ವಿಜಯ್ ಸೇತುಪತಿ (Vijay Sethupathi) ಅಭಿಮಾನಿವರ್ಗ ದಿನಕಳೆದಂತೆ ಹೆಚ್ಚುತ್ತಲೇ ಇದೆ. ‘ಜವಾನ್’ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಿಗೆ ಬಾಲಿವುಡ್ನಿಂದಲೂ ಆಫರ್ ಬರುತ್ತಿದೆ. ಅವರು ತಮ್ಮದೇ ಆದ ಒಂದಷ್ಟು ಬೌಂಡರಿ ಹಾಕಿಕೊಂಡಿದ್ದಾರೆ. ಅದನ್ನು ದಾಟಿ ಅವರು ಎಂದಿಗೂ ಹೋಗುವುದಿಲ್ಲ. ಅವರು ಸ್ಟಾರ್ ಹೀರೋಯಿನ್ ಜೊತೆ ರೊಮ್ಯಾನ್ಸ್ ಮಾಡೋಕೆ ನೋ ಎಂದಿದ್ದರು. ಇದಕ್ಕೆ ಕಾರಣ ಏನು ಎಂಬುದನ್ನೂ ಅವರು ವಿವರಿಸಿದ್ದರು.
ವಿಜಯ್ ಸೇತುಪತಿ ಅವರು ವಿಲನ್ ಆಗಿ, ಹೀರೋ ಆಗಿ ಗಮನ ಸೆಳೆದಿದ್ದಾರೆ. ಹೊಸ ಹೊಸ ರೀತಿಯ ಪಾತ್ರಗಳನ್ನು ಮಾಡಿ ಅವರು ಗುರುತಿಸಿಕೊಂಡಿದ್ದಾರೆ. ಈಗ ವಿಜಯ್ ಸೇತುಪತಿ ಅವರು ‘ಜವಾನ್’ ಚಿತ್ರದಲ್ಲಿ ಖಡಕ್ ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದರು. ಅವರು ಈ ಮೊದಲು ನೀಡಿದ ಸಂದರ್ಶನದಲ್ಲಿ ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡೋಕೆ ನೋ ಎಂದಿದ್ದರು. ಇದಕ್ಕೆ ಕಾರಣ ‘ಉಪ್ಪೇನಾ’ ಸಿನಿಮಾ.
ತೆಲುಗಿನ ‘ಉಪ್ಪೇನಾ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಅವರು ತಂದೆ ಪಾತ್ರ ಮಾಡಿದರೆ, ಕೃತಿ ಶೆಟ್ಟಿ ಅವರು ಮಗಳಾಗಿ ಕಾಣಿಸಿಕೊಂಡಿದ್ದರು. ಒಂದು ನಟಿಯನ್ನು ಮಗಳು ಎಂದು ಪರಿಗಣಿಸಿದ ಬಳಿಕ ಅವರ ಜೊತೆ ರೊಮ್ಯಾನ್ಸ್ ಮಾಡೋದು ಹೇಗೆ ಅನ್ನೋದು ವಿಜಯ್ ಸೇತುಪತಿ ಪ್ರಶ್ನೆ. ಹೀಗಾಗಿ, ಕೃತಿ ಜೊತೆ ರೊಮ್ಯಾನ್ಸ್ ಮಾಡಲ್ಲ ಎಂದಿದ್ದರು.
ಅಚ್ಚರಿಯ ವಿಚಾರ ಎಂದರೆ ಒಂದು ಸಿನಿಮಾ ತಂಡದವರು ಬಂದು ಕೃತಿಯನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದರು. ಆದರೆ, ಇದಕ್ಕೆ ಅವರು ನೋ ಎಂದಿದ್ದರು. ಅವರ ಈ ನಿರ್ಧಾರದ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದರು.
ಇದನ್ನೂ ಓದಿ: ‘ಜವಾನ್’ ಬಳಿಕ ಯೂಟ್ಯೂಬರ್ಗೆ ಚಾನ್ಸ್ ನೀಡಿದ ನಯನತಾರಾ; ಹೊಸ ಸಿನಿಮಾ ಅನೌನ್ಸ್
‘ಜವಾನ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 562 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳು ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ಗೆ ಜೊತೆಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರು ದ್ವಿಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ವಿಜಯ್ ಸೇತುಪತಿ ವಿಲನ್ ಪಾತ್ರ ಮತ್ತಷ್ಟು ಖಡಕ್ ಆಗಿ ಕಾಣಿಸಿಕೊಳ್ಳಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ