‘ನಿಮ್ಮನ್ನು ಮರೆಯಬಹುದು, ಶಾರುಖ್ನಲ್ಲ’; ವಿವೇಕ್ ಹೇಳಿಕೆಗೆ ಫ್ಯಾನ್ಸ್ ತಿರುಗೇಟು
ನಟರ ಜನಪ್ರಿಯತೆಯು ಜನರೇಶನ್‌ನಿಂದ ಜನರೇಶನ್‌ಗೆ ಬದಲಾಗುತ್ತದೆ ಎಂಬ ವಿವೇಕ್ ಓಬೆರಾಯ್ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ಶಾರುಖ್ ಖಾನ್ ಕೂಡ ರಾಜ್ ಕಪೂರ್‌ನಂತೆ ಮರೆತುಹೋಗಬಹುದು ಎಂದಿದ್ದಾರೆ. ಆದರೆ, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾರುಖ್ ಖಾನ್ ಅವರ ಇತ್ತೀಚಿನ ಸಕ್ಸಸ್ ಉಲ್ಲೇಖಿಸಿ, ಅವರ ಜನಪ್ರಿಯತೆ ಶಾಶ್ವತ ಎಂದು ಕೆಲವರು ವಾದಿಸಿದ್ದಾರೆ.

ಒಂದು ಜನರೇಷನ್ನಿಂದ ಮತ್ತೊಂದು ಜನರೇಷನ್ಗೆ ಸಾಕಷ್ಟು ಗ್ಯಾಪ್ ಇರುತ್ತದೆ. ಪ್ರತಿ ಜನರೇಷನ್ ಟೇಸ್ಟ್ ಬೇರೆ ಬೇರೆ ಇರುತ್ತದೆ. ಅದೇ ರೀತಿ ಫೇವರಿಟ್ ಹೀರೋಗಳು ಯಾರು ಎಂಬುದು ಕೂಡ ಜನರೇಷನ್ನಿಂದ ಜನರೇಷನ್ಗೆ ಬದಲಾವಣೆ ಇರುತ್ತದೆ. ಈ ಬಗ್ಗೆ ವಿವೇಕ್ ಓಬೆರಾಯ್ (Vivek Oberoi) ಮಾತನಾಡಿದ್ದಾರೆ. ಮುಂದಿನ ಕೆಲವು ದಶಕಗಳಲ್ಲಿ ಶಾರುಖ್ ಖಾನ್ ಅವರ ಹೆಸರು ಅಳಿಸಿ ಹೋಗಬಹುದು ಎಂದಿದ್ದಾರೆ. ರಾಜ್ ಕಪೂರ್ ಅವರಂತಹ ಹೀರೋಗಳು ಯಾರು ಎಂಬುದೇ ತಿಳಿಯುವುದಿಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
‘1960ರ ಸಿನಿಮಾದ ಬಗ್ಗೆ ಕೇಳಿದರೆ ಇಂದು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಬಹುಶಃ 2050ರಲ್ಲಿ, ಜನರು ಶಾರುಖ್ ಖಾನ್ ಯಾರು ಎಂದು ಕೇಳಬಹುದು’ ಎಂದು ಅವರು ಹೇಳಿದ್ದಾರೆ. ಇದನ್ನು ಅನೇಕರು ಒಪ್ಪಿದ್ದಾರೆ. ಕೆಲವರು ಟೀಕಿಸಿದ್ದಾರೆ ಧರ್ಮೇಂದ್ರ ಅವರು ಆಗಿನ ಕಾಲದಲ್ಲಿ ದೊಡ್ಡ ಹಿರೋ. ಆದರೆ, ಈಗಿನ ಜನರೇಷನ್ಗೆ ಅವರ ಪರಿಚಯ ಅಷ್ಟಾಗಿ ಇಲ್ಲ. ಶಾರುಖ್ ಖಾನ್ ವಿಚಾರದಲ್ಲೂ ಹೀಗೆ ಆಗಬಹುದು ಎಂಬ ಅಭಿಪ್ರಾಯ ವಿವೇಕ್ ಅವರದ್ದು. ಆದರೆ, ಇದರು ಅವರ ತಿರುಮಂತ್ರವಾಗಿದೆ.
ವಿವೇಕ್ ಅವರು ಉದಾಹರಣೆ ನೀಡಿದ್ದಾರೆ. ‘ರಾಜ್ ಕಪೂರ್ ಯಾರು ಎಂದು ಜನರು ಕೇಳಬಹುದು. ನಾವು ಅವರನ್ನು ಸಿನಿಮಾ ದೇವರು ಎಂದು ಕರೆಯುತ್ತೇವೆ. ರಣಬೀರ್ ಕಪೂರ್ ಅವರ ಅಭಿಮಾನಿಯಾಗಿರುವ ಯಾವುದೇ ಯುವಕನನ್ನು ಕೇಳಿದರೆ, ಅವರಿಗೆ ರಾಜ್ ಕಪೂರ್ ಯಾರೆಂದು ತಿಳಿದಿರುವುದಿಲ್ಲ’ ಎಂದಿದ್ದಾರೆ ಅವರು.
Whatever #VivekOberoi says, time doesn’t erase legends. Raj Kapoor is timeless, and #ShahRukhKhan’s legacy will shine not just till 2050 but far beyond. Stardom comes and goes, but icons like #SRK are once-in-a-generation. People can talk… the King’s legacy speaks for itself.… pic.twitter.com/d5f25NMDuq
— Cineholic (@Cineholic_india) November 20, 2025
ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ಇದನ್ನು ಅಲ್ಲಗಳೆದಿದ್ದಾರೆ. ಇನ್ನು 100 ವರ್ಷಗಳು ಕಳೆದರೂ ಶಾರುಖ್ ಖಾನ್ ಹೆಸರು ಮನದಲ್ಲಿ ಇರುತ್ತದೆ ಎಂದು ಅನೇಕರು ಹೇಳಿದ್ದಾರೆ. 2023ರಲ್ಲಿ ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದರು. ‘ಪಠಾಣ್’, ‘ಜವಾನ್’, ‘ಡಂಕಿ’ ರೀತಿಯ ಸಿನಿಮಾಗಳನ್ನು ಅವರು ಕೊಟ್ಟರು. ಈ ಮೂರು ಸಿನಿಮಾಗಳು ವಿಶ್ವಾದ್ಯಂತ 2600 ಕೋಟಿ ರೂಪಾಯಿ ಗಳಿಕೆ ಮಾಡಿವೆ. ಇನ್ನು ರಾಜ್ ಕಪೂರ್ ಹೆಸರು ಅನೇಕರಿಗೆ ಈಗಲೂ ತಿಳಿದಿದೆ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: 2050ಕ್ಕೆ ಶಾರುಖ್ ಖಾನ್ ಯಾರು ಅನ್ನೋದನ್ನೇ ಜನ ಮರೆಯುತ್ತಾರೆ: ವಿವೇಕ್ ಒಬೆರಾಯ್
ಇನ್ನು, ವಿವೇಕ್ ಸಿನಿಮಾ ವಿಚಾರ ಹೇಳುವುದಾದರೆ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಅವರ ಜನಪ್ರಿಯತೆ ಮೊದಲಿನಷ್ಟು ಇಲ್ಲ. ಸಲ್ಮಾನ್ ಖಾನ್ ಅವರಿಗೆ ವೃತ್ತಿ ಜೀವನ ಹಾಳಾಯಿತು ಎಂಬುದು ಅನೇಕರ ನಂಬಿಕದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



