Leo Movie: ಗ್ಯಾಂಗ್​ಸ್ಟರ್​ ತಂದೆ-ಮಗನ ಪಾತ್ರದಲ್ಲಿ ಸಂಜಯ್​ ದತ್​-ವಿಜಯ್​; ಸಂಜು ಸಂಭಾವನೆ 10 ಕೋಟಿ ರೂಪಾಯಿ?

|

Updated on: May 19, 2023 | 11:28 AM

Sanjay Dutt: ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಂಜಯ್​ ದತ್​ ಅವರಿಗೆ ಬೇಡಿಕೆ ಹೆಚ್ಚಾಗಿದೆ. ‘ಲಿಯೋ’ ಸಿನಿಮಾದಲ್ಲಿ ಅವರ ಗೆಟಪ್​ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. 

Leo Movie: ಗ್ಯಾಂಗ್​ಸ್ಟರ್​ ತಂದೆ-ಮಗನ ಪಾತ್ರದಲ್ಲಿ ಸಂಜಯ್​ ದತ್​-ವಿಜಯ್​; ಸಂಜು ಸಂಭಾವನೆ 10 ಕೋಟಿ ರೂಪಾಯಿ?
ದಳಪತಿ ವಿಜಯ್, ಸಂಜಯ್ ದತ್
Follow us on

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಲಿಯೋ’ ಚಿತ್ರ ಕೂಡ ಇದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್​ (Thalapathy Vijay) ನಾಯಕನಾಗಿ ನಟಿಸುತ್ತಿದ್ದಾರೆ. ಬಾಲಿವುಡ್​ನ ಸ್ಟಾರ್​ ಕಲಾವಿದ ಸಂಜಯ್​ ದತ್​ ಕೂಡ ಇದರಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಈಗ ಕೇಳಿಬಂದಿರುವ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಸಂಜಯ್​ ದತ್​ (Sanjay Dutt) ಮತ್ತು ದಳಪತಿ ವಿಜಯ್​ ಅವರು ತಂದೆ-ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರದ್ದೂ ಗ್ಯಾಂಗ್​ಸ್ಟರ್​ ಪಾತ್ರ ಎನ್ನಲಾಗಿದೆ. ಈ ಸಿನಿಮಾಗಾಗಿ ಸಂಜಯ್​ ದತ್​ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಲಿಯೋ’ (Leo Movie) ಸಿನಿಮಾಗೆ ಲೋಕೇಶ್​ ಕನಗರಾಜ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಕಾರಣಗಳಿಂದ ಈ ಚಿತ್ರದ ಬಗ್ಗೆ ಹೈಪ್​ ಸೃಷ್ಟಿ ಆಗಿದೆ.

‘ಕೆಜಿಎಫ್​: ಚಾಪ್ಟರ್​ 2’ ಬಳಿಕ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಂಜಯ್​ ದತ್​ ಅವರಿಗೆ ಬೇಡಿಕೆ ಹೆಚ್ಚಾಗಿದೆ. ‘ಲಿಯೋ’ ಸಿನಿಮಾದಲ್ಲಿ ಅವರಿಗೆ ಕೈ ತುಂಬ ಸಂಭಾವನೆ ನೀಡಲಾಗುತ್ತಿದೆ. ಅವರ ಗೆಟಪ್​ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಈ ಮೊದಲು ರಿಲೀಸ್​ ಆದ ಟೈಟಲ್​ ಟೀಸರ್​ನಲ್ಲಿ ದಳಪತಿ ವಿಜಯ್​ ಅವರು ಚಾಕೊಲೇಟ್​ ಮಾಡುತ್ತಿರುವ ದೃಶ್ಯ ಹೈಲೈಟ್​ ಆಗಿತ್ತು. ಅದೇ ರೀತಿ ಅವರು ಆಯುಧ ತಯಾರಿಸುವುದನ್ನೂ ತೋರಿಸಲಾಗಿತ್ತು. ಇದರಿಂದ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿದೆ.

ಇದನ್ನೂ ಓದಿ: ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

ಇದನ್ನೂ ಓದಿ
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​
ಡ್ರಗ್ಸ್​ ಮತ್ತು ಹುಡುಗಿ ವಿಷಯದಲ್ಲಿ ಸಂಜಯ್​ ದತ್​ ತಿಳಿದುಕೊಂಡಿದ್ದೇ ಬೇರೆ: ಎಲ್ಲವನ್ನೂ ಬಾಯ್ಬಿಟ್ಟ ಅಧೀರ
ಪ್ರೊಡಕ್ಷನ್​ ಹೌಸ್​ ಆರಂಭಿಸಿದ ‘ಕೆಜಿಎಫ್​ 2’ ವಿಲನ್​​; ಸಂಜಯ್​ ದತ್​ಗಿದೆ ದೊಡ್ಡ ಕನಸು
ಶೂಟಿಂಗ್​ ಸೆಟ್​ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್​ ದತ್​; ‘ಕೆಜಿಎಫ್​’ ಅಧೀರನ ಕಷ್ಟದ ಹಾದಿ

‘ಲಿಯೋ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು 120 ಕೋಟಿ ರೂಪಾಯಿ ನೀಡಿ ನೆಟ್​ಫ್ಲಿಕ್ಸ್​ ಖರೀದಿಸಿದೆ. ಇದರ ಕಿರುತೆರೆ ಪ್ರಸಾರ ಹಕ್ಕುಗಳು ಸನ್​ ಟಿವಿ ಬಳಿ ಇವೆ. ಅದರ ಬೆಲೆ 70 ಕೋಟಿ ರೂಪಾಯಿ ಎನ್ನಲಾಗಿದೆ. ಸೋನಿ ಮ್ಯೂಸಿಕ್​ ಕಂಪನಿಯು 18 ಕೋಟಿ ರೂಪಾಯಿ ನೀಡಿ ‘ಲಿಯೋ’ ಚಿತ್ರದ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಚಿತ್ರದ ಬಿಸ್ನೆಸ್​ ಇಷ್ಟಕ್ಕೇ ಮುಗಿದಿಲ್ಲ. ಸಿನಿಮಾ ವಿತರಣೆ ಹಕ್ಕುಗಳು ಕೂಡ ಹಾಟ್​ ಕೇಕ್​ ರೀತಿ ಸೇಲ್​ ಆಗುತ್ತಿವೆ.

ಇದನ್ನೂ ಓದಿ: Sanjay Dutt: ‘ಕೆಡಿ’ ಶೂಟಿಂಗ್​ ಸೆಟ್​ಗೆ ಕಾಲಿಟ್ಟ ಸಂಜಯ್​ ದತ್​; ಬಾಲಿವುಡ್​ ನಟನ ಎಂಟ್ರಿಯಿಂದ ಹೆಚ್ಚಿತು ನಿರೀಕ್ಷೆ

ಭಾರತ ವಿವಿಧ ರಾಜ್ಯಗಳಲ್ಲಿ ‘ಲಿಯೋ’ ಸಿನಿಮಾವನ್ನು ಬಿಡುಗಡೆ ಮಾಡಲು ವಿತರಕರು ಮುಗಿಬಿದ್ದಿದ್ದಾರೆ. ವಿದೇಶದಲ್ಲೂ ಡಿಮ್ಯಾಂಡ್​ ಜೋರಾಗಿದೆ. ಆ ಪೈಕಿ ಬಹುತೇಕ ಬಿಸ್ನೆಸ್​ ಉತ್ತಮವಾಗಿಯೇ ಆಗಿದೆ. ಎಲ್ಲವನ್ನೂ ಸೇರಿಸಿದರೆ ಬರೋಬ್ಬರಿ 400 ಕೋಟಿ ರೂಪಾಯಿ ಹರಿದುಬಂದಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್​ ಮುಗಿಯುವುದಕ್ಕೂ ಮುನ್ನ ಇಷ್ಟೊಂದು ವ್ಯವಹಾರ ಮಾಡಿದ ಮೊದಲ ತಮಿಳು ಸಿನಿಮಾ ಎಂಬ ಖ್ಯಾತಿಗೂ ‘ಲಿಯೋ’ ಚಿತ್ರ ಪಾತ್ರವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.