Champa Shashti 2022: ಚಂಪಾಷಷ್ಠಿಯ ದಿನಾಂಕ, ಪೂಜಾವಿಧಾನ, ಮಹತ್ವದ ಬಗ್ಗೆ ತಿಳಿಯಿರಿ

ಚಂಪಾ ಷಷ್ಠಿಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಆರನೇ ದಿನದಂದು ಆಚರಿಸಲಾಗುತ್ತದೆ. ಚಂಪಾ ಷಷ್ಠಿಯನ್ನು ಈ ಬಾರಿ ನವೆಂಬರ್ 29ರಂದು ಆಚರಿಸಲಾಗುತ್ತಿದೆ.

Champa Shashti 2022: ಚಂಪಾಷಷ್ಠಿಯ ದಿನಾಂಕ, ಪೂಜಾವಿಧಾನ, ಮಹತ್ವದ ಬಗ್ಗೆ ತಿಳಿಯಿರಿ
Champa Shashti
TV9kannada Web Team

| Edited By: Nayana Rajeev

Nov 24, 2022 | 11:14 AM

ಚಂಪಾ ಷಷ್ಠಿ(Champa Shashti)ಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಆರನೇ ದಿನದಂದು ಆಚರಿಸಲಾಗುತ್ತದೆ. ಚಂಪಾ ಷಷ್ಠಿಯನ್ನು ಈ ಬಾರಿ ನವೆಂಬರ್ 29ರಂದು ಆಚರಿಸಲಾಗುತ್ತಿದೆ. ಚಂಪಾ ಷಷ್ಠಿಯ ಉಪವಾಸವನ್ನು ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಶಿವ ಮತ್ತು ಅವನ ಹಿರಿಯ ಮಗ ಕಾರ್ತಿಕೇಯನನ್ನು ಪೂಜಿಸಲಾಗುತ್ತದೆ. ಈ ದಿನದಂದು ಉಪವಾಸ ಮತ್ತು ಪೂಜೆಯಿಂದ ಪಾಪಗಳು ನಿವಾರಣೆಯಾಗುತ್ತದೆ, ತೊಂದರೆಗಳು ದೂರವಾಗುತ್ತವೆ, ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗುತ್ತದೆ.

ಚಂಪಾ ಷಷ್ಠಿ 2022 ದಿನಾಂಕ ಪಂಚಾಂಗದ ಪ್ರಕಾರ, ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನಾಂಕ ಸೋಮವಾರ, 28 ನವೆಂಬರ್ ಮಧ್ಯಾಹ್ನ 01.35 ಕ್ಕೆ ಪ್ರಾರಂಭವಾಗುತ್ತದೆ. ಈ ದಿನಾಂಕವು ಮರುದಿನ ನವೆಂಬರ್ 29 ಮಂಗಳವಾರ ಬೆಳಿಗ್ಗೆ 11.04 ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿ ಪ್ರಕಾರ ಚಂಪಾ ಷಷ್ಠಿಯ ಉಪವಾಸವನ್ನು ನವೆಂಬರ್ 29 ಮಂಗಳವಾರ ಆಚರಿಸಲಾಗುತ್ತದೆ.

ರವಿ ಮತ್ತು ದ್ವಿಪುಷ್ಕರ ಯೋಗದಲ್ಲಿ ಚಂಪಾ ಷಷ್ಠಿ ಈ ವರ್ಷ ಚಂಪಾ ಷಷ್ಟಿಯ ದಿನದಂದು ರವಿ ಯೋಗ ಮತ್ತು ದ್ವಿಪುಷ್ಕರ ಯೋಗ ರೂಪುಗೊಂಡಿದೆ. ಈ ದಿನ ಧ್ರುವ ಯೋಗವು ಬೆಳಿಗ್ಗೆಯಿಂದ ಮಧ್ಯಾಹ್ನ 02.53 ರವರೆಗೆ ಇರುತ್ತದೆ. ನವೆಂಬರ್ 30 ರಂದು ಬೆಳಿಗ್ಗೆ 06.55 ರಿಂದ 08.38 ರವರೆಗೆ ರವಿಯೋಗವಾದರೆ, ದ್ವಿಪುಷ್ಕರ ಯೋಗವು ಬೆಳಿಗ್ಗೆ 11.04 ರಿಂದ ಮರುದಿನ ಬೆಳಿಗ್ಗೆ 06.55 ರವರೆಗೆ ಇರುತ್ತದೆ.

ಚಂಪಾ ಷಷ್ಠಿ 2022 ಪೂಜಾ ಮುಹೂರ್ತ ಚಂಪಾ ಷಷ್ಠಿ 2022: ದಿನಾಂಕ ಮತ್ತು ಸಮಯ ಚಂಪಾ ಷಷ್ಠಿಯನ್ನು ಮಂಗಳವಾರ, 29 ನವೆಂಬರ್ 2022 ರಂದು ಆಚರಿಸಲಾಗುತ್ತದೆ. ಚಂಪಾ ಷಷ್ಠಿ ತಿಥಿಯು 28 ನವೆಂಬರ್ 2022 ರಂದು ಮಧ್ಯಾಹ್ನ 01:35 ಕ್ಕೆ ಪ್ರಾರಂಭವಾಗುತ್ತದೆ. ಚಂಪಾ ಷಷ್ಠಿ ತಿಥಿಯು 29 ನವೆಂಬರ್ 2022 ರಂದು ಬೆಳಿಗ್ಗೆ 11:04 ಕ್ಕೆ ಕೊನೆಗೊಳ್ಳುತ್ತದೆ.

ಪೂಜಾ ವಿಧಾನ ಆರಾಧಕರು ಮುಂಜಾನೆ ಎದ್ದು, ಪವಿತ್ರ ಸ್ನಾನವನ್ನು ಮಾಡುತ್ತಾರೆ ಮತ್ತು ಇಡೀ ದಿನ ಉಪವಾಸ ಮತ್ತು ಪೂಜಿಸುವ ಪ್ರತಿಜ್ಞೆಯನ್ನು ಕೈಗೊಳ್ಳುತ್ತಾರೆ. ದಕ್ಷಿಣಾಭಿಮುಖವಾಗಿ, ಕಾರ್ತಿಕೇಯನನ್ನು ಪೂಜಿಸಲಾಗುತ್ತದೆ, ತುಪ್ಪ, ಮೊಸರು ಮತ್ತು ನೀರಿನ ಅರ್ಘ್ಯ ಮತ್ತು ಕೊನೆಯದಾಗಿ ತಾಜಾ ಮತ್ತು ಪರಿಮಳಯುಕ್ತ ಹೂವುಗಳೊಂದಿಗೆ ವಿಶೇಷವಾಗಿ ಚಂಪಾವನ್ನು ಅರ್ಪಿಸಲಾಗುತ್ತದೆ.  ಕಾರ್ತಿಕೇಯನ ಆಶೀರ್ವಾದವನ್ನು ಪಡೆಯಲು ರಾತ್ರಿಯಲ್ಲಿ ನೆಲದ ಮೇಲೆ ಮಲಗಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada