್’ ಚಿತ್ರಕ್ಕೆ ರಶ್ಮಿಕಾಗಿಂತ ಮುನ್ನ ಆಗಿತ್ತು ಬೇರೆ ನಟಿಯ ಆಯ್ಕೆ; ಯಾರು ಅದು?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ವೃತ್ತಿಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಇಬ್ಬರೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಶ್ಮಿಕಾ ನಟಿಸಿದ ‘ಅನಿಮಲ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಅವರಿಗೆ ಬರುವ ಆಫರ್ಗಳು ಹೆಚ್ಚಾಗಿವೆ. ವಿಜಯ್ ದೇವರಕೊಂಡ ಅವರು ಕೂಡ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಂದರ್ಭದಲ್ಲಿ ಅವರು ಪರ್ಸನಲ್ ಲೈಫ್ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ