AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡ ಸಿನಿಮಾ ಅವಕಾಶ ನಿರಾಕರಿಸಿದ ರಾಘವ್ ಲಾರೆನ್ಸ್, ಆದರೆ ಒಳ್ಳೆಯ ಕಾರಣಕ್ಕೆ

Raghava Lawrence: ರಾಘವ್ ಲಾರೆನ್ಸ್ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ತಮಿಳಿನಲ್ಲಿ ಬ್ಲಾಕ್ ಬಸ್ಟರ್ ಆದ ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾನಲ್ಲಿ ನಟಿಸುವ ಅವಕಾಶವನ್ನು ರಾಘವ್ ಲಾರೆನ್ಸ್​ಗೆ ನೀಡಲಾಗಿತ್ತು. ಆದರೆ ಅವರು ನಟಿಸಲು ನಿರಾಕರಿಸಿದರು. ಅದಕ್ಕೆ ಮಹತ್ವದ ಕಾರಣವೂ ಇದೆ.

ದೊಡ್ಡ ಸಿನಿಮಾ ಅವಕಾಶ ನಿರಾಕರಿಸಿದ ರಾಘವ್ ಲಾರೆನ್ಸ್, ಆದರೆ ಒಳ್ಳೆಯ ಕಾರಣಕ್ಕೆ
Raghav Lawrence
ಮಂಜುನಾಥ ಸಿ.
|

Updated on: Jun 19, 2025 | 10:44 AM

Share

ಶ್ರಮ ಪಟ್ಟರೆ ಸಾಮಾನ್ಯ ವ್ಯಕ್ತಿಯೂ ಸೆಲೆಬ್ರಿಟಿ ಆಗಬಹುದು ಎಂಬುದಕ್ಕೆ ರಾಘವ್ ಲಾರೆನ್ಸ್ (Raghav Lawrence) ಒಳ್ಳೆಯ ಉದಾಹರಣೆ. ಕಾರು ತೊಳೆಯುವವನಾಗಿ ಕೆಲಸಕ್ಕೆ ಸೇರಿ ಅಲ್ಲಿಂದ ಒಂದೊಂದೇ ಮೆಟ್ಟಿಲು ಹತ್ತುತ್ತಾ ಬಂದು ಈಗ ಸ್ಟಾರ್ ನಾಯಕ ನಟ ಆಗಿದ್ದಾರೆ. ರಾಘವ್ ಲಾರೆನ್ಸ್​​ಗೆ ತೆಲುಗು, ತಮಿಳು, ಕರ್ನಾಟಕದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಾರರ್, ಕಾಮಿಡಿ, ಆಕ್ಷನ್ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ರಾಘವ್ ಲಾರೆನ್ಸ್​ಗೆ ಭಾರಿ ಬಜೆಟ್​ನ, ಹಲವು ಅತ್ಯುತ್ತಮ ಕಲಾವಿದರನ್ನು ಒಳಗೊಂಡ ಸಿನಿಮಾದ ಆಫರ್ ನೀಡಲಾಗಿತ್ತು. ಆದರೆ ಒಳ್ಳೆಯ ಕಾರಣಕ್ಕೆ ಆ ಸಿನಿಮಾದ ಅವಕಾಶವನ್ನು ನಿರಾಕರಿಸಿದ್ದರು. ಆ ಬಗ್ಗೆ ಇದೀಗ ಮಾತನಾಡಿದ್ದಾರೆ.

ಕಮಲ್ ಹಾಸನ್, ಫಹಾದ್ ಫಾಸಿಲ್, ವಿಜಯ್ ಸೇತುಪತಿ, ಸ್ಟಾರ್ ನಟ ಸೂರ್ಯ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ವಿಕ್ರಂ’ನಲ್ಲಿ ನಟಿಸುವ ಅವಕಾಶ ರಾಘವ್ ಲಾರೆನ್ಸ್​ಗೆ ಸಿಕ್ಕಿತ್ತಂತೆ. ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ರಾಘವ್ ಲಾರೆನ್ಸ್ ನಟಿಸಬೇಕಿತ್ತಂತೆ. ನಿರ್ದೇಶಕ ಲೋಕೇಶ್ ಕನಗರಾಜ್, ಮೊದಲಿಗೆ ರಾಘವ್​ಗೆ ಕತೆ ಹೇಳಿದ್ದು ಮಾತ್ರವೇ ಅಲ್ಲದೆ, ನೀವೇ ನಟಿಸಬೇಕು ಎಂದು ಒತ್ತಾಯ ಸಹ ಮಾಡಿದರಂತೆ. ಆದರೆ ರಾಘವ್ ನಟಿಸಲಿಲ್ಲ.

ರಾಘವ್ ನಟಿಸದೇ ಇರಲು ಪ್ರಮುಖ ಕಾರಣವೆಂದರೆ. ಅದು ಪಕ್ಕಾ ವಿಲನ್ ಪಾತ್ರ. ಡ್ರಗ್ಸ್ ವ್ಯವಹಾರ ಮಾಡುವ ವ್ಯಕ್ತಿಯ ಪಾತ್ರ. ಹಾಗಾಗಿ ಆ ಪಾತ್ರದಲ್ಲಿ ನಟಿಸುವುದಿಲ್ಲ ಎಂದರಂತೆ ರಾಘವ್. ‘ನನ್ನ ಸಿನಿಮಾಗಳನ್ನು ಮಕ್ಕಳು, ಕುಟುಂಬ ಸಮೇತರಾಗಿ ನೋಡುತ್ತಾರೆ. ನಾನು ಅಂಥಹಾ ಪಾತ್ರಗಳಲ್ಲಿ ನಟಿಸಲಾರೆ. ಅಂಥಹಾ ಪಾತ್ರಗಳಲ್ಲಿ ನಟಿಸುವುದು ಕುಟುಂಬವನ್ನು ಒಡೆಯುವುದಕ್ಕೆ ಸಮ ಎಂದು ನಾನು ಭಾವಿಸಿದ್ದೇನೆ. ಆ ಪಾತ್ರ ಮಾಡಿದ ನಟನನ್ನು ನಾನು ಟೀಕಿಸುತ್ತಿಲ್ಲ. ಆದರೆ ಆ ರೀತಿಯ ಪಾತ್ರ ನಾನು ಮಾಡಲಾರೆ’ ಎಂದಿದ್ದಾರೆ ರಾಘವ್ ಲಾರೆನ್ಸ್.

ಇದನ್ನೂ ಓದಿ:ಸಿನಿಮಾ ಇಲ್ಲದೆ ಕಷ್ಟದಲ್ಲಿರೋ ತ್ರಿವಿಕ್ರಂಗೆ ದೊಡ್ಡ ಸಲಹೆ ಕೊಟ್ಟ ಪವನ್ ಕಲ್ಯಾಣ್

‘ವಿಕ್ರಂ’ ಸಿನಿಮಾನಲ್ಲಿ ವಿಜಯ್ ಸೇತುಪತಿ, ಸಂತಾನಂ ಹೆಸರಿನ ಪವರ್​ಫುಲ್ ಪಾತ್ರದಲ್ಲಿ ನಟಿಸಿದ್ದರು. ಡ್ರಗ್ಸ್ ಲೋಕಲ್ ಡೀಲರ್ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಸಿನಿಮಾನಲ್ಲಿ ವಿಜಯ್ ಸೇತುಪತಿ ಅವರ ಪಾತ್ರ ಸಖತ್ ಹೈಲೆಟ್ ಆಗಿತ್ತು. ಅವರ ಪಾತ್ರದ ಎಂಟ್ರಿ, ಡೈಲಾಗ್​​ಗಳು, ಆಕ್ಷನ್ ಎಲ್ಲವನ್ನೂ ಜನ ಮೆಚ್ಚಿಕೊಂಡಿದ್ದರು. ವಿಜಯ್ ಸೇತುಪತಿ ಅವರ ವೃತ್ತಿ ಜೀವನಕ್ಕೆ ಇದು ಹೆಚ್ಚಿನ ಬೂಸ್ಟ್ ನೀಡಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ