ಅನುಷ್ಕಾ ಎಂದರೆ ವಿರಾಟ್ಗೆ ಬೆಟ್ಟದಷ್ಟು ಪ್ರೀತಿ; ಮ್ಯಾಚ್ ಗೆದ್ದ ಬಳಿಕ ಕೊಹ್ಲಿ ಏನು ಮಾಡಿದ್ರು ನೋಡಿ
ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರನ್ನು ಭಾವುಕವಾಗಿ ಆಲಂಗಿಸಿದ್ದಾರೆ. ದುಬೈನಲ್ಲಿ ನಡೆದ ಫೈನಲ್ ಪಂದ್ಯದ ನಂತರ ಅನುಷ್ಕಾ ಅವರನ್ನು ಮೈದಾನಕ್ಕೆ ಕರೆದೊಯ್ದ ಕೊಹ್ಲಿ ಅವರ ಕಾಳಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಹ್ಲಿ ಅವರು ಅನುಷ್ಕಾ ಅವರಿಗೆ ನೀರು ಕೊಟ್ಟ ದೃಶ್ಯವೂ ವೈರಲ್ ಆಗಿದೆ.

ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸುವು ಮೂಲಕ ಕಪ್ನ ತನ್ನದಾಗಿಸಿಕೊಂಡಿದೆ. ಫೈನಲ್ ಪಂದ್ಯ ನೋಡಲು ದುಬೈ ಅಂತಾರಾಷ್ಟ್ರೀಯ ಮೈದಾನಕ್ಕೆ ವಿರಾಟ್ ಕೊಹ್ಲಿ (Virat Kohli) ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಕೂಡ ಆಗಮಿಸಿದ್ದರು. ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅನುಷ್ಕಾ ಅವರನ್ನು ಹಗ್ ಮಾಡಿದ್ದಾರೆ. ಅಲ್ಲದೆ, ಅವರು ತೋರಿದ ಕಾಳಜಿಗೆ ಎಲ್ಲರೂ ಫಿದಾ ಆಗಿದ್ದಾರೆ.
ಅನುಷ್ಕಾ ಶರ್ಮಾ ಅವರು ಸ್ಟೇಡಿಯಂ ಗ್ಯಾಲರಿಯಲ್ಲಿ ಇದ್ದರು. ಪಂದ್ಯ ಪೂರ್ಣಗೊಳ್ಳುತ್ತಿದ್ದಂತೆ ಅನುಷ್ಕಾ ಶರ್ಮಾ ಬಳಿ ಕೊಹ್ಲಿ ಓಡೋಡಿ ಹೋಗಿದ್ದಾರೆ. ಅವರನ್ನು ಹಗ್ ಮಾಡಿ ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ. ಆ ಬಳಿಕ ಅವರನ್ನು ಮೈದಾನಕ್ಕೆ ಕೊಹ್ಲಿ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮತ್ತೊಂದು ವಿಡಿಯೋದಲ್ಲಿ, ಕೊಹ್ಲಿ ಅವರು ನೀರಿನ ಬಾಟಲಿ ಮುಚ್ಚಳ ತೆಗೆದು ಅನುಷ್ಕಾಗೆ ನೀಡಿದ್ದಾರೆ. ಆ ಬಳಿಕ ಮತ್ತೊಂದು ಬಾಟಲಿಯನ್ನು ತೆಗೆದುಕೊಂಡು ತಾವು ನೀರನ್ನು ಕುಡಿದಿದ್ದಾರೆ. ಇದು ಅನುಷ್ಕಾ ಮೇಲೆ ಕೊಹ್ಲಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ.
This moment!🏆❤️#AnushkaSharma hugged #ViratKohli after India’s epic win in the #ICCChampionsTrophy2025 finals. #INDvsNZ pic.twitter.com/QmEDAJcziu
— Filmfare (@filmfare) March 9, 2025
Virat Kohli and Anushka Sharma radiate joy with their beaming smiles😃✨
📸: JioHotstar pic.twitter.com/aKqirTqqvf
— CricTracker (@Cricketracker) March 9, 2025
Couple Goals by Virat Kohli and Anushka Sharma pic.twitter.com/p5NzhXxLiS
— ICT Fan (@Delphy06) March 9, 2025
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ನೂಜಿಲೆಂಡ್ 251 ರನ್ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ ಟೀಂ ಇಂಡಿಯಾಗೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಆ ಬಳಿಕ ಬ್ಯಾಟಿಂಗ್ ನಿಧಾನ ಆಯಿತು. ಆದಾಗ್ಯೂ ಟೀಂ ಇಂಡಿಯಾ ಕೊನೆಯಲ್ಲಿ ಗೆಲುವಿನ ನಗು ಬೀರಿತು. ಈ ಗೆಲುವಿನ ಮೂಲಕ ಟೀಂ ಇಂಡಿಯಾಗೆ ಐಸಿಸಿ ಟೂರ್ನಿಯಲ್ಲಿ ಮತ್ತೊಂದು ಟ್ರೋಫಿ ಸಿಕ್ಕಂತೆ ಆಗಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಅನುಷ್ಕಾ ಶರ್ಮಾ ಎಷ್ಟು ಅಪ್ಸೆಟ್ ಆದ್ರು ನೋಡಿ
ಅನುಷ್ಕಾ ಶರ್ಮಾ ಅವರು ಸದ್ಯ ಯಾವುದೇ ಸಿನಿಮಾ ಮಾಡುತ್ತಿಲ್ಲ. ವಿವಾಹದ ಬಳಿಕ ಅವರು ನಟನೆಯಿಂದ ದೂರವೇ ಇದ್ದಾರೆ. ಅವರು ‘ಚಕ್ದಾ ಎಕ್ಸ್ಪ್ರೆಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ರಿಲೀಸ್ ಆಗಬೇಕಿತ್ತು. ಆದರೆ, ಕೆಲಸಗಳು ವಿಳಂಬ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:49 am, Mon, 10 March 25