AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀಲು ನೋವಿನಿಂದ ತೊಂದ್ರೆ ಆಗ್ತಾ ಇದ್ಯಾ? ಪದೇ ಪದೇ ಕಾಡುವ ಈ ಆರೋಗ್ಯ ಸಮಸ್ಯೆಗೆ ಇಲ್ಲಿದೆ ಅದ್ಭುತ ಸಲಹೆ

ಇತ್ತೀಚಿನ ದಿನಗಳಲ್ಲಿ ಕೀಲು ನೋವು ಎಲ್ಲಾ ವಯಸ್ಸಿನವರಲ್ಲಿಯೂ ಕಂಡುಬರುತ್ತಿದ್ದು ಇದನ್ನು ತಡೆಯಲು ಮಾತ್ರೆ ಬಳಕೆ ಮಾಡುವ ಬದಲು ಕೆಲವು ಸರಳ ಸಲಹೆಗಳನ್ನು ಅನುಸರಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮಳೆಗಾಲದಲ್ಲಿ, ಶೀತ, ಆರ್ದ್ರತೆ ಮತ್ತು ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ, ಕೀಲು ನೋವು ಮತ್ತು ಬಿಗಿತ ಹೆಚ್ಚಾಗುವುದು ಸಾಮಾನ್ಯ. ಆದರೆ ತಜ್ಞರು ಸೂಚಿಸಿದ ಕೆಲವು ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ, ಕೀಲು ನೋವಿನಿಂದ ಮುಕ್ತಿ ಪಡೆಯಬಹುದು.

ಕೀಲು ನೋವಿನಿಂದ ತೊಂದ್ರೆ ಆಗ್ತಾ ಇದ್ಯಾ? ಪದೇ ಪದೇ ಕಾಡುವ ಈ ಆರೋಗ್ಯ ಸಮಸ್ಯೆಗೆ ಇಲ್ಲಿದೆ ಅದ್ಭುತ ಸಲಹೆ
Monsoon Arthritis Relief
ಪ್ರೀತಿ ಭಟ್​, ಗುಣವಂತೆ
|

Updated on: Aug 22, 2025 | 6:58 PM

Share

ಮಳೆಗಾಲದಲ್ಲಿ, ಶೀತ, ಆರ್ದ್ರತೆ ಮತ್ತು ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ, ಕೀಲು ನೋವು (Joint Pain) ಮತ್ತು ಬಿಗಿತ ಹೆಚ್ಚಾಗುತ್ತದೆ. ಅದರಲ್ಲಿಯೂ ಸಂಧಿವಾತ ಇರುವವರಿಗೆ, ಈ ಋತು ಹೆಚ್ಚು ತೊಂದರೆದಾಯಕವಾಗಿರುತ್ತದೆ. ಆರೋಗ್ಯ (Health) ತಜ್ಞರು ಸೂಚಿಸಿದ ಕೆಲವು ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ, ಕೀಲು ನೋವನ್ನು ನಿರ್ವಹಿಸಬಹುದು. ಆದರೂ ಹವಾಮಾನದಲ್ಲಾಗುವ ಬದಲಾವಣೆ ಕೀಲು ನೋವು ಮತ್ತು ಕೀಲುಗಳಲ್ಲಿ ಬಿಗಿತದ ಸಂವೇದನೆಗಳನ್ನು ಹೆಚ್ಚಿಸಬಹುದು. ಇದರ ಪರಿಣಾಮ ಸಂಧಿವಾತದಂತಹ ಸಮಸ್ಯೆಗಳು ಕೂಡ ಉಲ್ಬಣಗೊಳ್ಳುತ್ತವೆ. ಆದರೆ ಈ ರೀತಿಯ ಸಮಸ್ಯೆಯನ್ನು ತಪ್ಪಿಸಲು ತಜ್ಞರು ನೀಡಿರುವ ಕೆಲವು ಸಲಹೆಗಳನ್ನು ತಪ್ಪದೆ ಪಾಲಿಸಬೇಕು. ಆ ಮೂಲಕ ಇಂತಹ ಸಮಸ್ಯೆಯನ್ನು ಬುಡ ಸಮೇತ ನಿರ್ಮೂಲನೆ ಮಾಡಬಹುದು. ಹಾಗಾದರೆ ಈ ಬಗೆಗಿನ ಮತ್ತಷ್ಟು ಮಾಹಿತಿ ಇಲ್ಲಿದೆ.

ಕೀಲು ನೋವನ್ನು ತಡೆಯಲು ಈ ಸಲಹೆಯನ್ನು ತಪ್ಪದೆ ಪಾಲಿಸಿ:

  • ಕೀಲುಗಳಲ್ಲಿ ಉಂಟಾಗುವ ಬಿಗಿತ ಹೆಚ್ಚಾಗುವುದನ್ನು ತಡೆಯಲು ಮೊಣಕಾಲು ಮತ್ತು ಬೆನ್ನಿನ ಕೆಳಭಾಗದಲ್ಲಿ ಬೆಚ್ಚಗಿರುವ ಬಟ್ಟೆಗಳನ್ನು ಧರಿಸುವುದು ಬಹಳ ಮುಖ್ಯವಾಗಿದೆ. ಒದ್ದೆಯಾದ ಬಟ್ಟೆ, ಬೂಟು, ಚಪ್ಪಲಿಗಳನ್ನು ದೀರ್ಘಕಾಲದ ವರೆಗೆ ಧರಿಸುವುದನ್ನು ತಪ್ಪಿಸಬೇಕು.
  • ಪ್ರತಿನಿತ್ಯ ಮನೆಯಲ್ಲಿಯೇ ಲಘು ವ್ಯಾಯಾಮ ಮಾಡುವುದು ಅಥವಾ ನಡೆಯುವುದು, ಯೋಗ ಮತ್ತು ಹಿಗ್ಗಿಸುವಿಕೆಯಂತಹ ಚಟುವಟಿಕೆಗಳು ಕೀಲಿನ ಚಲನಶೀಲತೆಯನ್ನು ಸುಧಾರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆದರೆ ಆರ್ದ್ರ ಸ್ಥಳಗಳಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸುವುದು ಬಹಳ ಉತ್ತಮ.
  • ಉರಿಯೂತವನ್ನು ಕಡಿಮೆ ಮಾಡಲು ಒಮೆಗಾ -3 ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು. ಅಂದರೆ ಅಗಸೆ ಬೀಜ, ವಾಲ್ನಟ್ಸ್ ಮತ್ತು ಮೀನುಗಳನ್ನು ಹೆಚ್ಚು ಸೇವನೆ ಮಾಡಬೇಕು.
  • ಅರಿಶಿನ, ಶುಂಠಿ ಮತ್ತು ತಾಜಾ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಉಪ್ಪು ಮತ್ತು ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಏಕೆಂದರೆ ಅವು ಉರಿಯೂತವನ್ನು ಹೆಚ್ಚಿಸುತ್ತವೆ.
  • ಮಳೆಗಾಲದಲ್ಲಿ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಬಹಳ ಕಡಿಮೆಯಾಗುತ್ತದೆ, ಇದು ವಿಟಮಿನ್ ಡಿ ಕಡಿಮೆಯಾಗಲು ಕಾರಣವಾಗುತ್ತದೆ. ಆದ್ದರಿಂದ, ವಿಟಮಿನ್ ಡಿ ಪೂರಕಗಳಾದ, ಹಾಲು, ಪನೀರ್ ಮತ್ತು ಸೊಪ್ಪನ್ನು ಸೇವನೆ ಮಾಡುವುದು ಬಹಳ ಮುಖ್ಯ.
  • ನೀವು ಅಧಿಕ ತೂಕ ಹೊಂದಿದ್ದರೆ, ನಿಮ್ಮ ಮೊಣಕಾಲುಗಳು ಮತ್ತು ಕೀಲುಗಳ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಸಣ್ಣ ತೂಕ ನಷ್ಟವು ಸಹ ನೋವನ್ನು ಕಡಿಮೆ ಮಾಡುತ್ತದೆ.
  • ಬೆಚ್ಚಗಿನ ಪ್ಯಾಕ್ ಬಳಸುವುದರಿಂದ ನೋವು ನಿವಾರಣೆಯಾಗುತ್ತದೆ. ಬೆಚ್ಚಗಿನ ನೀರಿನಲ್ಲಿ ಉಪ್ಪಿನೊಂದಿಗೆ ಸ್ನಾನ ಮಾಡುವುದರಿಂದಲೂ ಪರಿಹಾರ ಸಿಗುತ್ತದೆ.
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡ ಬಹಳ ಮುಖ್ಯ. ಏಕೆಂದರೆ ಕಡಿಮೆ ನೀರು ಕುಡಿದರೆ, ಕೀಲುಗಳಲ್ಲಿನ ದ್ರವಗಳು ಗಟ್ಟಿಯಾಗುತ್ತವೆ, ಚಲನೆಗೆ ಕಷ್ಟಕರವಾಗುತ್ತವೆ. ಆದ್ದರಿಂದ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.
  • ಮನೆಯಲ್ಲಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಕೀಲುಗಳು ಒತ್ತಡಕ್ಕೊಳಗಾಗಬಹುದು. ಪ್ರತಿ 45 ನಿಮಿಷಗಳಿಗೊಮ್ಮೆ ಎದ್ದುನಿಂತು ಹಿಗ್ಗಿಸುವುದು. ಕುಳಿತುಕೊಳ್ಳುವಾಗ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಬಹಳ ಅವಶ್ಯ.
  • ಮಳೆಗಾಲದಲ್ಲಿ ಎಚ್ಚರಿಕೆಯಿಂದ ನಡೆಯಬೇಕು. ಏಕೆಂದರೆ ಈ ಸಮಯದಲ್ಲಿ ಜಾರಿಬೀಳುವ ಅಪಾಯ ಹೆಚ್ಚು. ಆದ್ದರಿಂದ, ಆಂಟಿ- ಸ್ಲಿಪ್ ಶೂಗಳನ್ನು ಬಳಸಿ. ಜೊತೆಗೆ ಒದ್ದೆಯಾದ ಪ್ರದೇಶಗಳಲ್ಲಿ ನಡೆಯುವುದನ್ನು ತಪ್ಪಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ