2025ರ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಒಂದು ಕನ್ನಡ ಸಿನಿಮಾ

Updated on: Dec 24, 2025 | 3:50 PM

Year in search 2025: 2025 ಚಿತ್ರರಂಗದ ಪಾಲಿಗೆ ಉತ್ತಮ ವರ್ಷವೇ ಆಗಿದೆ. ಹಲವು ಒಳ್ಳೆಯ, ಬ್ಲಾಕ್ ಬಸ್ಟರ್ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿವೆ. ಇನ್ನೇನು 2025 ಮುಗಿಯುತ್ತಾ ಬಂದಿದೆ. ಇನ್ನೊಂದು ವಾರ ಕಳೆದರೆ 2026ರ ಆಗಮನ ಆಗುತ್ತದೆ. ಈ ವರ್ಷ ಸಿನಿಮಾ ಪ್ರೇಮಿಗಳು ಗೂಗಲ್​​ನಲ್ಲಿ ಹೆಚ್ಚು ಹುಡುಕಿದ ಸಿನಿಮಾ ಯಾವುದು? ಯಾವ ಭಾರತದ ಸಿನಿಮಾ ಬಗ್ಗೆ ಜನ ಹೆಚ್ಚು ಆಸಕ್ತಿ ತೋರಿದ್ದಾರೆ? ಇಲ್ಲಿದೆ ನೋಡಿ ಪಟ್ಟಿ. ಅಂದಹಾಗೆ ಈ ಪಟ್ಟಿಯಲ್ಲಿ ಒಂದು ಕನ್ನಡದ ಸಿನಿಮಾ ಸಹ ಇದೆ.

1 / 6
ಇದೇ ವರ್ಷ ಬಿಡುಗಡೆ ಆದ ಸಿನಿಮಾಗಳು ಹೆಚ್ಚು ಹುಡುಕಲ್ಪಟ್ಟ ಪಟ್ಟಿಯಲ್ಲಿರುವುದು ಸಾಮಾನ್ಯ. ಆದರೆ 2016ರಲ್ಲಿ ಬಿಡುಗಡೆ ಆದ ‘ಸನಮ್ ಥೇರಿ ಕಸಮ್’ ಸಿನಿಮಾ ಸಹ ಇದೇ ಪಟ್ಟಿಯಲ್ಲಿದೆ. ಈ ವರ್ಷ ಈ ಸಿನಿಮಾ ಮರು ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಕಲ್ಟ್ ಫಾಲೋವಿಂಗ್ ಇದೆ. ಪಟ್ಟಿಯಲ್ಲಿ ಈ ಸಿನಿಮಾಕ್ಕೆ ಐದನೇ ಸ್ಥಾನವಿದೆ.

2 / 6
ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಮತ್ತೊಂದು ಫ್ಲಾಪ್ ಅಥವಾ ಸಾಧಾರಣ ಹಿಟ್ ಸಿನಿಮಾ ಇದೆ. ಅದುವೇ ‘ವಾರ್ 2’. ಹೃತಿಕ್ ರೋಷನ್ ಮತ್ತು ಜೂ ಎನ್​​ಟಿಆರ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಪಟ್ಟಿಯಲ್ಲಿ ‘ವಾರ್ 2’ಗೆ ನಾಲ್ಕನೇ ಸ್ಥಾನ.

3 / 6
ರಜನೀಕಾಂತ್ ನಟಿಸಿ, ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾ ಈ ವರ್ಷ ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಆಗಿತ್ತು. ಉಪೇಂದ್ರ, ಆಮಿರ್ ಖಾನ್ ಸಹ ನಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಯಶಸ್ಸು ಗಳಿಸಲಿಲ್ಲ. ಆದರೆ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಇದಕ್ಕೆ ಮೂರನೆ ಸ್ಥಾನ.

4 / 6
ಕನ್ನಡ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಭಾರತದ ಅತಿ ದೊಡ್ಡ ಸಿನಿಮಾಗಳಲ್ಲಿ ಒಂದಾಗಿದೆ. ಬಾಕ್ಸ್ ಆಫೀಸ್​​ನಲ್ಲಿ 900 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ ಈ ಚಿತ್ರ, ಸಿನಿಮಾ ಪ್ರೇಮಿಗಳ ಅತೀವ ಕುತೂಹಲ ಕೆರಳಿಸಿದ್ದ ಸಿನಿಮಾ ಸಹ ಆಗಿದೆ. ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ‘ಕಾಂತಾರ: ಚಾಪ್ಟರ್ 1’ಗೆ ಎರಡನೇ ಸ್ಥಾನ ದೊರೆತಿದೆ.

5 / 6
ಈ ವರ್ಷದ ಅಚಾನಕ್ ಹಿಟ್ ಸಿನಿಮಾ ಎಂದರೆ ಅದು ಹಿಂದಿಯ ‘ಸೈಯ್ಯಾರ’. ಯಾರೂ ಹೆಸರೂ ಕೇಳದೇ ಇದ್ದ ನಾಯಕ-ನಾಯಕಿಯ ‘ಸೈಯ್ಯಾರ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಚ್ ಚಲ್ ಎಬ್ಬಿಸಿತು. ಈ ಸಿನಿಮಾ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ಎನಿಸಿಕೊಂಡಿದೆ.

6 / 6
ಪಟ್ಟಿಯಲ್ಲಿ ಆರನೇ ಸ್ಥಾನ ಮಲಯಾಳಂ ಸಿನಿಮಾ ‘ಮಾರ್ಕೊ’, ಏಳನೇ ಸ್ಥಾನದಲ್ಲಿದೆ ‘ಹೌಸ್​​ಫುಲ್ 5’, ಎಂಟನೇ ಸ್ಥಾನದಲ್ಲಿ ರಾಮ್ ಚರಣ್ ನಟನೆಯ ಫ್ಲಾಪ್ ಸಿನಿಮಾ ‘ಗೇಮ್ ಚೇಂಜರ್’ ಒಂಬತ್ತನೇ ಸ್ಥಾನದಲ್ಲಿ ‘ಮಿಸಸ್’, ಹತ್ತನೇ ಸ್ಥಾನದಲ್ಲಿ ಹೊಂಬಾಳೆ ಫಿಲಮ್ಸ್ ವಿತರಣೆ ಮಾಡಿದ್ದ ‘ಮಹಾವತಾರ ನರಸಿಂಹ’ ಇದೆ.