Important Days in April 2023: 2023ರ ಏಪ್ರಿಲ್ ತಿಂಗಳಿನ ವಿಶೇಷ ದಿನಗಳ ಮಾಹಿತಿ ಇಲ್ಲಿದೆ

April 2023 Events Calendar: ಏಪ್ರಿಲ್ 2023ರ ಅತ್ಯಂತ ಗಮನಾರ್ಹ ಹಬ್ಬಗಳನ್ನು ಪಟ್ಟಿ ಮಾಡಲಾಗಿದ್ದು, ಹಿಂದೂ, ಸಿಖ್, ಮತ್ತು ಇತರ ಧರ್ಮಗಳ ಹಬ್ಬಗಳ ಕುರಿತು ಇಲ್ಲಿದೆ ಮಾಹಿತಿ.

Important Days in April 2023: 2023ರ ಏಪ್ರಿಲ್ ತಿಂಗಳಿನ ವಿಶೇಷ ದಿನಗಳ ಮಾಹಿತಿ ಇಲ್ಲಿದೆ
April 2023 Events Calendar
Follow us
| Updated By: ಅಕ್ಷತಾ ವರ್ಕಾಡಿ

Updated on:Mar 31, 2023 | 5:49 PM

ಏಪ್ರಿಲ್ ತಿಂಗಳು ಹಿಂದೂ, ಸಿಖ್, ಕ್ರಿಶ್ಚಿಯನ್, ಬೆಂಗಾಲಿ ಮತ್ತು ಇತರ ಧರ್ಮಗಳ ಹಬ್ಬಗಳನ್ನು ಒಟ್ಟಿಗೆ ಸ್ವಾಗತಿಸುತ್ತಿದೆ. ಏಪ್ರಿಲ್ 2023ರ ಅತ್ಯಂತ ಗಮನಾರ್ಹ ಹಬ್ಬಗಳನ್ನು ಪಟ್ಟಿ ಮಾಡಲಾಗಿದ್ದು, ಅದರ ಹಿಂದಿನ ಉದ್ದೇಶವನ್ನು ಅಡಕ ಮಾಡಲಾಗಿದೆ. ಈ ತಿಂಗಳಿನಲ್ಲಿ ಸಾಲು ಸಾಲೇ ಹಬ್ಬಗಳಿದ್ದು ಅವುಗಳ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

ಕಾಮದ ಏಕಾದಶಿ (ಏಪ್ರಿಲ್ 1 ):

ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಕಾಮದ ಏಕಾದಶಿ ಎಂದು ಕರೆಯಲಾಗುತ್ತದೆ. ರಾಮ ನವಮಿಯ ನಂತರ ಬರುವ ಈ ಏಕಾದಶಿಯು ದುಃಖ ಮತ್ತು ಬಡತನವನ್ನು ಹೋಗಲಾಡಿಸುತ್ತದೆ ಮತ್ತು ಇಷ್ಟಾರ್ಥಗಳನ್ನು ಪೂರೈಸುತ್ತದೆ ಎನ್ನುವ ನಂಬಿಕೆಯಿದೆ. ಈ ಬಾರಿ ಹಬ್ಬವನ್ನು ಏಪ್ರಿಲ್ 1ರಂದು ಆಚರಿಸಲಾಗುತ್ತದೆ.

ಮಹಾವೀರ ಜಯಂತಿ (ಏಪ್ರಿಲ್ 4):

ಭಗವಾನ್ ಮಹಾವೀರರ ಜನ್ಮದಿನದ ಸಲುವಾಗಿ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಮಹಾವೀರ ಜಯಂತಿ ಜೈನ ಧರ್ಮ(‌Jainism)ದ ಪ್ರಮುಖ ಹಬ್ಬವಾಗಿದ್ದು, ಮಹಾವೀರ ಜಯಂತಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಂದು ಆಚರಿಸಲಾಗುತ್ತದೆ. ಅಂದರೆ ಈ ಏಪ್ರಿಲ್ 4 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಚೈತ್ರ ಪೂರ್ಣಿಮಾ (ಏಪ್ರಿಲ್ 6):

ಚೈತ್ರ ಮಾಸದಲ್ಲಿ ಬರುವ ಪೂರ್ಣಿಮೇಯ ತಿಥಿಗೆ ಚೈತ್ರ ಪೂರ್ಣಿಮಾ ಎಂಬುದಾಗಿ ಸಂಬೋಧಿಸಲಾಗುತ್ತದೆ. ಏಪ್ರಿಲ್ 6ರಂದು ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಸೂರ್ಯೋದಯಕ್ಕೆ ಮುಂಚೆಯೇ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಭಗವಾನ್ ವಿಷ್ಣು ಮತ್ತು ಹನುಮಂತನಿಗೆ ಪೂಜೆ, ಪ್ರಾರ್ಥನೆಗಳನ್ನು ಮಾಡಿ ಸತ್ಯನಾರಾಯಣ ಕಥಾ ಪಠಿಸಿ ಶುದ್ಧ ಆಹಾರ ತಯಾರಿಸಿ ಹಬ್ಬ ಮಾಡಲಾಗುತ್ತದೆ. ಬೇರೆ ಬೇರೆ ಕಡೆ ಮಾಡುವ ನಿಯಮ ಬದಲಾಗಿರಬಹುದು. ಚೈತ್ರ ಪೂರ್ಣಿಮೆಯನ್ನು ಚೇತಿ ಪುನಂ ಎಂದೂ ಕರೆಯುತ್ತಾರೆ. ಈ ಉಪವಾಸವು ಒಬ್ಬ ವ್ಯಕ್ತಿಗೆ ಭಗವಾನ್ ಸತ್ಯನಾರಾಯಣ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತದೆ.

ಹನುಮ ಜಯಂತಿ( ಏಪ್ರಿಲ್ 6 ):

ಚೈತ್ರ ಮಾಸದಲ್ಲಿ ಹನುಮಂತನ ಜನ್ಮದ ಸ್ಮರಣಾರ್ಥ ಈ ಹಬ್ಬವನ್ನು ಹಿಂದೂಗಳು ಆಚರಿಸುತ್ತಾರೆ. ಅವತ್ತಿನ ದಿನ ಹನುಮಂತನ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಬಾರಿ ಏಪ್ರಿಲ್ 6 ರಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ.

ಗುಡ್ ಫ್ರೈಡೆ,ಶುಭ ಶುಕ್ರವಾರ (ಏಪ್ರಿಲ್ 7):

ಈ ಭಾರಿ ಏಪ್ರಿಲ್ 7ರಂದು ಗುಡ್ ಫ್ರೈಡೆ ಆಚರಿಸಲಾಗುತ್ತದೆ. ಅನೇಕ ಕ್ರೈಸ್ತರು ಶುಭ ಶುಕ್ರವಾರದಂದು ಚರ್ಚ್​ಗೆ ತೆರಳಿ ವಿಶೇಷ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಮನೆಯಲ್ಲಿ ಬೈಬಲ್​ನ ಪದ್ಯಗಳನ್ನು ಓದಿ ಯೇಸುಕ್ರಿಸ್ತನ ತ್ಯಾಗವನ್ನು ಸ್ಮರಿಸುತ್ತಾರೆ. ಇನ್ನು ಕೆಲವರು ಮೆರವಣಿಗೆಗಳಲ್ಲಿ ಅಥವಾ ಬಯಲು ನಾಟಕಗಳಲ್ಲಿ ಭಾಗವಹಿಸುತ್ತಾರೆ.

ಸಂಕಷ್ಟ ಚತುರ್ಥಿ (ಏಪ್ರಿಲ್ 9 ):

ಜೀವನದ ಎದುರಾಗುವ ಎಲ್ಲಾ ಅಡೆತಡೆಗಳಿಂದ ಮುಕ್ತಿ ಹೊಂದಲು, ಸಕಲ ಸಂಕಷ್ಟಗಳನ್ನು ದೂರಾಗಿಸಿಕೊಳ್ಳಲು ಈ ದಿನ ಗಣೇಶನನ್ನು ಪೂಜಿಸಲಾಗುತ್ತದೆ. ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಏಪ್ರಿಲ್ 9 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಈಸ್ಟರ್ (ಏಪ್ರಿಲ್ 9):

ಈಸ್ಟರ್ ಅನ್ನು ಕ್ರಿಶ್ಚಿಯನ್ ಸಮುದಾಯದ ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನವು ಯೇಸು ಕ್ರಿಸ್ತನ ಪುನರುತ್ಥಾನವನ್ನು ಸೂಚಿಸುತ್ತದೆ. ಈ ವರ್ಷ, ಈಸ್ಟರ್ ಅನ್ನು ಏಪ್ರಿಲ್ 9ರಂದು ಆಚರಿಸಲಾಗುತ್ತಿದೆ.

ವಿಷು, ಬಿಸು (ಏಪ್ರಿಲ್ 15):

ಕೆಲವೆಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ ಕೆಲವು ಕಡೆ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಬಿಸು, ವಿಷು ಎಂದೂ ಕರ್ನಾಟಕದ ಕೆಲವು ಭಾಗಗಳಲ್ಲಿ ಕರೆಯುತ್ತಾರೆ. ವೈದಿಕ ಪಂಚಾಂಗದ ಪ್ರಕಾರ ಏಪ್ರಿಲ್ 15ರಂದು ಸೌರಮಾನ ಯುಗಾದಿ ಎಂದು ಆಚರಿಸಲಾಗುವುದು.

ವರೂಥಿನಿ ಏಕಾದಶಿ (ಏಪ್ರಿಲ್ 16 ):

ಏಪ್ರಿಲ್‌ 16 ರಂದು ವರೂಥಿನಿ ಏಕಾದಶಿಯನ್ನು ಆಚರಿಸಲಾಗುವುದು. ಈ ಫಲವು ಹತ್ತು ಸಾವಿರ ವರ್ಷಗಳ ತಪಸ್ಸಿಗೆ ಸಮಾನವೆಂದು ನಂಬಲಾಗಿದೆ. ಚೈತ್ರ ಮಾಸದ ಕೃಷ್ಣ ಪಕ್ಷದ ಈ ಏಕಾದಶಿಯು ಎಲ್ಲಾ ಪಾಪಗಳನ್ನು ನಾಶಪಡಿಸುತ್ತದೆ, ಅದೃಷ್ಟವನ್ನು ನೀಡುತ್ತದೆ ಮತ್ತು ಅಂತಿಮವಾಗಿ ಮೋಕ್ಷವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ.

ಈದ್ ಅಲ್-ಫಿತರ್ (ಏಪ್ರಿಲ್ 21):

ರಂಜಾನ್ ತಿಂಗಳು ಮುಗಿದ ನಂತರ ಬರುವ ಈದ್ ಉಲ್ ಫಿತರ್ ಅಥವಾ ಈದ್-ಅಲ್-ಫಿತರ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಮ್ ಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಹತ್ತನೇ ತಿಂಗಳಾದ ಶಾವಾಲ್‌ನ ಮೊದಲ ದಿನದಂದು ಇದನ್ನು ಆಚರಿಸಲಾಗುತ್ತದೆ. ಈ ವರ್ಷ, ಈದ್ ಉಲ್ ಫಿತರ್ ಏಪ್ರಿಲ್ 21 ರಂದು ಬಂದಿದೆ.

ಇದನ್ನೂ ಓದಿ: ಕರ್ನಾಟಕದ ಪ್ರಮುಖ 15 ದೇವಾಲಯಗಳು: ಜೀವನದಲ್ಲಿ ಒಮ್ಮೆಯಾದ್ರೂ ಈ ದೇವಸ್ಥಾನಗಳಿಗೆ ಭೇಟಿ ನೀಡಲೇಬೇಕು

ಅಕ್ಷಯ ತೃತೀಯ (ಏಪ್ರಿಲ್ 22):

ಅಕ್ಷಯ ತೃತೀಯಾ (ಅಕ್ಷಯ ತದಿಗೆ) ಹಿಂದೂ ಮತ್ತು ಜೈನ ಧರ್ಮೀಯರಿಗೆ ಮಂಗಳಕರವಾದ ದಿನವಾಗಿದ್ದು, ವೈಶಾಖ ಮಾಸದ ಶುಕ್ಲ ಪಕ್ಷ ಮೂರನೇಯ ದಿನ(ತದಿಗೆ)ದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನ ಖರೀದಿಸಿದ ಬಂಗಾರವು ಎಂದಿಗೂ ಅಕ್ಷಯವಾಗಿ ಉಳಿಯುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ಏಪ್ರಿಲ್ 22ರಂದು ಈ ಹಬ್ಬ ಆಚರಿಸಲಾಗುತ್ತದೆ.

ಶಂಕರಾಚಾರ್ಯ ಜಯಂತಿ (ಏಪ್ರಿಲ್ 25):

ಶ್ರೇಷ್ಠ ಮಹಾಪುರಷರೆಂದು ಗುರುತಿಸಲ್ಪಟ್ಟವರಲ್ಲಿ ಶಂಕರಾಚಾರ್ಯರು ಪ್ರಮುಖರು. ಶ್ರೀ ಶಂಕರರು ಜನಿಸಿದ ದಿನ ವೈಶಾಖ ಶುಕ್ಲ ಪಂಚಮಿಯ ದಿನವಾದ್ದರಿಂದ ಪ್ರತೀ ವರ್ಷ ಇದೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 25ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಗಂಗಾ ಸಪ್ತಮಿ( ಏಪ್ರಿಲ್ 27):

ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಪ್ರಾರ್ಥಿಸಿ, ಜೇಷ್ಠಮಾಸ‌ ದಶಮಿಯಂದು ಭೂಲೋಕಕ್ಕೆ ಕರೆತಂದರು. ಹಾಗಾಗಿ ಈ ದಿನವನ್ನು ಗಂಗಾವತರಣ ದಿನ ಎಂದು ಕರೆಯಲಾಗುತ್ತದೆ. ಈ ದಿನ ಮತ್ತೊಂದು ವಿಶೇಷ ಭಗೀರಥ ಜಯಂತಿಯೂ ಹೌದು. ಈ ವರ್ಷ ಏಪ್ರಿಲ್ 27 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಸೀತಾ ನವಮಿ( ಏಪ್ರಿಲ್ 29):

ವೈಶಾಖ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಸೀತಾ ಮಾತೆ ಪ್ರಕಟಗೊಂಡಳು ಎನ್ನುವ ನಂಬಿಕೆಯಿದೆ. ಹಾಗಾಗಿ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಸರಿಯಾಗಿ ರಾಮನವಮಿಯ ಒಂದು ತಿಂಗಳ ನಂತರ ಸೀತಾ ಜಯಂತಿ ಬರುತ್ತದೆ. ಈ ಬಾರಿ ಏಪ್ರಿಲ್ 29 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಲೇಖನ: ಪ್ರೀತಿ ಭಟ್​, ಗುಣವಂತೆ

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:49 pm, Fri, 31 March 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ