2026ರಲ್ಲಿ ಕೊನೆ ಆಗಲಿದೆ ಲೋಕೇಶ್ ಕನಗರಾಜ್ ವೃತ್ತಿ ಜೀವನ?
2016ರಲ್ಲಿ ‘ಅವಿಯಲ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲೋಕೇಶ್ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ‘ಕೈದಿ’ ಅವರಿಗೆ ಅಪಾರ ಜನಪ್ರಿಯತೆ ನೀಡಿತು. ಅವರು 10 ಸಿನಿಮಾ ಆದ ಬಳಿಕ ನಿವೃತ್ತಿ ಪಡೆಯೋದಾಗಿ ಹೇಳಿದ್ದಾರೆ. ಅವರು ಈಗ ಎಷ್ಟು ಸಿನಿಮಾ ಮಾಡಿದ್ದಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ವಿವರ.
ಕಾಲಿವುಡ್ನ ಖ್ಯಾತ ನಿರ್ದೇಶಕರಲ್ಲಿ ಲೋಕೇಶ್ ಕನಗರಾಜ್ ಅವರಿಗೂ ಸ್ಥಾನ ಇದೆ. ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರಭಾವಿ ನಿರ್ದೇಶಕರಲ್ಲಿ ಅವರು ಕೂಡ ಒಬ್ಬರು. ಅವರು 10 ಸಿನಿಮಾ ಆದ ಬಳಿಕ ನಿವೃತ್ತಿ ಪಡೆಯೋದಾಗಿ ಹೇಳಿದ್ದಾರೆ. ಅವರು ಈಗ ಎಷ್ಟು ಸಿನಿಮಾ ಮಾಡಿದ್ದಾರೆ? ಅವರು ನಿವೃತ್ತಿ ಪಡೆಯೋದು ಯಾವಾಗ? ಆ ಪ್ರಶ್ನೆಗೆ ಇಲ್ಲಿ ಉತ್ತರ ಕಂಡುಕೊಳ್ಳೋಣ.
10 ಸಿನಿಮಾ
‘ನನ್ನ ವೃತ್ತಿಜೀವನದಲ್ಲಿ ಹೆಚ್ಚು ಚಿತ್ರಗಳನ್ನು ಮಾಡಬೇಕು ಎಂಬ ಯೋಜನೆಯು ನನಗೆ ಇಲ್ಲ. ಚಿತ್ರರಂಗದಲ್ಲಿ ಏನಾದರೂ ಮಾಡೋಣ ಎಂದು ನಾನು ಇಲ್ಲಿಗೆ ಬಂದೆ. ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಸಾಧ್ಯವಾಗಿದ್ದು ನಿರ್ಮಾಪಕರ ನೆರವಿನಿಂದ. ಹಾಗಾಗಿ ನಾನು ನಿರ್ಮಾಪಕರಿಗೆ ಮತ್ತು ಎಲ್ಲ ನಟರ ಅಭಿಮಾನಿಗಳಿಗೆ ಪ್ರಮಾಣಿಕನಾಗಿ ಇರುತ್ತೇನೆ. ನಾನು 10 ಸಿನಿಮಾ ಮಾಡಿದ ಬಳಿಕ ಚಿತ್ರರಂಗ ತೊರೆಯುತ್ತೇನೆ’ ಎಂದು ಲೋಕೇಶ್ ಕನಗರಾಜ್ ಹೇಳಿದ್ದರು.
ಈಗ ಎಷ್ಟು ಸಿನಿಮಾ ಆಗಿದೆ?
2016ರಲ್ಲಿ ‘ಅವಿಯಲ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲೋಕೇಶ್ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ‘ಕೈದಿ’ ಅವರಿಗೆ ಅಪಾರ ಜನಪ್ರಿಯತೆ ನೀಡಿತು. 2022ರ ‘ವಿಕ್ರಮ್’ ಸೂಪರ್ ಹಿಟ್ ಆಯಿತು. ‘ಲಿಯೋ’ ಚಿತ್ರವು ಸಾಧಾರಣ ಯಶಸ್ಸು ಕಂಡಿತು. ಏಳನೇ ಸಿನಿಮಾ ಆಗಿ ‘ಕೂಲಿ’ ಚಿತ್ರ ಬರುತ್ತಿದೆ. ರಜನಿಕಾಂತ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
‘ಕೈದಿ 2’ ಚಿತ್ರವನ್ನೂ ಅವರು ನಿರ್ದೇಶನ ಮಾಡಬೇಕಿದೆ. ಈ ಚಿತ್ರಕ್ಕೆ ಕಾರ್ತಿ ಹೀರೋ. ‘ಲಿಯೋ 2’ ಚಿತ್ರ ಕೂಡ ಬರಬೇಕಿದೆ. ‘ಪಾರ್ತಿಬನ್’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆಯಂತೆ. ಇದರ ಜೊತೆಗೆ ವಿಕ್ರಮ್ 2’ ಚಿತ್ರವನ್ನೂ ಅವರು ನಿರ್ದೇಶನ ಮಾಡಬೇಕಿದೆ. ಇವಿಷ್ಟಾದ ಬಳಿಕ ಅವರು ನಿರ್ದೇಶನ ತೊರೆಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಈ ಎಲ್ಲಾ ಸಿನಿಮಾ ಕೆಲಸಗಳು 2026ರ ಕೊನೆಯಲ್ಲಿ ಪೂರ್ಣಗೊಳ್ಳೋ ಸಾಧ್ಯತೆ ಇದೆ.
ಇದನ್ನೂ ಓದಿ: ‘ಜೈಲರ್’ ಬಳಿಕ ದೊಡ್ಡ ಘೋಷಣೆ ಮಾಡಿದ ರಜನಿಕಾಂತ್; ಲೋಕೇಶ್ ಕನಗರಾಜ್ ಜತೆ ಸಿನಿಮಾ
ಲೋಕೇಶ್ ಕನಗರಾಜ್ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ಸ್ಟಾರ್ ನಟರು ಕೂಡ ಬಯಸುತ್ತಿದ್ದಾರೆ. ಇಂಥ ಸಮಯದಲ್ಲಿ ಅವರು ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿರುವುದು ಬೇಸರ ಮೂಡಿಸಿದೆ. ಸದ್ಯ ಅವರು ‘ಕೂಲಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.