ಸಂಗೀತ ಮಾಡುವಾಗ ಮೇಣದ ಬತ್ತಿ ಹಚ್ಚುವುದೇಕೆ ಎಆರ್ ರೆಹಮಾನ್

AR Rahman music: ಸಂಗೀತ ನಿರ್​ದೇಶಕ ರೆಹಮಾನ್, ಭಾರತ ಕಂಡ ಈ ವರೆಗಿನ ಅತ್ಯುತ್ತಮ ಸಂಗೀತ ನಿರ್ದೇಶಕ ಎಂದು ಖುದ್ದು ಜಾವೇದ್ ಆಖ್ತರ್ ಬಣ್ಣಿಸಿದ್ದಾರೆ. ಅದಕ್ಕೆ ಕಾರಣವೇನು ಎಂದು ಸಹ ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಅಂದಹಾಗೆ ಈ ವರೆಗೆ ಸಾವಿರಾರು ಅತ್ಯದ್ಭುತ ಹಾಡುಗಳನ್ನು ನೀಡಿರುವ ಎಆರ್ ರೆಹಮಾನ್, ಪ್ರತಿಬಾರಿ ಸಂಗೀತ ನೀಡುವಾಗಲೂ ಕೋಣೆಯಲ್ಲಿ ಮೇಣದಬತ್ತಿಯೊಂದನ್ನು ಹಚ್ಚುತ್ತಾರಂತೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ...

ಸಂಗೀತ ಮಾಡುವಾಗ ಮೇಣದ ಬತ್ತಿ ಹಚ್ಚುವುದೇಕೆ ಎಆರ್ ರೆಹಮಾನ್
Ar Rahman

Updated on: Jun 14, 2026 | 4:06 PM

ಭಾರತದ ನಂಬರ್ 1 ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rahman), ಹಲವು ದಶಕಗಳಿಂದಲೂ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ. ಬಹಳ ವರ್ಸಟೈಲ್ ಸಂಗೀತ ನಿರ್​ದೇಶಕರಾಗಿರುವ ರೆಹಮಾನ್, ಭಾರತ ಕಂಡ ಈ ವರೆಗಿನ ಅತ್ಯುತ್ತಮ ಸಂಗೀತ ನಿರ್ದೇಶಕ ಎಂದು ಖುದ್ದು ಜಾವೇದ್ ಆಖ್ತರ್ ಬಣ್ಣಿಸಿದ್ದಾರೆ. ಅದಕ್ಕೆ ಕಾರಣವೇನು ಎಂದು ಸಹ ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಅಂದಹಾಗೆ ಈ ವರೆಗೆ ಸಾವಿರಾರು ಅತ್ಯದ್ಭುತ ಹಾಡುಗಳನ್ನು ನೀಡಿರುವ ಎಆರ್ ರೆಹಮಾನ್, ಪ್ರತಿಬಾರಿ ಸಂಗೀತ ನೀಡುವಾಗಲೂ ಕೋಣೆಯಲ್ಲಿ ಮೇಣದಬತ್ತಿಯೊಂದನ್ನು ಹಚ್ಚುತ್ತಾರಂತೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ…

ಸಂಗೀತ ನಿರ್ದೇಶನದಲ್ಲಿ ಅತಿ ಹೆಚ್ಚು ತಂತ್ರಜ್ಞಾನ ಬಳಸಿದ ಮೊದಲ ಸಂಗೀತ ನಿರ್ದೇಶಕ ಎಆರ್ ರೆಹಮಾನ್. ರೆಹಮಾನ್ ಅವರ ಸ್ಟುಡಿಯೋನಲ್ಲಿ ಕಂಪ್ಯೂಟರ್‌ಗಳು, ಸಿಂಥಸೈಜರ್‌ಗಳು ಮತ್ತು ಅತ್ಯಾಧುನಿಕ ರೆಕಾರ್ಡಿಂಗ್ ಯಂತ್ರಗಳಿಂದ ತುಂಬಿರುತ್ತದೆ. ಈ ‘ಯಾಂತ್ರಿಕ’ ವಾತಾವರಣದಲ್ಲಿ ಸ್ವಲ್ಪ ‘ನೈಜ’ ಅಥವಾ ನೈಸರ್ಗಿಕ ಅಂಶ ಇರಲಿ ಎಂದು ಅವರು ಮೇಣದಬತ್ತಿಯನ್ನು ಬೆಳಗುತ್ತಾರಂತೆ ಎಆರ್ ರೆಹಮಾನ್. ಆ ಉರಿಯುವ ಜ್ಯೋತಿಯು ಯಂತ್ರಗಳ ಜಗತ್ತಿನ ಹೊರತಾದ ಜೀವಂತಿಕೆಯನ್ನು ನೆನಪಿಸುತ್ತದೆ ಎಂಬ ಕಾರಣಕ್ಕೆ ರೆಹಮಾನ್ ಅವರು ಮೇಣದ ಬತ್ತಿ ಉರಿಸುತ್ತಾರಂತೆ.

ಅಂದಹಾಗೆ ಈ ಮೇಣದ ಬತ್ತಿ ಉರಿಸಲು ಕೇವಲ ಒಂದು ಕಾರಣವಿಲ್ಲ ಬದಲಿಗೆ ಹಲವು ಕಾರಣಗಳಿವೆ. ರೆಹಮಾನ್ ಅವರಿಗೆ ತಮ್ಮ ಸ್ಟುಡಿಯೋ ಕೇವಲ ಕೆಲಸ ಮಾಡುವ ಜಾಗವಲ್ಲ, ಅದು ಒಂದು ರೀತಿಯ ಆರಾಧನಾ ತಾಣ ಮತ್ತು ಧ್ಯಾನ ಕೇಂದ್ರ. ಮೇಣದಬತ್ತಿಯ ಬೆಳಕು ಅಲ್ಲಿನ ವಾತಾವರಣವನ್ನು ಶಾಂತಗೊಳಿಸಿ, ಆಧ್ಯಾತ್ಮಿಕ ಕೇಂದ್ರೀಕೃತವಾಗಲು ಸಹಾಯ ಮಾಡುತ್ತದೆ. ಇಂತಹ ಮನಸ್ಥಿತಿಯಲ್ಲಿ ಸಂಗೀತ ಸಂಯೋಜನೆ ಮಾಡುವುದರಿಂದ ಅದಕ್ಕೆ ಒಂದು ವಿಶಿಷ್ಟ ಶಕ್ತಿ ಬರುತ್ತದೆ ಎಂಬುದು ಅವರ ನಂಬಿಕೆ.

ಇದನ್ನೂ ಓದಿ:ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ

ರೆಹಮಾನ್ ಅವರು ಹಗಲಿನ ಸಮಯದಲ್ಲಿ ಕೆಲಸ ಮಾಡುವುದಿಲ್ಲ. ರಾತ್ರಿಯ ಸಮಯದಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ರಾತ್ರಿಯ ನಿಶ್ಯಬ್ಧತೆಯು ಸೃಜನಶೀಲತೆಗೆ ಹೆಚ್ಚು ಸಹಕಾರಿ. ಮೇಣದಬತ್ತಿಯ ಮಂದ ಬೆಳಕು ಆ ಶಾಂತ ವಾತಾವರಣವನ್ನು ಇನ್ನಷ್ಟು ಹೆಚ್ಚಿಸಿ, ಸಂಗೀತದ ಆಳವಾದ ಭಾವನೆಗಳೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂಬುದು ಅವರ ನಂಬಿಕೆ. ಕೆಲವೊಮ್ಮೆ ಅವರು ಈ ಮೇಣದಬತ್ತಿಯನ್ನು ಒಂದು ನಿರ್ದಿಷ್ಟ ಗುರಿಯ ಸಂಕೇತವಾಗಿ ಬಳಸುತ್ತಾರೆ. ಮೇಣದಬತ್ತಿ ಉರಿಯುವ ಅವಧಿಯೊಳಗೆ ಒಂದು ನಿರ್ದಿಷ್ಟ ಕೆಲಸವನ್ನು ಅಥವಾ ಸಂಗೀತದ ಭಾಗವನ್ನು ಪೂರ್ಣಗೊಳಿಸುವ ಗುರಿಯನ್ನು ಅವರು ಇಟ್ಟುಕೊಳ್ಳುತ್ತಾರೆ ಎಂದು ಆಶಾ ಭೋಂಸ್ಲೆ ಈ ಹಿಂದೆ ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us