ಆರತಕ್ಷತೆಯಲ್ಲೂ ವಿಶೇಷ ಉಡುಗೆ ಧರಿಸಿ ಕಂಗೊಳಿಸಿದ ರಶ್ಮಿಕಾ-ವಿಜಯ್: ವಿಶೇಷತೆಯೇನು?

Vijay Deverakonda and Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ರಿಸೆಪ್ಷನ್​​ಗೂ ಸಹ ಭಿನ್ನವಾದ ಕಂಗೊಳಿಸುವ ಉಡುಗೆಗಳೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಸಾಮಾನ್ಯವಾಗಿ ಮದುವೆಗೆ ಶಾಸ್ತ್ರೀಯ ಉಡುಪು ಧರಿಸುವ ಜೋಡಿ, ರಿಸೆಪ್ಷನ್​​ಗೆ ಆಧುನಿಕ ರೀತಿಯ ಉಡುಪು ಧರಿಸುತ್ತಾರೆ. ಆದರೆ ವಿಜಯ್ ಮತ್ತು ರಶ್ಮಿಕಾ ತಮ್ಮ ರಿಸೆಪ್ಷನ್​​ಗೆ ಸಹ ಸರಳವಾದ ಆದರೆ ಸಾಂಪ್ರದಾಯಿಕವಾದ ಉಡುಗೆಗಳನ್ನು ಧರಿಸಿ ಮಿಂಚಿದರು.

ಆರತಕ್ಷತೆಯಲ್ಲೂ ವಿಶೇಷ ಉಡುಗೆ ಧರಿಸಿ ಕಂಗೊಳಿಸಿದ ರಶ್ಮಿಕಾ-ವಿಜಯ್: ವಿಶೇಷತೆಯೇನು?
Vijay Rashmika

Updated on: Mar 05, 2026 | 12:30 PM

ಸ್ಟಾರ್ ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಇವರ ಮದುವೆ ಚಿತ್ರಗಳು ನ್ಯಾಷನಲ್ ನ್ಯೂಸ್ ಆಗಿದ್ದವು. ಮದುವೆಯ ದಿನ ಈ ಜೋಡಿ ಶಿವ-ಪಾರ್ವತಿಯ ರೂಪದಲ್ಲಿ ಕಂಗೊಳಿಸಿದ್ದರು. ಇಬ್ಬರೂ ಧರಿಸಿದ್ದ ಚಿನ್ನದ ಆಭರಣಗಳ ಡಿಸೈನ್ ಅಂತೂ ಸಖತ್ ವೈರಲ್ ಆಗಿದ್ದವು. ರಿಸೆಪ್ಷನ್​​ಗೂ ಸಹ ಭಿನ್ನವಾದ ಕಂಗೊಳಿಸುವ ಉಡುಗೆಗಳೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಸಾಮಾನ್ಯವಾಗಿ ಮದುವೆಗೆ ಶಾಸ್ತ್ರೀಯ ಉಡುಪು ಧರಿಸುವ ಜೋಡಿ, ರಿಸೆಪ್ಷನ್​​ಗೆ ಆಧುನಿಕ ರೀತಿಯ ಉಡುಪು ಧರಿಸುತ್ತಾರೆ. ಆದರೆ ವಿಜಯ್ ಮತ್ತು ರಶ್ಮಿಕಾ ತಮ್ಮ ರಿಸೆಪ್ಷನ್​​ಗೆ ಸಹ ಸರಳವಾದ ಆದರೆ ಸಾಂಪ್ರದಾಯಿಕವಾದ ಉಡುಗೆಗಳನ್ನು ಧರಿಸಿ ಮಿಂಚಿದರು.

ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನಿನ್ನೆ ರಾತ್ರಿ ಈ ಜೋಡಿಯ ಅದ್ಧೂರಿ ರಿಸೆಪ್ಷನ್‌ ನಡೆಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಗಳನ್ನು ಈ ಜೋಡಿ ಧರಿಸಿದ್ದರು. ಮತ್ತೊಂದು ವಿಶೇಷವೆಂದರೆ ಇಬ್ಬರ ಉಡುಗೆಗಳು ಅವರವರ ರಾಜ್ಯವನ್ನು ಪ್ರತಿನಿಧಿಸುತ್ತಿತ್ತು. ನಟಿ ರಶ್ಮಿಕಾ, ಮೈಸೂರು ರೇಷ್ಮೆ ಸೀರೆ ಧರಿಸಿದ್ದರೆ ವಿಜಯ್ ದೇವರಕೊಂಡ ತೆಲಂಗಾಣದ ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿದ್ದರು.

ಆರತಕ್ಷತೆ ಕಾರ್ಯಕ್ರಮದಲ್ಲಿ ಗಾಢ ಕೆಂಪು ಬಣ್ಣದ (Deep Red) ಭವ್ಯವಾದ ಮೈಸೂರು ಸಿಲ್ಕ್ ಸೀರೆಯನ್ನು ರಶ್ಮಿಕಾ ಧರಿಸಿದ್ದರು. ಈ ಸೀರೆಯ ಬಾರ್ಡರ್‌ನಲ್ಲಿ ಚಿನ್ನದ ಜರಿ ಕೆಲಸವಿದ್ದು, ವಿಶೇಷವಾಗಿ ಮೈಸೂರು ರಾಜಮನೆತನದ ಲಾಂಛನವಾದ ಗಂಡಭೇರುಂಡ ಪಕ್ಷಿಯ ವಿನ್ಯಾಸವನ್ನು ಬೆಳ್ಳಿ ಮತ್ತು ಬಂಗಾರದ ಎಳೆಗಳಿಂದ ನೆಯ್ಯಲಾಗಿತ್ತು. ರಶ್ಮಿಕಾ ತಮ್ಮ ಕರ್ನಾಟಕದ ನಂಟನ್ನು ನೆನಪಿಸುವ ಉಡುಗೆ ಧರಿಸಿ ಕಂಗೊಳಿಸಿದರು.

ಇದನ್ನೂ ಓದಿ:ರಶ್ಮಿಕಾನಾ ವಿಜಯ್ ಎಷ್ಟು ಕೇರ್ ಮಾಡ್ತಾರೆ ನೋಡಿ

ಕೊರಳಿನಲ್ಲಿ ನಕ್ಷಿ ಕೆಲಸದ ನವಿಲು ವಿನ್ಯಾಸದ ಹಾರ, ಕೆಂಪು ಕೆಂಪು ಮಾಣಿಕ್ಯ ಮತ್ತು ಹಸಿರು ಪಚ್ಚೆ ಹರಳುಗಳು ಕೆತ್ತಿದ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದರು. ಹಣೆಯಲ್ಲಿ ಸಣ್ಣ ಬಿಂದಿ, ಮಲ್ಲಿಗೆ ಹೂ ಮುಡಿದ ಜಡೆ ರಶ್ಮಿಕಾ ಅವರ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು.

ಇನ್ನು ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರಿಗೆ ಪೂರಕವಾಗಿ ತಿಳಿ ಬಿಳಿ ಬಣ್ಣದ ರೇಷ್ಮೆ ಪಂಚೆ ಹಾಗೂ ವಿ-ನೆಕ್ ಶರ್ಟ್ ಧರಿಸಿದ್ದರು. ಅವರ ಅಂಗವಸ್ತ್ರದ ಮೇಲೆ ಗಜ-ಕೇಸರಿ ವಿನ್ಯಾಸವಿದ್ದು, ಇದು ಅವರ ರಾಯಲ್ ಲುಕ್‌ಗೆ ಸಾಕ್ಷಿಯಾಗಿತ್ತು. ಯಾವುದೇ ಅಬ್ಬರವಿಲ್ಲದ, ಅತ್ಯಂತ ಸರಳ ಹಾಗೂ ಸುಂದರ ಬಿಳಿ ಚಿನ್ನದ ಸರಗಳನ್ನು ಧರಿಸುವ ಮೂಲಕ ವಿಜಯ್ ಎಲ್ಲರ ದೃಷ್ಟಿ ಸೆಳೆದರು.

ಮಾರ್ಚ್ 4ರಂದು ನಡೆದ ಈ ಅದ್ಧೂರಿ ಔತಣಕೂಟದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟ-ನಟಿಯರು, ನಿರ್ದೇಶಕರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್, ತೆಲುಗು ಚಿತ್ರರಂಗದ ಗಣ್ಯರಾದ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಇನ್ನೂ ಹಲವಾರು ಮಂದಿ ಇವರ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us