ಪ್ಲೀಸ್​ ಬೇರೆಯವರ ಅವಕಾಶ ಕಿತ್ತುಕೊಳ್ಳಬೇಡಿ; ಎಲಿಮಿನೇಟ್​ ಆದ ವೈಜಯಂತಿಗೆ ಸುದೀಪ್​ ಕಿವಿಮಾತು

|

Updated on: Apr 11, 2021 | 10:31 PM

ಭಾನುವಾರ (ಏಪ್ರಿಲ್​ 11) ಪ್ರಶಾಂತ್​, ದಿವ್ಯಾ ಸುರೇಶ್​, ಶುಭಾ ಪೂಂಜಾ, ರಾಜೀವ್​ ಸೇಫ್​ ಆದರು. ಕೊನೆಯಲ್ಲಿ ವೈಜಯಂತಿ ಅಡಿಗ ಅವರು ಬಿಗ್​ ಬಾಸ್​ನಿಂದ ಹೊರಬಂದಿದ್ದಾರೆ.

ಪ್ಲೀಸ್​ ಬೇರೆಯವರ ಅವಕಾಶ ಕಿತ್ತುಕೊಳ್ಳಬೇಡಿ; ಎಲಿಮಿನೇಟ್​ ಆದ ವೈಜಯಂತಿಗೆ ಸುದೀಪ್​ ಕಿವಿಮಾತು
ಸುದೀಪ್​
Follow us on

ಬಿಗ್​ ಬಾಸ್​ ಮನೆಯ ಆರನೇ ವಾರದ ಎಲಿಮಿನೇಷನ್​ಗೆ ರೋಚಕ ಟ್ವಿಸ್ಟ್​ ಸಿಕ್ಕಿದೆ. ಬಿಗ್​ ಬಾಸ್​ ಮನೆಯಿಂದ ವೈಜಯಂತಿ ಅಡಿಗ ಔಟ್​ ಆಗಿದ್ದಾರೆ. ನಾಲ್ಕೇ ದಿನಕ್ಕೆ ಅವರು ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ ಶಮಂತ್​ ಬ್ರೋ ಗೌಡ, ಅರವಿಂದ್ ಕೆ.ಪಿ, ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್​ ಮೇಲೆ ಎಲಿಮಿನೇಷನ್​ ಆಗಿದ್ದರು. ಆದರೆ, ಕೊನೆಯಲ್ಲಿ ಇದಕ್ಕೆ ಟ್ವಿಸ್ಟ್​ ಸಿಕ್ಕಿದೆ.

ಶನಿವಾರ (ಏಪ್ರಿಲ್​ 10) ನಿಧಿ ಹಾಗೂ ಅರವಿಂದ್​ ಸೇಫ್​ ಆಗಿದ್ದರು. ಭಾನುವಾರ (ಏಪ್ರಿಲ್​ 11) ಪ್ರಶಾಂತ್​, ದಿವ್ಯಾ ಸುರೇಶ್​, ಶುಭಾ ಪೂಂಜಾ, ರಾಜೀವ್​ ಕೂಡ ಸೇಫ್​ ಆದರು. ಕಡಿಮೆ ಮತ ಸಿಕ್ಕು ಶಮಂತ್ ಎಲಿಮಿನೇಟ್​ ಎಂದು ಸುದೀಪ್​ ಘೋಷಣೆ ಮಾಡಿದರು. ಆದರೆ, ಸುದೀಪ್​ ಒಂದು ಆಯ್ಕೆ ಕೂಡ ನೀಡಿದರು.

ಕೇವಲ ನಾಲ್ಕು ದಿನದ ಹಿಂದೆ ವೈಜಯಂತಿ ಅಡಿಗ ಅವರು ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದರು. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಅವರಿಗೆ ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. ಅವರ ಆಗಮನದಿಂದ ಮನೆಯಲ್ಲಿ ಹೆಚ್ಚೇನೂ ಬದಲಾವಣೆ ಆಗಿರಲಿಲ್ಲ. ಎಲ್ಲರೊಂದಿಗೂ ನಗುನಗುತ್ತಲೇ ಮಾತನಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರು ನನಗೆ ಮನೆಯಿಂದ ಹೊರ ಹೋಗಬೇಕು ಎಂದು ಪದೇ ಪದೇ ಹೇಳುತ್ತಿದ್ದರು.  ಹೀಗಾಗಿ, ಸುದೀಪ್​ ನೀವು ಮನೆಯಿಂದ ಹೊರ ಹೋಗುತ್ತೀರಿ ಎಂದಾದರೆ ನಾವು ಅವಕಾಶ ನೀಡುತ್ತೇವೆ ಎಂದರು.

ಈ ಅವಕಾಶವನ್ನು ವೈಜಯಂತಿ ಒಪ್ಪಿ ಮನೆಯಿಂದ ಹೊರ ನಡೆಯುತ್ತೇನೆ ಎಂದರು. ಇದಕ್ಕೆ ಸುದೀಪ್​ ಪ್ರತಿಕ್ರಿಯಿಸಿದರು. ನೀವು ಇಷ್ಟೊಂದು ಶ್ರಮ ಹಾಕಿ ಬಂದಿದ್ದೀರಿ. ವೈಜಯಂತಿ ಅವರೇ ನಿಮ್ಮ ಜಾಗದಲ್ಲಿ ಮತ್ತೊಬ್ಬರು ಬರಬಹುದಿತ್ತು. ನೀವು ಮತ್ತೊಬ್ಬರ ಅವಕಾಶ ಕಿತ್ತುಕೊಂಡಂತೆ. ಹೀಗೆ ಮಾಡಬೇಡಿ ಎಂದು ಸುದೀಪ್​ ಹೇಳಿದರು. ನಾನು ಮನೆಯಿಂದ ಹೊರ ಬರುತ್ತಿರುವುದಕ್ಕೆ ನನ್ನದೇ ಆದ ಕಾರಣವಿದೆ. ದಯವಿಟ್ಟು ಬೇರೆ ರೀತಿಯಲ್ಲಿ ತೆಗೆದುಕೊಳ್ಳಬೇಡಿ ಎಂದು ವೈಜಯಂತಿ ಹೇಳಿದರು. ಸೇಫ್​ ಆದ ಶಮಂತ್​ ಮುಂದಿನ ವಾರದ ನಾಮಿನೇಷನ್​ಗೆ ನೇರವಾಗಿ ನಾಮಿನೇಟ್​ ಆದರು. ಈ ಬೆಳವಣಿಗೆಯಿಂದ ಸಹಜವಾಗಿಯೇ ಮನೆಯೊಳಗಿನ ಇತರೆ ಸದಸ್ಯರಿಗೆ ಅಚ್ಚರಿ ಆಗಿದೆ.

ವೈಜಯಂತಿ ಮಾತ್ರವಲ್ಲದೆ ನಟಿ ಪ್ರಿಯಾಂಕಾ ತಿಮ್ಮೇಶ್​ ಹಾಗೂ ಪತ್ರಕರ್ತ ಚಕ್ರವತ್ರಿ ಚಂದ್ರಚೂಡ್​ ಅವರು ಅವರು ಸಹ ವೈಲ್ಡ್​ ಕಾರ್ಡ್​ ಮೂಲಕ ಮನೆಯೊಳಗೆ ಬಂದಿದ್ದರು. ಸದ್ಯ ಅವರು ಆಟ ಮುಂದುವರಿಸಿದ್ದಾರೆ.

ಇದನ್ನೂ ಒದಿ: Bigg Boss Elimination: ಆರನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ..

Published On - 10:28 pm, Sun, 11 April 21