ಟಿವಿ9 ನೆಟ್ವರ್ಕ್ ನಡೆಸುತ್ತಿರುವ What India Thinks Today ಎಂಬ ಕಾರ್ಯಕ್ರಮದಲ್ಲಿ ಖ್ಯಾತ ನಟಿ ರವೀನಾ ಟಂಡನ್ ಕೂಡ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು ಈ ವೇದಿಕೆಯಲ್ಲಿ ತಮ್ಮ ಸಂವಾದ ನಡೆಸಲಿದ್ದಾರೆ. ಬಾಲಿವುಡ್ ನಟಿಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿವಹಿಸಲು ಉತ್ಸಾಹಕರಾಗಿದ್ದಾರೆ. ಕಾರ್ಯಕ್ರಮವು ದೆಹಲಿಯಲ್ಲಿ ಫೆ.25ರಿಂದ 27ರವರೆಗೆ ನಡೆಯಲಿದೆ. ರವೀನಾ ಟಂಡನ್ ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
90 ರ ದಶಕದಲ್ಲಿ ತನ್ನ ನಟನೆ ಮತ್ತು ನೃತ್ಯದಿಂದ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದ ನಟಿ ರವೀನಾ ಟಂಡನ್, ವಾಟ್ ಇಂಡಿಯಾ ಥಿಂಕ್ಸ್ ಟುಡೇಸ್ ಸೆಗ್ಮೆಂಟ್ ಫೈರ್‌ಸೈಡ್ ಚಾಟ್ನ ಪ್ರಮುಖ ಅತಿಥಿಯಾಗಿದ್ದಾರೆ. ಮಹಿಳಾ ಕ್ಷೇತ್ರದ ಬಗ್ಗೆ ಅವರು ಮಾತನಾಡಲಿದ್ದಾರೆ. ದಿ ನ್ಯೂ ಹೀರೋ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸಂವಾದ ನಡೆಸಲಿದ್ದು, ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆಯೂ ಪ್ರೇಕ್ಷಕರ ಮುಂದೆ ತಿಳಿಸಲಿದ್ದಾರೆ.
ಇದನ್ನೂ ಓದಿ: ಲೋಕ ಚುನಾವಣೆಗೆ ಹರಿಯಾಣದ ಸಿದ್ಧತೆ ಬಗ್ಗೆ ಟಿವಿ9ನಲ್ಲಿ ಚರ್ಚೆ: ಮನೋಹರ್ ಲಾಲ್ ಖಟ್ಟರ್
ಮಹಿಳಾ ಸಬಲೀಕರಣದ ಬಗ್ಗೆ ಸದಾ ದನಿಯೆತ್ತುವ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲೂ ತುಂಬಾ ಸಕ್ರಿಯರಾಗಿದ್ದಾರೆ. ಈ ಕಾರಣಕ್ಕೆ ಅವರಿಗೆ ತಮ್ಮ ಜೀವನ ಕಹಿ-ಸಿಹಿ ವಿಚಾರಗಳನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತವಾಗಿದೆ. ಇವರು ತಮ್ಮ ನಟನೆಯ ಮೂಲಕ ಸಿನಿಪ್ರೀಯರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಫಿಲ್ಮ್‌ಫೇರ್ ಮತ್ತು ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. 1991 ರಲ್ಲಿ ಪತ್ತರ್ ಕೆ ಪೂಲ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ ಅವರು ಏಕ್ ಹಿ ರಾಸ್ತಾ, ಪೆಹ್ಲಾ ನಶಾ, ದಿಲ್ವಾಲೆ, ಮೊಹ್ರಾ, ಜಿದ್ದಿ, ದೀವಾನಾ ಮಸ್ತಾನಾ, ದುಲ್ಹೆ ರಾಜಾ, ಆಂಟಿ ನಂ. 1, ಶೂಲ್, ಆಂಖಿಯೋನ್ ಸೆ ಗೋಲಿ ಮೇರೆ, ಆನ್ ಮತ್ತು ಸ್ಯಾಂಡ್‌ವಿಚ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದು, ರವೀನಾ ಟಂಡನ್ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕೆಜಿಎಫ್-2 ಮೂಲಕ ತೆರೆ ಮೇಲೆ ಬಂದ ಟಂಡನ್, ಆರಣ್ಯಕ್ ಸೀರೀಸ್ ಮೂಲಕ ಒಟಿಟಿಗೆ ಪ್ರವೇಶ ಮಾಡಿದ್ದಾರೆ. 50 ನೇ ವಯಸ್ಸಿನಲ್ಲಿಯೂ ಆಕ್ಷನ್ ಸಿನಿಮಾದಲ್ಲೂ ಭಾಗವಹಿಸುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಘುಡ್ಚಾಧಿ ಮತ್ತು ವೆಲ್ಕಮ್ ಟು ದಿ ಜಂಗಲ್ ಚಿತ್ರಗಳಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 am, Sat, 24 February 24