ಗಾಯಗೊಂಡರೂ ಶೂಟಿಂಗ್ ನಿಲ್ಲಿಸುತ್ತಿಲ್ಲ ವಿಜಯ್ ದೇವರಕೊಂಡ; ಅಭಿಮಾನಿಗಳಲ್ಲಿ ಆತಂಕ

ಚಿತ್ರದ ಆ್ಯಕ್ಷನ್ ದೃಶ್ಯಗಳ ಶೂಟ್ ವೇಳೆ ವಿಜಯ್​ಗೆ ಗಾಯವಾಗಿದೆ. ಅವರು ವೈದ್ಯರ ಸೂಚನೆ ಪ್ರಕಾರ ವಿಶ್ರಾಂತಿ ಪಡೆಯಬೇಕಿತ್ತು. ಅವರ ರಿಕವರಿಗೆ ಸಾಕಷ್ಟು ಸಮಯ ಬೇಕಿದೆ. ಆದರೆ, ವಿಜಯ್ ಅವರು ತಮ್ಮ ಪ್ಲ್ಯಾನ್ ಪ್ರಕಾರವೇ ಶೂಟ್ ಮಾಡಲು ನಿರ್ಧರಿಸಿದ್ದಾರೆ.

ಗಾಯಗೊಂಡರೂ ಶೂಟಿಂಗ್ ನಿಲ್ಲಿಸುತ್ತಿಲ್ಲ ವಿಜಯ್ ದೇವರಕೊಂಡ; ಅಭಿಮಾನಿಗಳಲ್ಲಿ ಆತಂಕ
ವಿಜಯ್
Follow us
ರಾಜೇಶ್ ದುಗ್ಗುಮನೆ
|

Updated on: Nov 05, 2024 | 9:00 AM

ವಿಜಯ್ ದೇವರಕೊಂಡ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಅವರು ಸಾಲು ಸಾಲು ಫ್ಲಾಪ್ ಕೊಟ್ಟಿದ್ದಾರೆ. ಹೀಗಾಗಿ, ಹೊಸ ಸಿನಿಮಾದ ಕೆಲಸಗಳನ್ನು ಅವರು ಭರದಿಂದ ನಡೆಸುತ್ತಾ ಇದ್ದಾರೆ. ಅವರು ಸದ್ಯ ತಮ್ಮ 12ನೇ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘VD12’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಶೂಟ್ ವೇಳೆ ಅವರಿಗೆ ಗಾಯ ಆಗಿದೆ. ಆದರೆ, ಯಾವುದೇ ಕಾರಣಕ್ಕೂ ಶೂಟಿಂಗ್ ನಿಲ್ಲಬಾರದು ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ವಿಜಯ್ ದೇವರಕೊಂಡ ನಟನೆಯ ಈ ಚಿತ್ರವನ್ನು ಗೌತಮ್ ತಿನ್ನನುರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಆ್ಯಕ್ಷನ್ ದೃಶ್ಯಗಳ ಶೂಟ್ ವೇಳೆ ವಿಜಯ್​ಗೆ ಗಾಯವಾಗಿದೆ. ಅವರು ವೈದ್ಯರ ಸೂಚನೆ ಪ್ರಕಾರ ವಿಶ್ರಾಂತಿ ಪಡೆಯಬೇಕಿತ್ತು. ಅವರ ರಿಕವರಿಗೆ ಸಾಕಷ್ಟು ಸಮಯ ಬೇಕಿದೆ. ಆದರೆ, ವಿಜಯ್ ಅವರು ತಮ್ಮ ಪ್ಲ್ಯಾನ್ ಪ್ರಕಾರವೇ ಶೂಟ್ ಮಾಡಲು ನಿರ್ಧರಿಸಿದ್ದಾರೆ.

ಸದ್ಯ ವಿಜಯ್ ದೇವರಕೊಂಡ ಅವರು ಫಿಸಿಯೋಥೆರಪಿಗೆ ಒಳಗಾಗಿದ್ದಾರೆ. ಈಗ ವಿಜಯ್ ಶೂಟಿಂಗ್ ವಿಳಂಬ ಮಾಡಿದರೆ ಎಲ್ಲಾ ಕೆಲಸಗಳು ವಿಳಂಬ ಆಗಬಹುದು ಎನ್ನುವ ಭಯ ಕಾಡಿದೆ. ನಂತರ ಉಳಿದ ಕಲಾವಿದರ ಡೇಟ್ಸ್ ಪಡೆದು ಮತ್ತೆ ಶೂಟ್ ಮಾಡಬೇಕು ಎಂದರೆ ಮತ್ತಷ್ಟು ಸಮಯ ಹಿಡಿಯಲಿದೆ.

‘ಲೈಗರ್’ ಹಾಗೂ ‘ದಿ ಫ್ಯಾಮಿಲಿ ಸ್ಟಾರ್’ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಸೋತಿವೆ. ಈ ಕಾರಣಕ್ಕೆ ಅವರು ಬ್ರೇಕ್ ಪಡೆಯದೆ ಶೂಟ್ ಮಾಡಲು ನಿರ್ಧರಿಸಿದ್ದಾರೆ. ಗಾಯಗೊಂಡರೂ ಅವರು ಶೂಟಿಂಗ್ ನಿಲ್ಲಿಸುವ ಆಲೋಚನೆಯಲ್ಲಿ ಇಲ್ಲ. ಶತಾಯ ಗತಾಯ ಮುಂದಿನ ವರ್ಷ ಸಿನಿಮಾನ ತೆರೆಮೇಲೆ ತರುವ ಆಲೋಚನೆಯಲ್ಲಿ ಅವರಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್

ವಿಜಯ್ ದೇವರಕೊಂಡ ನಟನೆಯ ಈ ಚಿತ್ರವನ್ನು ಸಿತಾರಾ ಎಂಟರ್​ಟೇನ್​ಮೆಂಟ್ ನಿರ್ಮಾಣ ಮಾಡುತ್ತಿದೆ. ಸದ್ಯ ಸಿನಿಮಾದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಹೊಸ ವರ್ಷಕ್ಕೆ ಸಿನಿಮಾ ಬಗ್ಗೆ ಅಪ್​ಡೇಟ ಕೊಡೋದಾಗಿ ತಂಡ ಹೇಳಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.