ಚಹಲ್ ಜೊತೆ ಕಾಣಿಸಿಕೊಂಡ ಈ ಸುಂದರಿ ಯಾರು? ಚಿತ್ರರಂಗದ ಜೊತೆ ಇದೆ ನಂಟು

ಯಜುವೇಂದ್ರ ಚಹಲ್ ಅವರು ಧನಶ್ರೀಯಿಂದ ವಿಚ್ಛೇದನ ಪಡೆದ ಬಳಿಕ ಯುವತಿ ಜೊತೆ ಕಾಣಿಸಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೊದಲು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಈಗ ಇವರು ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದು ಚರ್ಚೆಗೆ ಕಾರಣ ಆಗಿದೆ.

ಚಹಲ್ ಜೊತೆ ಕಾಣಿಸಿಕೊಂಡ ಈ ಸುಂದರಿ ಯಾರು? ಚಿತ್ರರಂಗದ ಜೊತೆ ಇದೆ ನಂಟು
ಚಹಲ್ ಜೊತೆ ಕಾಣಿಸಿಕೊಂಡ ಈ ಸುಂದರಿ ಯಾರು?

Updated on: Mar 10, 2025 | 7:24 AM

ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಹಾಗೂ ಧನಶ್ರೀ ವಿಚ್ಛೇದನ ಪಡೆದಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಹೀಗಿರುವಾಗಲೇ ಚಹಲ್ ಅವರು ಹುಡುಗಿ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಚಹಲ್ ಅವರು ಮ್ಯಾಚ್ ವೀಕ್ಷಣೆಗೆ ಬಂದಿದ್ದರು. ಅವರ ಜೊತೆ ಒಂದು ಸುಂದರಿ ಕೂಡ ಕಾಣಿಸಿಕೊಂಡಿದ್ದಾರೆ. ಅವರು ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅದಕ್ಕೆ ಉತ್ತರ ಸಿಕ್ಕಿದೆ.

ಚಹಲ್ ಹಾಗೂ ಧನಶ್ರೀ ವಿಚ್ಛೇದನ ವಿಚಾರ ಇನ್ನೂ ಸುದ್ದಿಯಲ್ಲಿ ಇದೆ. ಧನಶ್ರೀಗೆ ಚಹಲ್ ಅವರು ದೊಡ್ಡ ಮೊತ್ತದ ಜೀವನಾಂಶ ನೀಡಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಹೀಗಿರುವಾಗಲೇ ಅವರು ಬೇರೆ ಯುವತಿ ಜೊತೆ ಡೇಟಿಂಗ್ ಆರಂಭಿಸಿದರೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನ: ಕೋಟಿ ಮೊತ್ತ ಪರಿಹಾರ?
ವಿಚ್ಛೇದನದ ವದಂತಿಗಳ ನಡುವೆ ಚಹಲ್ ಕಂಠಪೂರ್ತಿ ಕುಡಿದ ವಿಡಿಯೋ ವೈರಲ್
ಟೀಮ್ ಇಂಡಿಯಾದಲ್ಲಿಲ್ಲ ಸ್ಥಾನ, ವಿದೇಶದಲ್ಲಿ 9 ವಿಕೆಟ್ ಕಬಳಿಸಿದ ಚಹಲ್

ಆ ಯುವತಿ ಯಾರು?

ಚಹಲ್ ಜೊತೆ ಕಾಣಿಸಿಕೊಂಡ ಯುವತಿ ಬೇರಾರೂ ಅಲ್ಲ ಆರ್​ಜೆ ಹಾಗೂ ನಟಿ ಮಾಹವಾಶಾ. ಕಳೆದ ಜನವರಿಯಲ್ಲಿ ಚಹಲ್ ಹಾಗೂ ಮಾಹವಾಶಾ ಮಧ್ಯೆ ಲಿಂಕ್ ಇದೆ ಎಂದು ಹೇಳಲಾಗಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದರು. ಈಗ ಇಬ್ಬರೂ ಮತ್ತೆ ಕಾಣಿಸಿಕೊಂಡಿದ್ದು ಚರ್ಚೆ ಹುಟ್ಟುಹಾಕಿದೆ.

ನಿಜವಿಲ್ಲ

ಈ ಮೊದಲು ವೈರಲ್ ಆದ ಫೋಟೋಗೆ ಮಾಹವಾಶಾ ಅವರು ಸ್ಪಷ್ಟನೆ ನೀಡಿದ್ದರು. ‘ನಮ್ಮಿಬ್ಬರ ಮಧ್ಯೆ ಪ್ರೀತಿ ಇಲ್ಲ’ ಎಂದು ಹೇಳಿದ್ದರು. ಈಗ ಮತ್ತೆ ಇವರ ಹೆಸರು ಮುನ್ನೆಲೆಗೆ ಬಂದಿದೆ. ಚಹಲ್ ಹಾಗೂ ಮಾಹವಾಶಾ ಮಧ್ಯೆ ಪ್ರೀತಿ ಮೂಡಿದೆಯೇ ಎನ್ನುವ ಪ್ರಶ್ನೆ ಎದ್ದಿದೆ.

ನಟಿ, ನಿರ್ಮಾಪಕಿ

ಮಾಹವಾಶಾ ಅವರು ‘ಸೆಕ್ಷನ್ 108’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರು ರೆಡಿಯೋ ಜಾಕಿ ಕೂಡ ಹೌದು. ಅವರು ವೆಬ್ ಸೀರಿಸ್ ಒಂದರಲ್ಲಿ ನಾಯಕಿ ಆಗಿಯೂ ನಟಿಸುತ್ತಿದ್ದಾರೆ.  ಈ ಮೂಲಕ ಚಿತ್ರರಂಗದಲ್ಲಿ ಅವರು ಗುರುತಿಸಿಕೊಳ್ಳುವ ಹಂಬದಲ್ಲಿ ಇದ್ದಾರೆ.

ಇದನ್ನೂ ಓದಿ: ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನ: ಕೋಟಿ ಮೊತ್ತ ಪರಿಹಾರ?

 ಟ್ರೋಲ್

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಹಲ್ ಬಗ್ಗೆ ಹಾಗೂ ಅವರು ಮೂವ್ ಆನ್ ಆದ ಬಗ್ಗೆ ಟ್ರೋಲ್​ಗಳು ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.