‘ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡ​​ಗೆ ಇನ್​ಸೆಕ್ಯೂರ್ ಭಾವನೆ ಇರಲಿಲ್ಲ’; ನೇರ ಮಾತಲ್ಲಿ ಹೇಳಿದ್ದ ರಶ್ಮಿಕಾ

ರಶ್ಮಿಕಾ ಮಂದಣ್ಣ ನಟನೆಯ ಮೊದಲ ಹಿಂದಿ ಸಿನಿಮಾ ‘ಗುಡ್​ಬೈ’ ಇತ್ತೀಚೆಗೆ ತೆರೆಗೆ ಬಂತು. ಆದರೆ, ಈ ಸಿನಿಮಾ ಹೆಚ್ಚು ಸದ್ದು ಮಾಡಲೇ ಇಲ್ಲ.

‘ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡ​​ಗೆ ಇನ್​ಸೆಕ್ಯೂರ್ ಭಾವನೆ ಇರಲಿಲ್ಲ’; ನೇರ ಮಾತಲ್ಲಿ ಹೇಳಿದ್ದ ರಶ್ಮಿಕಾ
ರಕ್ಷಿತ್-ರಶ್ಮಿಕಾ-ವಿಜಯ್
Updated By: ರಾಜೇಶ್ ದುಗ್ಗುಮನೆ

Updated on: Oct 15, 2022 | 2:18 PM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಸದಾ ಚರ್ಚೆಯಲ್ಲಿರುತ್ತಾರೆ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಬಗ್ಗೆ ಅನೇಕರಿಗೆ ಅನುಮಾನ ಇದೆ. ಆದರೆ, ಈ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಇತ್ತೀಚೆಗೆ ಈ ಜೋಡಿ ಮಾಲ್ಡೀವ್ಸ್​​ಗೆ ತೆರಳಿದೆ ಎನ್ನಲಾಗುತ್ತಿದೆ. ಇದು ಕೂಡ ಸೀಕ್ರೆಟ್ ಆಗಿಯೇ ಇದೆ. ವಿಜಯ್ ದೇವರಕೊಂಡ (Vijay Devarakonda) ಬಗ್ಗೆ ರಶ್ಮಿಕಾಗೆ ವಿಶೇಷ ಪ್ರೀತಿ ಹಾಗೂ ಕಾಳಜಿ ಇದೆ. 2020ರಲ್ಲಿ ಈ ಬಗ್ಗೆ ರಶ್ಮಿಕಾ ಹೇಳಿಕೊಂಡಿದ್ದರು. ‘ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡ​​ಗೆ ಇನ್​ಸೆಕ್ಯೂರ್ ಭಾವನೆ ಇರಲಿಲ್ಲ’ ಎಂದು ರಶ್ಮಿಕಾ ಹೇಳಿದ್ದರು.

ಇಂಟರ್​ನ್ಯಾಷನಲ್​ ಬಿಸ್ನೆಸ್ ಟೈಮ್ಸ್​ಗೆ ರಶ್ಮಿಕಾ 2020ರಲ್ಲಿ ಸಂದರ್ಶನ ನೀಡಿದ್ದರು. ಈ ಸಂದರ್ಶನದ ವೇಳೆ ರಶ್ಮಿಕಾ ಅವರು ಹಲವು ವಿಚಾರಗಳ ಬಗ್ಗೆ ನೇರವಾಗಿ ಮಾತನಾಡಿದ್ದರು. ‘ವಿಜಯ್ ದೇವರಕೊಂಡ ತುಂಬಾನೇ ಸರಳ ವ್ಯಕ್ತಿ. ಅವರದೇ ಜಗತ್ತಿನಲ್ಲಿ ಖುಷಿಯಾಗಿದ್ದಾರೆ. ‘ಗೀತ ಗೋವಿಂದಂ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಾವು ಗೆಳೆಯರಾಗಿದ್ದೆವು ಅಷ್ಟೇ. ಆದರೆ ನಮ್ಮ ಮಧ್ಯೆ ಒಂದು ಸ್ಪಾರ್ಕ್ ಇತ್ತು. ‘ಅವರು ತುಂಬಾನೇ ಸ್ಪೆಷಲ್’ ಎಂದು ನನ್ನ ಹೃದಯ ಹೇಳುತ್ತಲೇ ಇತ್ತು’ ಎಂದು ರಶ್ಮಿಕಾ ಹೇಳಿಕೊಂಡಿದ್ದರು.

‘ಒಂದು ಹಂತದಲ್ಲಿ ವಿಜಯ್ ದೇವರಕೊಂಡ ಅವರಿಗೆ ನನ್ನ ಪ್ರೀತಿ ಬಗ್ಗೆ ಹೇಳಿದೆ. ಆರಂಭದಲ್ಲಿ ಅವರು ಹಿಂಜರಿದರು. ಆದರೆ ಅವರಿಗೂ ನನ್ನ ಬಗ್ಗೆ ವಿಶೇಷ ಭಾವನೆ ಇತ್ತು. ನಂತರ ಅವರು ಒಪ್ಪಿಕೊಂಡರು. ನಮ್ಮ ಪ್ರೀತಿ ಅರಳಿದ ರೀತಿಗೆ ಅವರಿಗೆ ಖುಷಿ ಇತ್ತು. ನನ್ನ ಮಾಜಿ ಬಾಯ್​ಫ್ರೆಂಡ್ ರಕ್ಷಿತ್ ಶೆಟ್ಟಿಯಂತೆ ಇನ್​ಸೆಕ್ಯೂರ್​ ಭಾವನೆ ಅವರನ್ನು ಕಾಡುತ್ತಿರಲಿಲ್ಲ. ವಿಜಯ್ ದೇವರಕೊಂಡ ಮುಕ್ತ ಮನಸ್ಸಿನ ವ್ಯಕ್ತಿ. ನಾನು ಸದಾ ಸ್ವತಂತ್ರನಾಗಿರಬೇಕೆಂದು ಬಯಸುತ್ತಾರೆ’ ಎಂದು ರಶ್ಮಿಕಾ ಇಂಟರ್​ನ್ಯಾಷನಲ್​ ಬಿಸ್ನೆಸ್ ಟೈಮ್ಸ್ ಬಳಿ ಹೇಳಿಕೊಂಡಿದ್ದರು.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಇದನ್ನೂ ಓದಿ: ರಶ್ಮಿಕಾ ಜತೆ ಸೀಕ್ರೆಟ್​ ಪ್ರವಾಸ ಮುಗಿಸಿ ವಾಪಸ್​ ಬಂದ ವಿಜಯ್​ ದೇವರಕೊಂಡ; ಇಲ್ಲಿದೆ ಫೋಟೋ

ರಶ್ಮಿಕಾ ಮಂದಣ್ಣ ನಟನೆಯ ಮೊದಲ ಹಿಂದಿ ಸಿನಿಮಾ ‘ಗುಡ್​ಬೈ’ ಇತ್ತೀಚೆಗೆ ತೆರೆಗೆ ಬಂತು. ಆದರೆ, ಈ ಸಿನಿಮಾ ಹೆಚ್ಚು ಸದ್ದು ಮಾಡಲೇ ಇಲ್ಲ. ಅಮಿತಾಭ್ ಬಚ್ಚನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದರು. ಸಾಲು ಸಾಲು ಹಿಂದಿ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.