AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸ ಮಾಡಿತು ದಳಪತಿ ವಿಜಯ್ ಮಾಡಿದ ಆ ಸೀಕ್ರೆಟ್ ಪ್ಲ್ಯಾನ್; ಭರ್ಜರಿ ಗೆಲುವಿಗೆ ಇದೇ ಕಾರಣ

ದಳಪತಿ ವಿಜಯ್ ಅವರ TVK ಪಕ್ಷ ತಮಿಳುನಾಡು ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಇದು ಕೇವಲ ಸ್ಟಾರ್‌ಡಮ್‌ನಿಂದಲ್ಲ, ಬದಲಾಗಿ ದಶಕಗಳ ವ್ಯವಸ್ಥಿತ ಸಂಘಟನೆ, 'ವಿಜಯ್ ಮಕ್ಕಳ ಇಯಕ್ಕಂ' ಮೂಲಕ ಮಾಡಿದ ಸಮಾಜ ಸೇವೆ, ಮತ್ತು ಅಭಿಮಾನಿಗಳನ್ನು ಕಾರ್ಯಕರ್ತರನ್ನಾಗಿ ಪರಿವರ್ತಿಸಿದ ಚಾಣಾಕ್ಷ ತಂತ್ರದಿಂದ ಸಾಧ್ಯವಾಗಿದೆ. ಕೆಳಮಟ್ಟದಿಂದಲೇ ಬಲವಾದ ನೆಟ್‌ವರ್ಕ್ ನಿರ್ಮಿಸಿ, ಯುವಜನತೆ ಮತ್ತು ಮಹಿಳೆಯರನ್ನು ಆಕರ್ಷಿಸಿ ವಿಜಯ್ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಕೆಲಸ ಮಾಡಿತು ದಳಪತಿ ವಿಜಯ್ ಮಾಡಿದ ಆ ಸೀಕ್ರೆಟ್ ಪ್ಲ್ಯಾನ್; ಭರ್ಜರಿ ಗೆಲುವಿಗೆ ಇದೇ ಕಾರಣ
ವಿಜಯ್
ರಾಜೇಶ್ ದುಗ್ಗುಮನೆ
|

Updated on: May 06, 2026 | 6:04 PM

Share

ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಮೂಲಕ ಭಾರತೀಯ ರಾಜಕೀಯದಲ್ಲೇ ಹೊಸ ಸಂಚಲನ ಮೂಡಿಸಿದೆ. ಟಿವಿಕೆ ಅಬ್ಬರಕ್ಕೆ ಆಡಳಿತಾರೂಢ ಎಐಎಡಿಎಂಕೆ ಪಕ್ಷವೇ ನೆಲಕಚ್ಚಿದೆ. ಈ ಐತಿಹಾಸಿಕ ಜಯದ ಹಿಂದೆ ವಿಜಯ್ ಅವರ ದಶಕಗಳ ಕಾಲದ ವ್ಯವಸ್ಥಿತ ಸಂಘಟನೆ ಮತ್ತು ಅಭಿಮಾನಿಗಳನ್ನು ಕಾರ್ಯಕರ್ತರನ್ನಾಗಿ ಬದಲಿಸಿದ ಚಾತುರ್ಯ ಅಡಗಿದೆ. ಆ ಬಗ್ಗೆ ಇಲ್ಲಿದೆ ವಿವರ.

1.ವಿಜಯ್ ಗೆಲುವಿನ ತಂತ್ರ ಬಯಲು

2.ಸಹಾಯ ಮಾಡಿತು ಅಭಿಮಾನಿ ಸಂಘಟನೆ 

3. ಚಾಣಾಕ್ಷತೆಯಿಂದ ವಿಜಯ್​ಗೆ ಗೆಲುವು 

ವಿಜಯ್ ಅವರ ರಾಜಕೀಯಕ್ಕೆ ಕಾಲಿಡುವ ಘೋಷಣೆ ಮಾಡಿದ್ದು ಕೆಲ ವರ್ಷಗಳ ಹಿಂದೆ. 2024ರ ಫೆಬ್ರವರಿ 2ರಂದು ಪಕ್ಷ ಘೋಷಣೆ ಮಾಡಿದರು. ಹಲವು ವರ್ಷ ಸೈಕಲ್ ಹೊಡೆದರೂ ಸಿಗದ ಗೆಲುವು ಎರಡೇ ವರ್ಷಗಳಲ್ಲಿ ಸಿಗಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ. ಆದರೆ, ಇದರ ಹಿಂದಿನ ಕಥೆ ಬೇರೆಯದೇ ಇದೆ.

ವಿಜಯ್ ಅವರ ದೊಡ್ಡ ಬಲ ಎಂದರೆ ಅಭಿಮಾನಿಗಳು. ಹಲವು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಮಿಂಚಿದ ವಿಜಯ್​​ಗೆ ಹುಚ್ಚು ಅಭಿಮಾನಿಗಳಿದ್ದಾರೆ. ಅವರು ಹೇಳಿದ್ದನ್ನು ಶಿರಸಾ ಪಾಲಿಸುತ್ತಾರೆ. ಇದು ಅವರಿಗೆ ಬಲ ತಂದಿತ್ತು. 2009ರಲ್ಲಿ ಅವರು ಆರಂಭಿಸಿದ ‘ವಿಜಯ್ ಮಕ್ಕಳ ಇಯಕ್ಕಂ’ (VMI) ಫೌಂಡೇಷನ್ ವಿಜಯ್ ಗೆಲುವಿನ ಹಿಂದಿರೋ ದೊಡ್ಡ ಬಲ.

ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾಗಲೇ ವಿಜಯ್ ತಮ್ಮ ಅಭಿಮಾನಿಗಳನ್ನು ಕೇವಲ ಸಿನಿಮಾ ಪ್ರಚಾರಕ್ಕೆ ಸೀಮಿತಗೊಳಿಸಲಿಲ್ಲ. ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿದ್ದರು. ರಕ್ತದಾನ, ಉಚಿತ ಆಹಾರ ವಿತರಣೆ ಮತ್ತು ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಈ ಸಂಘಟನೆಯು ರಾಜ್ಯದ ಮೂಲೆ ಮೂಲೆಗಳಲ್ಲಿ ಬೇರೂರಿತ್ತು. ವಿಜಯ್ ಕೇವಲ ನಟನಾಗಿ ಮಾತ್ರ ಕಾಣದೆ, ಕಷ್ಟದಲ್ಲಿರುವ ವ್ಯಕ್ತಿಗಳಿಗೆ ನೆರವಾಗಿ ಹಾಗೂ ವಿಜಯ್ ಮಕ್ಕಳ ಇಯಕ್ಕಂ ಮೂಲಕ ಸಹಾಯ ಮಾಡುವ ವ್ಯಕ್ತಿಯಾಗಿ ಕಂಡರು. ಚುನಾವಣೆ ಸಮೀಪಿಸುತ್ತಿದ್ದಂತೆ, ಪ್ರತಿಯೊಂದು ಬೂತ್ ಮಟ್ಟದಲ್ಲೂ ಭದ್ರವಾದ ನೆಟ್‌ವರ್ಕ್ ರೂಪಿಸಿದರು.

ವ್ಯವಸ್ಥಿತ ಪಕ್ಷ ಸಂಘಟನೆ:

ರಾಜಕೀಯ ಪ್ರವೇಶಕ್ಕೂ ಮುನ್ನವೇ ವಿಜಯ್ ಅತ್ಯಂತ ಯೋಜಿತವಾಗಿ ಹೆಜ್ಜೆ ಇಟ್ಟಿದ್ದರು. ಕೆಳಹಂತದ ಕಾರ್ಯಕರ್ತರಿಗೆ ಜವಾಬ್ದಾರಿ ಹಂಚುವುದು, ಯುವಜನತೆಯನ್ನು ಆಕರ್ಷಿಸುವುದು ಮತ್ತು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಅವರ ಸಂಘಟನಾ ಶಕ್ತಿ ಯಶಸ್ವಿಯಾಯಿತು. ಅವರ ಸಿನಿಮಾ ಇಮೇಜ್ ಅನ್ನು ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಬಳಸಿಕೊಂಡಿದ್ದರು. ಸಿನಿಮಾಗಳ ಮೂಲಕ ಅವರ ರಾಜಕೀಯ ಸಿದ್ಧಾಂತವನ್ನು ಜನರಿಗೆ ತಲುಪಿಸಿದರು.

ಐಷಾರಾಮಿ ಜೀವನ ಮತ್ತು ಸರಳ ನಾಯಕತ್ವ:

ಚೆನ್ನೈನ ಸಮುದ್ರ ತೀರದಲ್ಲಿರುವ ಸುಮಾರು 80 ಕೋಟಿ ರೂಪಾಯಿ ಬೆಲೆಯ, ಹಾಲಿವುಡ್ ನಟ ಟಾಮ್ ಕ್ರ್ಯೂಸ್ ಅವರ ಮನೆಯಿಂದ ಸ್ಫೂರ್ತಿ ಪಡೆದ ಐಷಾರಾಮಿ ಬಂಗಲೆಯಲ್ಲಿ ವಿಜಯ್ ವಾಸವಿದ್ದರೂ, ಅಭಿಮಾನಿಗಳ ಪಾಲಿಗೆ ಅವರು ಎಂದಿಗೂ ಕೈಗೆಟುಕುವ ನಾಯಕನಾಗಿದ್ದರು. ಈ ನಿಕಟ ಸಂಪರ್ಕವೇ ಅವರ ಪಕ್ಷಕ್ಕೆ ಚುನಾವಣಾ ಸುನಾಮಿ ಎಬ್ಬಿಸಲು ಬೇಕಾದ ಶಕ್ತಿಯನ್ನು ನೀಡಿತು.

ಇದನ್ನೂ ಓದಿ: ವಿಜಯ್ ಗೆಲುವಿಗೆ ಕೇವಲ ‘ಸ್ಟಾರ್ ಗಿರಿ’ ಕಾರಣವೇ? ನಿಜ ಏನೆಂದು ಇಲ್ಲಿ ತಿಳಿಯಿರಿ

ಸಿನಿಮಾ ನಟನೊಬ್ಬ ಕೇವಲ ವರ್ಚಸ್ಸಿನಿಂದ ಮಾತ್ರವಲ್ಲದೆ, ಬಲಿಷ್ಠವಾದ ಸಂಘಟನಾ ಚಾಣಾಕ್ಷತೆಯಿಂದ ಹೇಗೆ ಅಧಿಕಾರ ಹಿಡಿಯಬಹುದು ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ. ದಶಕಗಳ ಕಾಲದ ಅಭಿಮಾನಿಗಳ ಪ್ರೀತಿಯನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಅವರ ಕಾರ್ಯತಂತ್ರ ಸಂಪೂರ್ಣ ಯಶಸ್ವಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?