
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ನಿರ್ದೇಶಕ ರಾಹುಲ್ ಸಾಂಕೃತ್ಯನ್ ನಿರ್ದೇಶನದ ಈ ಟ್ರೇಲರ್ ಗಮನ ಸೆಳೆದಿದೆ. ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ನಡೆದ ಶೋಷಣೆಯ ವಿರುದ್ಧ ರೂಪುಗೊಳ್ಳುವ ಹೋರಾಟದ ಕಥೆಯನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ವಿಜಯ್-ರಶ್ಮಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ಆಗಿರುವುದರಿಂದ ನಿರೀಕ್ಷೆ ಹೆಚ್ಚಿದೆ.
ಸಾಮಾನ್ಯವಾಗಿ ಟ್ರೇಲರ್ ಆರಂಭದಲ್ಲಿ ನಾಯಕನ ಅಬ್ಬರ ತೋರಿಸಲಾಗುತ್ತದೆ. ಆದರೆ, ‘ರಣಬಾಲಿ’ ಟ್ರೇಲರ್‌ನಲ್ಲಿ ಜನರ ಸಂಕಟ ಮತ್ತು ನೋವನ್ನು ತೋರಿಸಲಾಗಿದೆ. ಈ ಭಾವುಕ ಸನ್ನಿವೇಶವೇ ನಾಯಕನ ಬದಲಾವಣೆಗೆ ಕಾರಣವಾಗುತ್ತದೆ. ಆ ನಂತರ ನಟ ವಿಜಯ್ ದೇವರಕೊಂಡ ಸಿಂಗನಮಲ ಬೊಬ್ಬಿಲಿ ರಣಬಾಲಿ ಪಾತ್ರದಲ್ಲಿ ಅಖಾಡಕ್ಕೆ ಧುಮುಕುತ್ತಾರೆ. ತಮ್ಮ ರಗಡ್ ಲುಕ್ ಮೂಲಕ ಅವರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ.
ರಾಯಲಸೀಮಾ ಶೈಲಿಯ ತೆಲುಗು ಸಂಭಾಷಣೆಗಳು ‘ರಣಬಾಲಿ’ ಚಿತ್ರದಲ್ಲಿ ಬಳಕೆ ಆಗಿದೆ. ವ್ಯವಸ್ಥೆಯ ವಿರುದ್ಧ ರಣಬಾಲಿ ಯಾವ ರೀತಿ ಹೋರಾಡುತ್ತಾರೆ ಎಂಬುದು ಸಿನಿಮಾದ ಕಥೆ. ಚಿತ್ರದ ಸಾಹಸ ಸನ್ನಿವೇಶಗಳು ಗಮನ ಸೆಳೆದಿವೆ. ರಶ್ಮಿಕಾ ಮಂದಣ್ಣ ವಿಜಯ್ ಅವರ ಪತ್ನಿ ಜಯಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
They hid it from the books.
We will correct it.https://t.co/Cpk5frHciz
On the biggest screens worldwide.
A Brilliant cinematic storytelling by @Rahul_Sankrityn
This Dasara
OCT 16th❤️We will take you back in time
#Ranabaali https://t.co/Z9u6C7yze8— Vijay Deverakonda (@TheDeverakonda) October 8, 2026
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಸಿನಿಮಾ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳನ್ನು ಅಪ್ಪಳಿಸಲಿದೆ. ಈ ಚಿತ್ರವನ್ನು ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ವಿಜಯ್ ದೇವರಕೊಂಡ ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಅವರಿಗೆ ಒಂದು ದೊಡ್ಡ ಗೆಲುವು ಬೇಕಿದೆ. ‘ರಣಬಾಲಿ’ ಅವರಿಗೆ ದೊಡ್ಡ ಗೆಲುವು ಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.