AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಖುಷಿ’ ಸಿನಿಮಾ ಸಕ್ಸಸ್: ಸಂಭಾವನೆ ದಾನ ಮಾಡಿ ಖುಷಿ ಕಂಡ ವಿಜಯ್ ದೇವರಕೊಂಡ

‘ಖುಷಿ’ ಸಿನಿಮಾ ನಿರೀಕ್ಷೆಯನ್ನು ಸುಳ್ಳಾಗಿಸದೆ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ಸಕ್ಸಸ್​ನಿಂದ ಸಂತಸಗೊಂಡ ನಟ ವಿಜಯ್ ದೇವರಕೊಂಡ ಈ ಸಿನಿಮಾದ ಸಂಭಾವನೆಯ ಒಂದಷ್ಟು ಪ್ರಮಾಣವನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ಅವರ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

‘ಖುಷಿ’ ಸಿನಿಮಾ ಸಕ್ಸಸ್: ಸಂಭಾವನೆ ದಾನ ಮಾಡಿ ಖುಷಿ ಕಂಡ ವಿಜಯ್ ದೇವರಕೊಂಡ
ವಿಜಯ್​ ದೇವರಕೊಂಡ, ಸಮಂತಾ ರುತ್​ ಪ್ರಭು
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Sep 05, 2023 | 2:19 PM

Share

ವಿಜಯ್ ದೇವರಕೊಂಡ (Vijay Devrakonda), ಸಮಂತಾ ರುತ್ ಪ್ರಭು ಅಭಿನಯದ ‘ಖುಷಿ’ ಸಿನಿಮಾ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿಜಯ್ ಹಾಗೂ ಸಮಂತಾ ನಡುವಿನ ಕೆಮಿಸ್ಟ್ರಿ ವರ್ಕ್ ಆಗಿದ್ದು, ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ರಿಲೀಸ್ ಆಗಿ 4ನೇ ದಿನಕ್ಕೆ 75 ಕೋಟಿ ರೂಪಾಯಿ ಬಾಚಿಕೊಂಡಿದೆ. ಚಿತ್ರತಂಡ ಸಿನಿಮಾದ ಯಶಸ್ಸನ್ನು ಸೆಲೆಬ್ರೇಟ್ ಮಾಡುತ್ತಾ ಇದೆ. ಸತತ ಸೋಲು ಕಾಣುತ್ತಿದ್ದ ವಿಜಯ್ ಈ ಸಿನಿಮಾದಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ಈ ಬೆನ್ನಲೇ ಅವರು ಖುಷಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

‘ಖುಷಿ’ ಸಿನಿಮಾದ ಯಶಸ್ಸಿನಿಂದ ಫುಲ್ ಖುಷ್ ಆದ ವಿಜಯ ದೇವರಕೊಂಡ ಒಂದು ಕೋಟಿ ರೂಪಾಯಿ ದಾನ ಮಾಡುವುದಾಗಿ ಹೇಳಿದ್ದಾರೆ. ಈ ಸಿನಿಮಾದ ಸಂಭಾವನೆಯಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ದಾನ ಮಾಡುತ್ತೇನೆ ಎಂದಿದ್ದಾರೆ ವಿಜಯ್. 100 ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಚೆಕ್ ನೀಡುವುದಾಗಿ ಘೋಷಿಸಿದ್ದಾರೆ. ಸೋಮವಾರ (ಸೆಪ್ಟೆಂಬರ್ 4) ವಿಶಾಖಪಟ್ಟಣಂನಲ್ಲಿ ನಡೆದ ಸಿನಿಮಾದ ಸಕ್ಸಸ್ ಮೀಟ್​​ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಈ ಕುರಿತು ಮಾತನಾಡಿದ್ದು, ‘ಖುಷಿ ಸಿನಿಮಾದಿಂದ ನೀವು ಸಂತೋಷವಾಗಿದ್ದೀರಾ? ನಾನು ಸಂತೋಷವಾಗಿದ್ದೇನೆ. ನಾನು ಏನನ್ನಾದರೂ ಯೋಚಿಸಿದರೆ ಅದನ್ನು ಮಾಡಿ ಮುಗಿಸುವವರೆಗೂ ನಿದ್ದೆ ಬರುವುದಿಲ್ಲ. ಆದರೆ ಇದು ಸರಿಯೋ ತಪ್ಪೋ ಎಂದು ತಿಳಿದಿಲ್ಲ. ಈ ಖುಷಿಯನ್ನು ಹೆಚ್ಚಿಸಲು ನಾನು ‘ಖುಷಿ’ ಸಿನಿಮಾದ ಸಂಭಾವನೆಯಲ್ಲಿ ಒಂದು ಕೋಟಿ ರೂಪಾಯಿಯನ್ನು ಅಗತ್ಯವಿರುವ ಕುಟುಂಬಗಳಿಗೆ ನೀಡುತ್ತೇನೆ. ಮುಂದಿನ ಹತ್ತು ದಿನಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುತ್ತೇನೆ. ನನ್ನ ಯಶಸ್ಸು, ನನ್ನ ಸಂತೋಷ, ನನ್ನ ಸಂಬಳವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ.

ಕುಟುಂಬಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದರ ಕುರಿತು ವಿಜಯ್ ಮಾತನಾಡಿದ್ದಾರೆ. ‘ಸ್ಪ್ರೆಡ್ಡಿಂಗ್ ಖುಷಿ ಅಥವಾ ದೇವರ ಫ್ಯಾಮಿಲಿ ಎಂಬ ಹೆಸರಿನಲ್ಲಿ ಬುಧವಾರ ಇನ್​ಸ್ಟಾಗ್ರಾಂ ಮೂಲಕ ಫಾರ್ಮ್ ಹಂಚಿಕೊಳ್ಳುತ್ತೇನೆ. ಇದರ ಮೂಲಕ ಅಗತ್ಯವಿರುವವರು ನಿಮ್ಮ ಹೆಸರನ್ನು ನಮೂದಿಸಬಹುದು. ಮನೆ ಬಾಡಿಗೆ, ಮಕ್ಕಳ ಶಾಲಾ ಫೀಸ್ ಹೀಗೆ ಯಾವುದೇ ವಿಷಯಕ್ಕೆ ಹಣ ಬಳಕೆಯಾದರೂ ನನಗೆ ಸಂತೋಷವಾಗುತ್ತದೆ. ಮುಂದಿನ 10 ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎನ್ನುವ ಉದ್ದೇಶ ಇದೆ. ಈ ಕಾರ್ಯ ಪೂರ್ಣಗೊಂಡರೆ ಸಿನಿಮಾದ ಯಶಸ್ಸನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮೂರೇ ದಿನಕ್ಕೆ 70 ಕೋಟಿ ರೂ. ಗಳಿಸಿದ ‘ಖುಷಿ’ ಸಿನಿಮಾ; ವಿಜಯ್-ಸಮಂತಾ ಕೆಮಿಸ್ಟ್ರಿಗೆ ಫ್ಯಾನ್ಸ್ ಮೆಚ್ಚುಗೆ

‘ಖುಷಿ’ ಚಿತ್ರವನ್ನು ಶಿವ ನಿರ್ದೇಶನ ಮಾಡಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಹಣ ಹೂಡಿದೆ. ತೆಲುಗು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ