‘ಜವಾನ್’ ಬಳಿಕ ಯೂಟ್ಯೂಬರ್ಗೆ ಚಾನ್ಸ್ ನೀಡಿದ ನಯನತಾರಾ; ಹೊಸ ಸಿನಿಮಾ ಅನೌನ್ಸ್
ಇತ್ತೀಚೆಗೆ ಹಿಂದಿಯ ‘ಜವಾನ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಯಶಸ್ಸಿನ ಬಳಿಕ ನಯನತಾರಾ ಅವರ ಖ್ಯಾತಿ ಹೆಚ್ಚಿದೆ. ಅವರು ಮನಸ್ಸು ಮಾಡಿದ್ದರೆ ಮತ್ತೋರ್ವ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ.
ಒಂದು ಸಿನಿಮಾ ಸೂಪರ್ ಹಿಟ್ ಆದರೆ ಅದರಲ್ಲಿ ನಟಿಸಿದ ಹೀರೋ/ಹೀರೋಯಿನ್ಗಳು ಹೊಸಬರಿಗೆ ಅವಕಾಶ ನೀಡೋಕೆ ಹಿಂದೇಟು ಹಾಕುತ್ತಾರೆ. ಆದರೆ, ನಯನತಾರಾ (Nayanthara) ಹಾಗಲ್ಲ. ಸೂಪರ್ ಹಿಟ್ ಚಿತ್ರ ನೀಡಿದ ಬಳಿಕವೂ ಹೊಸಬರ ಜೊತೆ ಕೆಲಸ ಮಾಡೋಕೆ ಅವರಿಗೆ ಯಾವುದೇ ಅಂಜಿಕೆ ಇಲ್ಲ. ಈಗ ಅವರು ಯೂಟ್ಯೂಬರ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾಯಕಿ ಆಗಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ.
ಇತ್ತೀಚೆಗೆ ಹಿಂದಿಯ ‘ಜವಾನ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ 500+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶಾರುಖ್ ಖಾನ್ಗೆ ಜೊತೆಯಾಗಿ ಅವರು ನಟಿಸಿದ್ದಾರೆ. ಈ ಚಿತ್ರದ ಯಶಸ್ಸಿನ ಬಳಿಕ ನಯನತಾರಾ ಅವರ ಖ್ಯಾತಿ ಹೆಚ್ಚಿದೆ. ಅವರು ಮನಸ್ಸು ಮಾಡಿದ್ದರೆ ಮತ್ತೋರ್ವ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ.
‘ಮನ್ನಂಗತ್ತಿ’ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಸಿನ್ಸ್ 1960’ ಎನ್ನುವ ಅಡಿಬರಹ ಇದೆ. ಈ ಚಿತ್ರವನ್ನು ಯೂಟ್ಯೂಬರ್ ಡ್ಯೂಡ್ ವಿಕ್ಕಿ ನಿರ್ದೇಶಿಸುತ್ತಿದ್ದಾರೆ. ಲಕ್ಷ್ಮಣ್ ಕುಮಾರ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯೋಗಿ ಬಾಬು, ಗೌರಿ ಕಿಶನ್ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ.
ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಒಂದು ಸಿನಿಮಾ ಸೂಪರ್ ಹಿಟ್ ಆದ ಬಳಿಕ ಈ ರೀತಿ ಹೊಸಬರಿಗೆ ಅವಕಾಶ ನೀಡುವವರ ಸಂಖ್ಯೆ ತುಂಬಾನೇ ಕಡಿಮೆ. ಆದರೆ, ನಯನತಾರಾ ಅವರು ಈ ರೀತಿಯ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ.
ಇದನ್ನೂ ಓದಿ: ‘ಜವಾನ್’ ಚಿತ್ರದ ಬಳಿಕ ನಯನತಾರಾಗೆ ಸಿಗುತ್ತಾ ಮತ್ತೊಂದು ಗೆಲುವು?
ನಯನತಾರಾ ನಟನೆಯ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿ ಇದೆ. ಅವರ ನಟನೆಯ ‘ಉರೈವನ್’ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಇದರ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಜಯಂ ರವಿ ಹೀರೋ. ಈ ಸಿನಿಮಾಗೆ ಎ ಪ್ರಮಾಣಪತ್ರ ಸಿಕ್ಕಿದೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೂಡ ಇದೇ ದಿನ ರಿಲೀಸ್ ಆಗುತ್ತಿದ್ದು, ಭರ್ಜರಿ ಪೈಪೋಟಿ ಉಂಟಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ