ಮನರಂಜನೆ ನೀಡೋಕೆ ಒಟ್ಟಾಗಿ ಬರ್ತಿವೆ ಸರಿಗಮಪ, ಕಾಮಿಡಿ ಕಿಲಾಡಿಗಳು ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

|

Updated on: May 26, 2021 | 4:25 PM

ಅನುಶ್ರೀ ನಿರೂಪಣೆಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಸರಿಗಮಪ’, ನಟ ಮಾಸ್ಟರ್ ಆನಂದ್ ನಿರೂಪಣೆಯ ‘ಕಾಮಿಡಿ ಕಿಲಾಡಿ’ ಜನರಿಗೆ ಮನರಂಜನೆ ನೀಡಿದೆ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವವರಿಗೆ ಈ ಮಹಾಸಂಭ್ರಮ ಸಾಕಷ್ಟು ಮನರಂಜನೆ ನೀಡುವ ನಿರೀಕ್ಷೆ ಇದೆ.

ಮನರಂಜನೆ ನೀಡೋಕೆ ಒಟ್ಟಾಗಿ ಬರ್ತಿವೆ ಸರಿಗಮಪ, ಕಾಮಿಡಿ ಕಿಲಾಡಿಗಳು ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್
ಮಹಾ ಸಂಭ್ರಮ
Follow us on

ಕೊವಿಡ್​ ನಿಯಂತ್ರಣಕ್ಕೆ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಹೀಗಾಗಿ, ಜನರೆಲ್ಲರೂ ಮನೆಯಲ್ಲೇ ಕುಳಿತಿದ್ದಾರೆ. ಈ ವೇಳೆ ಮನರಂಜನೆಗಾಗಿ, ಟಿವಿ ಮೊರೆ ಹೋಗುತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಲು ವಾಹಿನಿಗಳು ಕೂಡ ಮುಂದಾಗಿದ್ದು, ಸಾಕಷ್ಟು ಮನರಂಜನಾ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ಈಗ ಜೀ ಕನ್ನಡ ವಾಹಿನಿ ಇದೇ ಭಾನುವಾರ (ಮೇ 30)  ಸಂಜೆ 7.30ಕ್ಕೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಸರಿಗಮಪ’ ಹಾಗೂ ‘ಕಾಮಿಡಿ ಕಿಲಾಡಿಗಳು’ ಮಹಾಸಂಭ್ರಮ ಸಂಚಿಕೆ ಪ್ರಸಾರ ಮಾಡುತ್ತಿದೆ.

ಜೀ ಕನ್ನಡದಲ್ಲಿ ಆರಂಭವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಾಜ್ಯದ ಸಾಕಷ್ಟು ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಿದೆ. ‘ಸರಿಗಮಪ’ ರಾಜ್ಯದ ಗಾಯಕರಿಗೆ ವೇದಿಕೆ ಆಗಿದೆ. ಇನ್ನು, ಕಾಮಿಡಿ ಕಿಲಾಡಿಗಳು ವೀಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ರಂಜಿಸಿವೆ. ಈ ಮೂರು ಜನಪ್ರಿಯ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ.

ಅನುಶ್ರೀ ನಿರೂಪಣೆಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಸರಿಗಮಪ’, ನಟ ಮಾಸ್ಟರ್ ಆನಂದ್ ನಿರೂಪಣೆಯ ‘ಕಾಮಿಡಿ ಕಿಲಾಡಿ’ ಜನರಿಗೆ ಮನರಂಜನೆ ನೀಡಿದೆ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವವರಿಗೆ ಈ ಮಹಾಸಂಭ್ರಮ ಸಾಕಷ್ಟು ಮನರಂಜನೆ ನೀಡುವ ನಿರೀಕ್ಷೆ ಇದೆ.

ಕೊವಿಡ್​ ಎರಡನೇ ಅಲೆ ಜೋರಾಗಿದೆ. ಹೀಗಾಗಿ, ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಶೂಟಿಂಗ್​ ನಿಲ್ಲಿಸಲಾಗಿದೆ. ಹೀಗಾಗಿ, ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕೆಲ ಧಾರಾವಾಹಿಗಳ ಪ್ರಸಾರ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆ ಇದೆ. ಲಾಕ್​ಡೌನ್​ ಪೂರ್ಣಗೊಂಡ ನಂತರದಲ್ಲಿ ಮತ್ತೆ ಶೂಟಿಂಗ್​ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: Megha Shetty: ಲಾಕ್​ಡೌನ್​ನಲ್ಲಿ ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ದಿನಚರಿ ಏನು? ಮನೆಯಲ್ಲಿದ್ದು ಏನ್​ ಮಾಡ್ತಿದ್ದಾರೆ ಕರಾವಳಿ ಬೆಡಗಿ?