AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೇ ದಿನಕ್ಕೆ 70 ಕೋಟಿ ರೂ. ಗಳಿಸಿದ ‘ಖುಷಿ’ ಸಿನಿಮಾ; ವಿಜಯ್-ಸಮಂತಾ ಕೆಮಿಸ್ಟ್ರಿಗೆ ಫ್ಯಾನ್ಸ್ ಮೆಚ್ಚುಗೆ

ವಿಜಯ್ ದೇವರಕೊಂಡ ಅವರು ‘ಲೈಗರ್’ ಸೋಲಿನ ಬಳಿಕ ಮಂಕಾಗಿದ್ದರು. ಸಮಂತಾ ವೃತ್ತಿ ಜೀವನಕ್ಕೆ ‘ಶಾಕುಂತಲಂ’ ಸೋಲು ಹಿನ್ನಡೆ ತಂದಿತ್ತು. ಆದರೆ, ಇಬ್ಬರೂ ‘ಖುಷಿ’ ಚಿತ್ರದಲ್ಲಿ ಒಟ್ಟಾಗಿ ನಟಿಸಿ ಗೆಲುವಿನ ನಗೆ ಬೀರಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಹಾಗೂ ಸಮಂತಾ ಕೆಮಿಸ್ಟ್ರಿ ಕೆಲಸ ಮಾಡಿದೆ.

ಮೂರೇ ದಿನಕ್ಕೆ 70 ಕೋಟಿ ರೂ. ಗಳಿಸಿದ ‘ಖುಷಿ’ ಸಿನಿಮಾ; ವಿಜಯ್-ಸಮಂತಾ ಕೆಮಿಸ್ಟ್ರಿಗೆ ಫ್ಯಾನ್ಸ್ ಮೆಚ್ಚುಗೆ
ಸಮಂತಾ-ವಿಜಯ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Sep 04, 2023 | 2:28 PM

Share

ವಿಜಯ್ ದೇವರಕೊಂಡ (Vijay Devarakonada) ಹಾಗೂ ಸಮಂತಾ ರುಥ್ ಪ್ರಭು ನಟನೆಯ ‘ಖುಷಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಜನರಿಂದ ಸಿನಿಮಾಗೆ ಮೆಚ್ಚುಗೆ ಸಿಗುತ್ತಿದೆ. ಈ ಸಿನಿಮಾ ಕೇವಲ ಮೂರು ದಿನಕ್ಕೆ 70 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರವನ್ನು ನಿರ್ಮಾಣ ಮಾಡಿರುವ ‘ಮೈತ್ರಿ ಮೂವೀ ಮೇಕರ್ಸ್’ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ. ಈ ಗೆಲುವಿನಿಂದ ವಿಜಯ್ ಹಾಗೂ ಸಮಂತಾ ಮುಖದಲ್ಲಿ ನಗು ಅರಳಿದೆ. ಸೋಮವಾರದ (ಸೆಪ್ಟೆಂಬರ್ 4) ಕಲೆಕ್ಷನ್ ಮುಖ್ಯವಾಗುತ್ತದೆ.

ವಿಜಯ್ ದೇವರಕೊಂಡ ಅವರು ‘ಲೈಗರ್’ ಸೋಲಿನ ಬಳಿಕ ಮಂಕಾಗಿದ್ದರು. ಸಮಂತಾ ವೃತ್ತಿ ಜೀವನಕ್ಕೆ ‘ಶಾಕುಂತಲಂ’ ಸೋಲು ಹಿನ್ನಡೆ ತಂದಿತ್ತು. ಆದರೆ, ಇಬ್ಬರೂ ‘ಖುಷಿ’ ಚಿತ್ರದಲ್ಲಿ ಒಟ್ಟಾಗಿ ನಟಿಸಿ ಗೆಲುವಿನ ನಗೆ ಬೀರಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಹಾಗೂ ಸಮಂತಾ ಕೆಮಿಸ್ಟ್ರಿ ಕೆಲಸ ಮಾಡಿದೆ. ಈ ಜೋಡಿಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಮುಂದೆ ಬರುತ್ತಿದ್ದಾರೆ.

ಕಲೆಕ್ಷನ್ ಕುರಿತಂತೆ ಮೈತ್ರಿ ಮೂವಿ ಮೇಕರ್ಸ್ ಟ್ವೀಟ್ ಒಂದನ್ನು ಮಾಡಿದೆ. ‘ಖುಷಿ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಸ್ಕೋರ್ ಮಾಡುತ್ತಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ ಮೂರು ದಿನಕ್ಕೆ 70.23 ಕೋಟಿ ರೂಪಾಯಿ ಗಳಿಕೆ ಮಾಡಿದೆ’ ಎಂದು ಬರೆದುಕೊಂಡಿದೆ. ಇದರ ಜೊತೆ ವಿಜಯ್ ಹಾಗೂ ಸಮಂತಾ ಮಾಡಿರುವ ವಿಪ್ಲವ್ ಹಾಗೂ ಆರಾಧ್ಯಾ ಪಾತ್ರಗಳು ಕೂಡ ಜನಪ್ರಿಯತೆ ಪಡೆದುಕೊಂಡಿದೆ ಎಂದು ಮೈತ್ರಿ ಮೂವೀ ಮೇಕರ್ಸ್ ಟ್ವೀಟ್​ನಲ್ಲಿ ತಿಳಿಸಿದೆ.

ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ನಲ್ಲಿ ಈ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಈವರೆಗೆ (ಸೆಪ್ಟೆಂಬರ್ 4, ಮಧ್ಯಾಹ್ನ 1 ಗಂಟೆ) 67 ಸಾವಿರ ಮಂದಿ ರೇಟಿಂಗ್ ನೀಡಿದ್ದು, 10ಕ್ಕೆ 7.3 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲಿ ನಾಲ್ಕು ಸಾವಿರ ಜನರು ವೋಟ್ ಮಾಡಿದ್ದು, 6.8 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ವೋಟ್​ಗಳ ಸಂಖ್ಯೆ ಹೆಚ್ಚಾದಂತೆ ರೇಟಿಂಗ್​ನಲ್ಲೂ ವ್ಯತ್ಯಾಸ ಉಂಟಾಗಲಿದೆ. ಇಂದು (ಸೆಪ್ಟೆಂಬರ್ 4) ಈ ಚಿತ್ರ ಎಷ್ಟು ಕೋಟಿ ರೂಪಾಯಿ ಗಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯ್ ದೇವರಕೊಂಡ ಹಾಗೂ ಸಮಂತಾ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಅದೇ ರೀತಿ ಇವರ ಕೆಮಿಸ್ಟ್ರಿ ಕೂಡ ಕೆಲಸ ಮಾಡಿದೆ. ಸಮಂತಾ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಆದಾಗ್ಯೂ ವಿಜಯ್ ದೇವರಕೊಂಡ ಅವರು ಒಬ್ಬಂಟಿಯಾಗಿ ಸಿನಿಮಾಗೆ ಭರ್ಜರಿ ಪ್ರಚಾರ ನೀಡಿದ್ದಾರೆ. ಈ ಮೂಲಕ ಸಿನಿಮಾ ಗೆಲುವಿಗೆ ಕಾರಣ ಆಗಿದ್ದಾರೆ. ‘ಖುಷಿ’ ಚಿತ್ರದ ಇಂಟಿಮೇಟ್ ದೃಶ್ಯವೊಂದು ಲೀಕ್ ಆಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮೊದಲ ಸಿನಿಮಾ ಸೆಟ್ಟೇರಿದ ಖುಷಿಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ ಸಾನ್ಯಾ ಅಯ್ಯರ್

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಚಿತ್ರ ಈ ಮೊದಲೇ ರಿಲೀಸ್ ಆಗಬೇಕಿತ್ತು. ಆದರೆ, ಸಮಂತಾಗೆ ಅನಾರೋಗ್ಯ ಕಾಡಿದ್ದರಿಂದ ಅವರು ಶೂಟಿಂಗ್​ನಲ್ಲಿ ಭಾಗಿ ಆಗಲು ಸಾಧ್ಯವಾಗಿರಲಿಲ್ಲ. ಸ್ವಲ್ಪ ಚೇತರಿಸಿಕೊಂಡ ಬಳಿಕ ಅವರು ಶೂಟಿಂಗ್ ಪೂರ್ಣಗೊಳಿಸಿಕೊಟ್ಟರು. ಸಮಂತಾ ಸದ್ಯ ಬ್ರೇಕ್​ನಲ್ಲಿದ್ದಾರೆ. ಒಂದು ವರ್ಷ ಅಮೆರಿಕದಲ್ಲೇ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ವರದಿಗಳ ಪ್ರಕಾರ ಅವರು ಹಾಲಿವುಡ್​ ಸಿನಿಮಾಗೆ ಆಡಿಷನ್ ನೀಡುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:23 pm, Mon, 4 September 23