
ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ದಂಪತಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರು ತಮ್ಮ ಹೊಸ ಸಿನಿಮಾ ‘ರಣಬಾಲಿ’ಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಬ್ಬರೂ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ಇದಾಗಿದ್ದು, ಸಿನಿಮಾದ ಪ್ರಚಾರವನ್ನು ಬಲು ಜೋರಾಗಿ ಮಾಡುತ್ತಿದ್ದಾರೆ. ಇದೀಗ ಈ ಜೋಡಿ ಜಂಟಿಯಾಗಿ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದ್ದು, ತಿಮ್ಮಪ್ಪನ ಆಶೀರ್ವಾದವನ್ನು ಪಡೆದಿದ್ದಾರೆ. ದಂಪತಿ ತಿರುಮಲ ದೇವಾಲಯಕ್ಕೆ ಆಗಮಿಸಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
ವಿಶೇಷವೆಂದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರು ‘ರಣಬಾಲಿ’ ಸಿನಿಮಾದ ಲುಕ್ನಲ್ಲಿಯೇ ದೇವಾಲಯಕ್ಕೆ ಭೇಟಿ ನೀಡಿದ್ದರು. ವಿಶೇಷವಾಗಿ ವಿಜಯ್ ದೇವರಕೊಂಡ ಅವರು ‘ರಣಬಾಲಿ’ ಸಿನಿಮಾನಲ್ಲಿ ಧರಿಸಿರುವ ರೀತಿಯ ದೋತಿ, ಬಿಳಿಯ ಕುರ್ತಾ ಮಾದರಿಯ ಶರ್ಟ್ ಧರಿಸಿ ಬಂದಿದ್ದರು. ಇನ್ನು ರಶ್ಮಿಕಾ ಮಂದಣ್ಣ, ಹಸಿರು ಬಣ್ಣದ ಸುಂದರ ಸೀರೆಯುಟ್ಟು ಆಗಮಿಸಿದ್ದರು. ದೇವಾಲಯಕ್ಕೆ ಆಗಮಿಸಿದ ಸ್ಟಾರ್ ನಟ-ನಟಿಯರನ್ನು ಕಾಣಲು ಜನ ಮುಗಿಬಿದ್ದಿದ್ದರು. ಈ ವೇಳೆ ತುಸು ನೂಕಾಟ-ತಳ್ಳಾಟವೂ ನಡೆದಿದ್ದು, ವಿಜಯ್ ಅವರು ಪತ್ನಿ ರಶ್ಮಿಕಾರನ್ನು ಜಾಗೃತೆಯಿಂದ ಕರೆದುಕೊಂಡು ಹೋಗುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.
#VijayDeverakonda and #RashmikaMandanna visit Tirumala and seek the blessings of Lord Venkateswara. https://t.co/uRZqLqd82V
— Filmyscoops (@Filmyscoopss) October 13, 2026
ರಶ್ಮಿಕಾ ಮತ್ತು ವಿಜಯ್ ಅವರು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರಿ ಅದ್ಧೂರಿಯಾಗಿ ವಿವಾಹವಾದರು. ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆಯಾದ ಬಳಿಕವೂ ಸಹ ಇವರು ಕೆಲ ದೇವಾಲಯಗಳಿಗೆ ಒಟ್ಟಿಗೆ ತೆರಳಿದ್ದರು.
ನಿನ್ನೆ (ಅಕ್ಟೋಬರ್ 13) ವಿಜಯ್ ಮತ್ತು ರಶ್ಮಿಕಾ ಅವರು ತಮಿಳುನಾಡು ಸಿಎಂ ವಿಜಯ್ ಅವರನ್ನು ಸಹ ಭೇಟಿ ಮಾಡಿದ್ದಾರೆ. ‘ರಣಬಾಲಿ’ ಸಿನಿಮಾ ಪ್ರಚಾರಕ್ಕಾಗಿ ತಮಿಳುನಾಡಿಗೆ ತೆರಳಿದ್ದಾಗ ಅಲ್ಲಿಯೇ ಸಿಎಂ ಅವರನ್ನು ಸಹ ಭೇಟಿ ಮಾಡಿ ಕೆಲ ಸಮಯ ಮಾತನಾಡಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಅವರು ಒಟ್ಟಿಗೆ ‘ರಣಬಾಲಿ’ ಸಿನಿಮಾನಲ್ಲಿ ನಟಿಸಿದ್ದು, ಬ್ರಿಟೀಷರ ವಿರುದ್ಧದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ವಿಲನ್ ಆಗಿ ಹಾಲಿವುಡ್ನ ಸ್ಟಾರ್ ನಟ ಅರ್ನಾಲ್ಡ್ ವೋಸ್ಲೊ ನಟನೆ ಮಾಡಿರುವುದು ವಿಶೇಷ. ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:53 am, Tue, 13 October 26