ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್

Jr NTR and Prashant Neel: ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾಕ್ಕೆ ಹೊಸ-ಹೊಸ ಕಲಾವಿದರು ಸೇರುತ್ತಿದ್ದಾರೆ. ಇತ್ತೀಚೆಗಷ್ಟೆ ಮಲಯಾಳಂ ಸ್ಟಾರ್ ನಟ ಟೊವಿನೋ ಥೋಮಸ್ ಅವರನ್ನು ಪ್ರಮುಖ ಪಾತ್ರೊಂದಕ್ಕಾಗಿ ಕೇಳಲಾಗಿತ್ತು. ಆದರೆ ಟೊವಿನೊ, ಪಾತ್ರವನ್ನು ನಿರಾಕರಿಸಿದ್ದರು. ಇದೀಗ ಅದೇ ಪಾತ್ರಕ್ಕೆ ಬಾಲಿವುಡ್ ನಟನೊಬ್ಬನ ಆಯ್ಕೆ ಮಾಡಿದ್ದಾರಂತೆ ಪ್ರಶಾಂತ್ ನೀಲ್.

ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್
Jr Ntr Neel

Updated on: Apr 12, 2026 | 7:19 PM

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ (Prashant Neel) ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದ ಚಿತ್ರೀಕರಣ ಕರ್ನಾಟಕ, ಹೈದರಾಬಾದ್ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾಕ್ಕೆ ಹೊಸ-ಹೊಸ ಕಲಾವಿದರು ಸೇರುತ್ತಿದ್ದಾರೆ. ಇತ್ತೀಚೆಗಷ್ಟೆ ಮಲಯಾಳಂ ಸ್ಟಾರ್ ನಟ ಟೊವಿನೋ ಥೋಮಸ್ ಅವರನ್ನು ಪ್ರಮುಖ ಪಾತ್ರೊಂದಕ್ಕಾಗಿ ಕೇಳಲಾಗಿತ್ತು. ಆದರೆ ಟೊವಿನೊ, ಪಾತ್ರವನ್ನು ನಿರಾಕರಿಸಿದ್ದರು. ಇದೀಗ ಅದೇ ಪಾತ್ರಕ್ಕೆ ಬಾಲಿವುಡ್ ನಟನೊಬ್ಬನ ಆಯ್ಕೆ ಮಾಡಿದ್ದಾರಂತೆ ಪ್ರಶಾಂತ್ ನೀಲ್.

ಪ್ರಶಾಂತ್ ನೀಲ್ ನಿರ್ದೇಶನದ, ಜೂನಿಯರ್ ಎನ್‌ಟಿಆರ್ ನಟನೆಯ ಹೊಸ ಚಿತ್ರಕ್ಕಾಗಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ಸಂಪರ್ಕಿಸಲಾಗಿದೆ. ಈ ಮೊದಲು ಮಲಯಾಳಂ ನಟ ಟೊವಿನೋ ಥಾಮಸ್ ಅವರು ನಿರ್ವಹಿಸಬೇಕಿದ್ದ ಪಾತ್ರಕ್ಕೆ ಈಗ ವಿವೇಕ್ ಒಬೆರಾಯ್ ಮೊದಲ ಆಯ್ಕೆಯಾಗಿದ್ದಾರೆ. ವಿವೇಕ್ ಒಬೆರಾಯ್ ಈಗಾಗಲೇ ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅದರ ಜೊತೆಗೆ ಇದೀಗ ‘ಡ್ರ್ಯಾಗನ್’ ಸಿನಿಮಾನಲ್ಲಿಯೂ ವಿವೇಕ್ ನಟಿಸಲಿದ್ದಾರೆ.

ಇದನ್ನೂ ಓದಿ:‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ನಿಲ್ಲಿಸಿದ ಪ್ರಶಾಂತ್ ನೀಲ್, ಜೂ. ಎನ್​ಟಿಆರ್; ಕಾರಣ ಏನು?

ವಿವೇಕ್ ಒಬೆರಾಯ್​​ಗೆ ದಕ್ಷಿಣದ ಚಿತ್ರರಂಗ ಹೊಸದೇನೂ ಅಲ್ಲ. ಹಲವು ವರ್ಷಗಳಿಂದಲೂ ಅವರು ಬಾಲಿವುಡ್ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಕನ್ನಡದ ‘ರುಸ್ತುಂ’ ಸಿನಿಮಾನಲ್ಲಿಯೂ ವಿವೇಕ್ ಒಬೆರಾಯ್ ನಟಿಸಿದ್ದಾರೆ. ದಶಕಗಳ ಹಿಂದೆ ಬಾಲಿವುಡ್​​ನಲ್ಲಿ ಚಾಕಲೇಟ್ ಹೀರೋ, ಶಾರುಖ್ ಖಾನ್​​ಗೆ ಸ್ಪರ್ಧಿ ಎಂದೆಲ್ಲ ಎನಿಸಿಕೊಂಡಿದ್ದ ವಿವೇಕ್ ಒಬೆರಾಯ್ ಈಗ ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಡ್ರ್ಯಾಗನ್’ ಸಿನಿಮಾನಲ್ಲಿಯೂ ಸಹ ವಿವೇಕ್ ಅವರದ್ದು ವಿಲನ್ ಪಾತ್ರ ಎನ್ನಲಾಗುತ್ತಿದೆ.

ಜೂ ಎನ್​​ಟಿಆರ್ ನಟನೆಯ ಸಿನಿಮಾನಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ. ಆದರೆ ಮೊದಲ ಬಾರಿಗೆ ಈ ಸಿನಿಮಾಕ್ಕಾಗಿ ವಿದೇಶಕ್ಕೆ ತೆರಳಿ ಚಿತ್ರೀಕರಣ ಮಾಡಿದ್ದಾರೆ ಪ್ರಶಾಂತ್ ನೀಲ್. ಅದು ಮಾತ್ರವೇ ಅಲ್ಲದೆ, ಈ ಸಿನಿಮಾನಲ್ಲಿ ತಮ್ಮ ಎಂದಿನ ಡಾರ್ಕ್ ಶೇಡ್ ಬಿಟ್ಟು ತುಸು ಕಲರ್​​ಫುಲ್ ಶೇಡ್​​ಗಳು ಕಾಣಿಸಲಿವೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us