ಸಣ್ಣ ಸಣ್ಣ ಕಾರಣಕ್ಕೆ ಕೊಲೆ ಬೆದರಿಕೆ ಎದುರಿಸಿದ ಸೆಲೆಬ್ರಿಟಿಗಳಿವರು..

ಸೆಲೆಬ್ರಿಟಿಗಳಿಗೆ ಜನಪ್ರಿಯತೆ ಜೊತೆಗೆ ಒಂದಷ್ಟು ಮಂದಿ ವಿರೋಧಿಗಳು ಕೂಡ ಹುಟ್ಟಿಕೊಳ್ಳುತ್ತಾರೆ. ಅನೇಕರಿಗೆ ಹಲವು ಕಾರಣಗಳಿಂದ ಕೊಲೆ ಬೆದರಿಕೆ ಹಾಕಲಾಗುತ್ತದೆ. ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರಿಗೆ ಇದೇ ರೀತಿಯ ಕೊಲೆ ಬೆದರಿಕೆ ಬಂದಿದೆ.

ಸಣ್ಣ ಸಣ್ಣ ಕಾರಣಕ್ಕೆ ಕೊಲೆ ಬೆದರಿಕೆ ಎದುರಿಸಿದ ಸೆಲೆಬ್ರಿಟಿಗಳಿವರು..
ಸಣ್ಣ ಸಣ್ಣ ಕಾರಣಕ್ಕೆ ಕೊಲೆ ಬೆದರಿಕೆ ಎದುರಿಸಿದ ಸೆಲೆಬ್ರಿಟಿಗಳಿವರು..
Edited By:

Updated on: Sep 28, 2023 | 9:06 AM

ಸೆಲೆಬ್ರಿಟಿಗಳಿಗೆ ಜನಪ್ರಿಯತೆ ಜೊತೆಗೆ ಒಂದಷ್ಟು ಮಂದಿ ವಿರೋಧಿಗಳು ಕೂಡ ಹುಟ್ಟಿಕೊಳ್ಳುತ್ತಾರೆ. ಅನೇಕರಿಗೆ ಹಲವು ಕಾರಣಗಳಿಂದ ಕೊಲೆ ಬೆದರಿಕೆ ಹಾಕಲಾಗುತ್ತದೆ. ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರಿಗೆ ಇದೇ ರೀತಿಯ ಕೊಲೆ ಬೆದರಿಕೆ ಬಂದಿದೆ. ಮುತ್ತಯ್ಯ ಮುರುಳೀಧರನ್ ಬಯೋಪಿಕ್​ನಲ್ಲಿ ವಿಜಯ್ ಸೇತುಪತಿ (Vijay Sethupathi) ನಟಿಸಬೇಕಿತ್ತು. ಆದರೆ, ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ವಿಜಯ್ ಬಳಿ ಕೆಲವು ರಾಜಕಾರಣಿಗಳು ಈ ಸಿನಿಮಾ ಮಾಡದಂತೆ ಒತ್ತಡ ತಂದರು. ಈ ಕಾರಣದಿಂದಲೇ ಅವರು ಬಯೋಪಿಕ್​ನಿಂದ ಹೊರ ಬಿದ್ದಿದ್ದರು. ಕೆಲವು ಸಿಲ್ಲಿ ಕಾರಣಕ್ಕೆ ಕೊಲೆ ಬೆದರಿಕೆ ಬಂದ ಕಲಾವಿದರ ಪಟ್ಟಿ ಇಲ್ಲಿದೆ.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನ ಸ್ಟಾರ್ ಹೀರೋ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಅಕ್ಷಯ್ ಕುಮಾರ್ ಅವರು ಮನೆಯ ಕೆಲಸದವಳನ್ನು ತೆಗೆದು ಹಾಕಿದ್ದಕ್ಕೆ ಗ್ಯಾಂಗ್​ಸ್ಟರ್ ರವಿ ಪೂಜಾರಿಯಿಂದ ಅವರಿಗೆ ಕೊಲೆ ಬೆದರಿಕೆ ಬಂದಿತ್ತು!

ವರುಣ್ ಧವನ್

ವರುಣ್ ಧವನ್ ಅವರು ಬಾಲಿವುಡ್​ನ ಫೇಮಸ್ ಹೀರೋ. ಅವರ ಗರ್ಲ್​ಫ್ರೆಂಡ್ ಆಗಿದ್ದ (ಈಗ ಪತ್ನಿ) ನತಾಶಾ ದಲಾಲ್ ಅವರನ್ನು ಕೊಲ್ಲುವ ಬೆದರಿಕೆ ಬಂದಿತ್ತು. ಇವರ ಮದುವೆ ವಿಚಾರ ಹರಿದಾಡಿದಾಗ ಈ ಬೆಳವಣಿಗೆ ನಡೆದಿತ್ತು.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರು ಬಾಲಿವುಡ್​ನಲ್ಲಿ ಸಖತ್ ಪೇಮಸ್ ಆಗಿದ್ದಾರೆ. ಕರ್ನಾಟಕದ ಮೂಲದ ಅವರು ಬಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ. ಅವರು ‘ಪದ್ಮಾವತ್’ ಚಿತ್ರದಲ್ಲಿ ಪದ್ಮಾವತಿ ಪಾತ್ರ ಮಾಡಿದಾಗ ಅವರನ್ನು ಅನೇಕರು ಟೀಕಿಸಿದ್ದರು. ಅವರಿಗೆ ಕೊಲೆ ಬೆದರಿಕೆ ಕೂಡ ಬಂದಿತ್ತು. ‘ಪದ್ಮಾವತ್’ ಚಿತ್ರದಲ್ಲಿ ಕಥೆಯನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ. ಪದ್ಮಾವತಿಗೆ ಅವಮಾನ ಮಾಡಲಾಗಿದೆ ಎಂದು ಅನೇಕರು ಆರೋಪಿಸಿದ್ದರು. ಸಿನಿಮಾ ಅನೇಕ ರಾಜ್ಯಗಳಲ್ಲಿ ಬ್ಯಾನ್ ಆಗಿತ್ತು.

ಮಲ್ಲಿಕಾ ಶೆರಾವಾತ್

ಮಲ್ಲಿಕಾ ಶೆರಾವತ್ ಅವರು ನಟನೆಯಿಂದ ದೂರವೇ ಉಳಿದುಕೊಂಡಿದ್ದಾರೆ. ರಾಜಸ್ಥಾನದ ದಲಿತ ಸಾಮಾಜಿಕ ಕಾರ್ಯಕರ್ತೆ ಭನ್ವಾರಿ ದೇವಿ ಅವರ ಜೀವನದ ಕುರಿತ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ನಟಿಸಬೇಕಿತ್ತು. ಈ ಸಿನಿಮಾ ಘೋಷಣೆ ಆದಾಗ ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ಸದ್ಯ, ಅವರು ನಟನೆಯ ಬಗ್ಗೆ ಗಮನ ಹರಿಸುತ್ತಿಲ್ಲ.

ಅದಾ ಶರ್ಮಾ

ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ಫೇಮಸ್ ಆದರು. ಅವರು ಈ ಮೊದಲು ಗ್ಲಾಮರ್ ಪಾತ್ರದಲ್ಲಿ ನಟಿಸಿದ್ದರು. ಕೇರಳ ಸ್ಟೋರಿ ಸಿನಿಮಾದಲ್ಲಿ ಕೇರಳದ ಹುಡುಗಿಯ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅದಾ ಶರ್ಮಾಗೆ ಕೊಲೆ ಬೆದರಿಕೆ ಬಂದಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗಿದೆ.

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್​ಗೆ ಮನ್ವಿಂದರ್ ಸಿಂಗ್ ಅವರು ಕೊಲೆ ಬೆದರಿಕೆ ಹಾಕಿದ್ದರು. ಈತ ಕತ್ರಿನಾ ಅಭಿಮಾನಿ ಆಗಿದ್ದ. ಆತನು ಕೊಲೆ ಬೆದರಿಕೆ ಹಾಕಿದ್ದ. ಕತ್ರಿನಾ ಅವರನ್ನು ಮನ್ವಿಂದರ್ ಹಿಂಬಾಲಿಸುತ್ತಿದ್ದ. ಕೊನೆಗೂ ಆತನ ಅರೆಸ್ಟ್ ಮಾಡಲಾಯಿತು.

ಸೋನು ನಿಗಮ್

ವರ್ಲ್ಡ್​ ಟೂರ್ ಒಂದರಲ್ಲಿ ಭಾಗಿ ಆಗಲು ಸೋನು ನಿಗಮ್​ ನಿರಾಕರಿಸಿದ್ದರು. ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಲಾಗಿತ್ತು. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿತ್ತು.

ಇದನ್ನೂ ಓದಿ: ಮುರಳೀಧರನ್ ಸಿನಿಮಾದಿಂದ ವಿಜಯ್ ಸೇತುಪತಿ ಹೊರಹೋಗಿದ್ದೇಕೆ?

ರಾಮ್ ಗೋಪಾಲ್ ವರ್ಮಾ

ರಾಮ್ ಗೋಪಾಲ್ ವರ್ಮಾ ಅವರು ನಾನಾ ಕಾರಣಗಳಿಂದ ಆಗಾಗ ಸುದ್ದಿ ಆಗುತ್ತಾರೆ. ‘ರಕ್ತ ಚರಿತ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅವರಿಗೆ ಕೊಲೆ ಬೆದರಿಕೆ ಬಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 8:07 am, Thu, 28 September 23